Site icon Vistara News

Viral Video: ಡ್ರೆಸ್ ಭಾರತದ್ದು ಡ್ಯಾನ್ಸ್ ವಿದೇಶದ್ದು! ಆಂಟಿ ನಿಮ್ಮ ಸ್ಟೆಪ್ಸ್ ಸಕತ್‌

saree lady dance viral

#image_title

ಬೆಂಗಳೂರು: ಸಾಮಾಜಿಕ ಜಾಲತಾಣ ಒಂದು ರೀತಿಯಲ್ಲಿ ತೆರೆದ ವೇದಿಕೆ. ಇಲ್ಲಿ ಎಲ್ಲರಿಗೂ ತಮ್ಮ ಪ್ರತಿಭೆ ತೋರಿಸಿಕೊಳ್ಳಲು ಅವಕಾಶವಿದೆ. ಈ ಸದವಕಾಶ ಬಳಸಿಕೊಂಡು ಸಾಕಷ್ಟು ಜನರು ಪ್ರತಿಭೆ ತೋರಿಸಿ ಸಾಧನೆಗಳನ್ನು ಮಾಡಿದ್ದಾರೆ ಕೂಡ. ಅದೇ ರೀತಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೃತ್ಯದ ಪ್ರತಿಭೆ ತೋರಿಸಿದ್ದು, ಅದು ವೈರಲ್‌ (Viral Video) ಆಗಿದೆ.

ಪ್ಲೇಯರ್ಸ್‌ ಎಕ್ಸ್‌ ಸೇ ಇಟ್‌ ರೈಟ್‌ ಮ್ಯಾಷಪ್‌ ಇನ್‌ಸ್ಟಾಗ್ರಾಂನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಾಕಷ್ಟು ಮಂದಿ ಈ ಹಾಡಿಗೆ ನೃತ್ಯ ಮಾಡಿ ರೀಲ್ಸ್‌ ಆಗಿ ಹರಿಬಿಡುತ್ತಿದ್ದಾರೆ. ಅದೇ ರೀತಿಯಲ್ಲಿ ಏಜೆಂಟ್‌ ಟೀನಾ ಅಫಿಶಿಯಲ್‌ ಹೆಸರಿನ ಖಾತೆಯಲ್ಲಿ ಟೀನಾ ಅವರೂ ಕೂಡ ಈ ಹಾಡಿಗೆ ರೀಲ್ಸ್‌ ಮಾಡಿದ್ದಾರೆ. ಕೇಸರಿ ಬಣ್ಣದ ಸೀರೆ, ಹಸಿರು ಬಣ್ಣದ ದುಪ್ಪಟ್ಟ, ತಲೆಯಲ್ಲಿ ಹೂವು, ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಟೀನಾ ಈ ಹಾಡಿಗೆ ನೃತ್ಯ ಮಾಡಿದ್ದಾರೆ.

ಇದನ್ನೂ ಓದಿ: Viral Video : ಇದು ನಾಯಿಯಲ್ಲ, ಭಯಂಕರ ಕಲಾವಿದ! ನೆಟ್ಟಿಗರು ಹೀಗಂದಿದ್ದೇಕೆ? ವಿಡಿಯೊ ನೋಡಿ!
ಭಾರತೀಯ ಉಡುಗೆಯಲ್ಲಿ ವಿದೇಶಿ ಹಾಡಿಗೆ ಎಲ್ಲರೂ ನಾಚುವಂತೆ ಟೀನಾ ನೃತ್ಯ ಮಾಡಿದ್ದಾರೆ. ಅವರು ತಮ್ಮ ರೀಲ್ಸ್‌ ಅನ್ನು ಏಪ್ರಿಲ್‌ 25ರಂದು ಹಂಚಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡಿದೆ. ಹಾಗೆಯೇ 82 ಸಾವಿರಕ್ಕೂ ಅಧಿಕ ಮಂದಿ ವಿಡಿಯೊವನ್ನು ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಶೇರ್‌ ಮಾಡಿಕೊಂಡಿದ್ದಾರೆ.


ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದೆ. “ಟೀನಾ ನೀವೇ ಬೆಸ್ಟ್‌”, “ಈ ಹಾಡಿಗೆ ಸಾಕಷ್ಟು ಜನರು ನೃತ್ಯ ಮಾಡಿದ್ದಾರೆ. ಆದರೆ ಅವರೆಲ್ಲರಲ್ಲಿ ನೀವೇ ದಿ ಬೆಸ್ಟ್”‌, “ಅಬ್ಬಬ್ಬಾ, ಅಪ್ಪಟ ದೇಸೀ ಪ್ರತಿಭೆ” ಎನ್ನುವಂತಹ ಸಾಕಷ್ಟು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಈ ವಿಡಿಯೊದಿಂದಾಗಿ ಟೀನಾ ಅವರು ಹಿಂಬಾಲಕರ ಸಂಖ್ಯೆಯೂ ಹೆಚ್ಚಿದೆ. ಅದ್ಯ ಟೀನಾ ಅವರು ಇನ್‌ಸ್ಟಾಗ್ರಾಂನಲ್ಲಿ 27 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

Exit mobile version