Site icon Vistara News

Viral Video : ಸೀರೆಯುಟ್ಟ ಚೆಲುವೆಯ ಲಗಾ ಲಗಾ ರೇ ಡ್ಯಾನ್ಸ್‌; ಮನಸೋತು ಲೈಕ್‌ ಮಾಡುತ್ತಿದ್ದಾರೆ ನೆಟ್ಟಿಗರು

#image_title

ಮುಂಬೈ: ಸಲ್ಮಾನ್‌ ಖಾನ್‌ ಮತ್ತು ಸುಶ್ಮಿತಾ ಸೇನ್‌ ಜೋಡಿಯಾಗಿ ನಟಿಸಿದ ಮೈನೆ ಪ್ಯಾರ್‌ ಕ್ಯೂ ಕಿಯಾ ಸಿನಿಮಾದ ಹಾಡುಗಳನ್ನು ಜನರು ಇಂದಿಗೂ ಮರೆತಿಲ್ಲ. ಲಗಾ ಲಗಾ ರೇ ಹಾಡಂತೂ ಇಂದಿಗೂ ಅನೇಕರ ಫೇವರಿಟ್‌ ಲಿಸ್ಟ್‌ನಲ್ಲಿರುವ ಹಾಡೆಂದರೆ ತಪ್ಪಾಗದು. ಆ ಹಾಡು ಇದೀಗ ಮತ್ತೊಂದು ಕಾರಣಕ್ಕೆ ನೆಟ್ಟಿಗರಿಗೆ ಇಷ್ಟವಾಗಲಾರಂಭಿಸಿದೆ. ಸೀರೆಯುಟ್ಟ ನಾರಿಯೊಬ್ಬಳು ಈ ಹಾಡಿಗೆ ಹೆಜ್ಜೆ ಹಾಕಿದ್ದು, ಎಲ್ಲರೂ ಮನಸೋಲುವಂತೆ (Viral Video) ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಡ್ಯಾನ್ಸ್‌ ವಿತ್‌ ಅಲಿಶಾ ಹೆಸರಿನ ಪೇಜ್‌ ಹೊಂದಿರುವ ಯುವತಿ ಲಗಾ ಲಗಾ ರೇ ಹಾಡಿಗೆ ನೃತ್ಯ ಮಾಡಿದ್ದಾಳೆ. ಹಸಿರು ಬಣ್ಣದ ಸೀರೆ, ಅದಕ್ಕೆ ಮ್ಯಾಚಿಂಗ್‌ ರವಿಕೆ ತೊಟ್ಟು ಹೆಜ್ಜೆ ಹಾಕಿದ್ದಾಳೆ. ಮೈ ಚಳಿ ಬಿಟ್ಟು ಕುಣಿದಿರುವ ಆಕೆಯ ನೃತ್ಯ ಅನೇಕರಿಗೆ ಇಷ್ಟವಾಗಿದೆ. ವಿಡಿಯೊ ಆರಂಭದಿಂದ ಕೊನೆಯವರೆಗೂ ಎಲ್ಲರೂ ಕಣ್ಣು ಮಿಟುಕಿಸದೆ ನೋಡುವಂತೆ ಮಾಡಿದೆ.

ಇದನ್ನೂ ಓದಿ: Viral Video : ರಾಕಿ ಸಾವಂತ್‌ ಜತೆ ಶೀಲಾ ಕೀ ಜವಾನಿ ಎನ್ನುತ್ತಾ ಹೆಜ್ಜೆ ಹಾಕಿದ ವಿಕ್ಕಿ! ವಿಡಿಯೊ ವೈರಲ್‌
ಈ ವಿಡಿಯೊವನ್ನು ಮಾರ್ಚ್‌ 1ರಂದೇ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 1.9 ಮಿಲಿಯನ್‌ಗೂ ಹೆಚ್ಚು ಜನರಿಂದ ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದು, ತಮ್ಮ ಸ್ನೇಹಿತರೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ವಿಡಿಯೊಗೆ ಮೆಚ್ಚುಗೆಯ ಮಾತುಗಳನ್ನು ಕಾಮೆಂಟ್‌ಗಳ ಮೂಲಕ ತಿಳಿಸಿದ್ದಾರೆ.


“ನಿಮ್ಮ ನೃತ್ಯ, ನಿಮ್ಮ ಉಡುಗೆ, ಹಾಡಿನ ಆಯ್ಕೆ ಎಲ್ಲವೂ ಫಸ್ಟ್‌ ಕ್ಲಾಸ್‌”, “ಅತ್ಯದ್ಭುತವಾಗಿ ನೃತ್ಯ ಮಾಡಿದ್ದೀರಿ”, “ನಿಜವಾದ ಪ್ರತಿಭೆ ನೀವು” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅಂದ ಹಾಗೆ ಲಗಾ ಲಗಾ ರೇ ಹಾಡು ಮಾತ್ರವಲ್ಲ, ಈ ಅಲಿಶಾ ಹಲವಾರು ಬಾಲಿವುಡ್‌ ಹಾಡುಗಳಿಗೆ ವಿಶೇಷ ರೀತಿಯಲ್ಲಿ ನೃತ್ಯ ಮಾಡಿದ್ದಾರೆ. ಸಾಕಷ್ಟು ನೃತ್ಯದ ವಿಡಿಯೊಗಳನ್ನು ಹಾಗೂ ರೀಲ್ಸ್‌ಗಳನ್ನು ಮಾಡಿ ಹಂಚಿಕೊಂಡಿರುವ ಇವರಿಗೆ ಲಕ್ಷಾಂತರ ಮಂದಿ ಹಿಂಬಾಲಕರೂ ಇದ್ದಾರೆ.

Exit mobile version