Site icon Vistara News

Viral Video | ಬಾನೆತ್ತರದಲ್ಲಿ ಪರಸ್ಪರ ಕೊಕ್ಕು ಸ್ಪರ್ಶಿಸಿಕೊಂಡ ಹಾರ್ನ್​ ಬಿಲ್​ ಪಕ್ಷಿಗಳು; ಕಾಳಗವೋ? ಮುದ್ದಾಟವೋ?!

Viral Video Of Great Hornbills

ಪ್ರಾಣಿ-ಪಕ್ಷಿಗಳು ಸೇರಿ ಎಲ್ಲ ರೀತಿಯ ಜೀವಿಗಳ ಬದುಕೂ ತುಂಬ ಕುತೂಹಲಕಾರಿ ಎನ್ನಿಸುತ್ತದೆ. ಅದರಲ್ಲೂ ಭೂಮಿ ಮೇಲೆ ಓಡಾಡಿಕೊಂಡಿರುವ ಪ್ರಾಣಿಗಳ ಚಲನವಲನ ನಮಗೆ ಆಪ್ತವಾದಷ್ಟು ಆಕಾಶದಲ್ಲಿ ಹಾರುವ ಪಕ್ಷಿಗಳ ರೆಕ್ಕೆ ಬಡಿತ, ಅವುಗಳ ಚಲನೆ ನಮಗೆ ಹತ್ತಿರವಾಗುವುದಿಲ್ಲ. ಬಾನೆತ್ತರದಲ್ಲಿ ಹಾರುವ, ಅಲ್ಲೆಲ್ಲೋ ಮರದ ಮೇಲೆ ಕುಳಿತ ಹಕ್ಕಿಗಳ ಮೇಲೆ ನಮ್ಮ ಗಮನ ಅಷ್ಟು ಬೇಗ ಹೋಗುವುದೂ ಇಲ್ಲ. ಪಕ್ಷಿಪ್ರಿಯರಿಗೆ ಇದು ಅನ್ವಯ ಅಲ್ಲ. ಅದೇನೇ ಇರಲಿ, ನೀವು ನಿಮ್ಮ ಸುತ್ತಲಿನ ಪಕ್ಷಿಗಳನ್ನು ಗಮನಿಸಿ ಬಿಡಿ, ಆದರೆ ನಾವಿಲ್ಲಿ ಈ ಸ್ಟೋರಿಯೊಟ್ಟಿಗೆ ಹಾಕಿರುವ ವಿಡಿಯೊವನ್ನು ಮಾತ್ರ ಮಿಸ್​ ಮಾಡ್ಬೇಡಿ.

ಇದು ಹಾರ್ನ್ ​​ಬಿಲ್​ (ದಾಸಮಂಗಟ್ಟೆ) ಪಕ್ಷಿಗಳ ವಿಡಿಯೊ. ತಮಿಳುನಾಡಿನಲ್ಲಿ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿರುವ ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಎಂಬುವರು ಇದನ್ನು ಶೇರ್​ ಮಾಡಿಕೊಂಡಿದ್ದಾರೆ. ‘ಆಕಾಶದೆತ್ತರದಲ್ಲಿ ಹಾರುತ್ತಿರುವ ಮೂರು ಹಾರ್ನ್​ ಬಿಲ್​ ಪಕ್ಷಿಗಳ ವಿಡಿಯೊ ಇದು. ಅದರಲ್ಲಿ ಎರಡು ಪಕ್ಷಿಗಳು ಕಾಳಗ ಮಾಡುತ್ತಿವೆಯೆನೋ ಎಂಬಂತೆ ಹಾರಾಡುತ್ತಿವೆ. ಸುತ್ತಲೂ ತಿರುಗುತ್ತ, ಅಲ್ಲಲ್ಲೇ ಸುತ್ತುತ್ತ ಪರಸ್ಪರ ತಮ್ಮ ಕೊಕ್ಕುಗಳನ್ನು ಒಂದಕ್ಕೊಂದು ತಗುಲಿಸಿಕೊಳ್ಳುತ್ತಿವೆ. ಇದನ್ನು ನೋಡಿದ ಕೆಲವರು ಅದು ಕಾಳಗವಲ್ಲ, ಬಾನೆತ್ತರದಲ್ಲಿ ಈ ಎರಡೂ ಪಕ್ಷಿಗಳು ಮುದ್ದಾಟ ಮಾಡಿಕೊಳ್ಳುತ್ತಿವೆ, ಪರಸ್ಪರ ಚುಂಬಿಸಿಕೊಳ್ಳುತ್ತಿವೆ ಎಂದೂ ಹೇಳಿದ್ದಾರೆ.

ಈ ಎರಡೂ ಹಾರ್ನ್​​ಬಿಲ್​​ಗಳು ಹೀಗೆ ಒಂದೆರಡು ಸುತ್ತು ಹಾರಾಡುವಷ್ಟರಲ್ಲಿ ಅಲ್ಲಿಗೆ ಇನ್ನೊಂದು ಹಾರ್ನ್​ ಬಿಲ್​ ಬರುವುದನ್ನೂ ವಿಡಿಯೊದಲ್ಲಿ ನೋಡಬಹುದು. ನೆಟ್ಟಿಗರೂ ಈ ವಿಡಿಯೊ ನೋಡಿ ಫುಲ್ ಖುಷಿಯಾಗಿದ್ದಾರೆ. ನೀವು ನೋಡಿ, ಈ ಹಕ್ಕಿಗಳದ್ದು ಕಾಳಗವೋ/ರೊಮ್ಯಾನ್ಸೋ? ನಿಮಗೇನು ಅನ್ನಿಸುತ್ತದೆ? ಇದು ತಮಿಳುನಾಡಿನಲ್ಲಿಯೇ ಕಂಡು ಬಂದ ದೃಶ್ಯ ಎಂದು ಸುಪ್ರಿಯಾ ಸಾಹು ತಿಳಿಸಿದ್ದಾರೆ.

ಇದನ್ನೂ ಓದಿ: Viral Video | ಹುಡುಗಿಯರ ಮಸ್ತ್ ಡ್ಯಾನ್ಸ್, ಬೆಸ್ಟ್‌ನಲ್ಲಿ ಬೆಸ್ಟ್ ಅಂತಿದ್ದಾರೆ ನೆಟ್ಟಿಗರು

Exit mobile version