ಭಾರತದಲ್ಲಿ ಇರುವ ಅತ್ಯಂತ ಕಡಿಮೆ ದರದ ಪ್ರಯಾಣ ಯಾವುದರದ್ದು ಎಂದರೆ ಅದು ರೈಲ್ವೆಯದ್ದು. ಅದಕ್ಕೇ ದೇಶದಲ್ಲಿ ಸಂಚರಿಸುವ ಬಹುತೇಕ ರೈಲುಗಳು ತುಂಬಿ ತುಳುಕುತ್ತಿರುತ್ತವೆ. ಕಾಲಿಡಲೂ ಜಾಗವಿಲ್ಲದ ರೈಲಿನಲ್ಲಿ ಶೌಚಾಲಯಕ್ಕೆ ಹೋಗಬೇಕೆಂದರೆ ಏನು ಮಾಡಬೇಕು? ಅದೊಂದು ಸಾಹಸವೇ ಸರಿ ಎನ್ನುತ್ತಾರೆ ಪ್ರಯಾಣಿಕರು. ಅಂತಹದ್ದೇ ಒಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು (Viral Video) ಮಾಡುತ್ತಿದೆ.
ಅಭಿಜಿತ್ ದೀಪ್ಕೆ ಹೆಸರಿನ ವ್ಯಕ್ತಿ ಇಂತದ್ದೊಂದು ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬ ರೈಲಿನ ಶೌಚಾಲಯಕ್ಕೆ ಹೋಗಲು ಹರಸಾಹಸ ಮಾಡುತ್ತಿರುವುದನ್ನು ನೀವು ಕಾಣಬಹುದು. ರೈಲಿನಲ್ಲಿ ಕೆಳಗೆ ಕಾಲಿಡುವುಷ್ಟೂ ಜಾಗ ಬಿಡದ ಹಾಗೆ ಜನರು ಕುಳಿತಿರುವ ಹಿನ್ನೆಲೆ ಆ ವ್ಯಕ್ತಿ ಸೀಟುಗಳ ಮೇಲೆ ಒಂದೊಂದೇ ಕಾಲನ್ನು ಇರಿಸಿಕೊಂಡು ದಾಟಿಕೊಂಡು ಬರುತ್ತಾನೆ. ನೋಡುವುದಕ್ಕೆ ಅದೊಂದು ರೀತಿಯಲ್ಲಿ ರೋಡೀಸ್ ರಿಯಾಲಿಟಿ ಶೋನ ಸಾಹಸದ ಟಾಸ್ಕ್‌ನಂತೆಯೇ ಕಾಣುತ್ತದೆ.
ಇದನ್ನೂ ಓದಿ: Viral News : ಬಿಟ್ಟಿ ಊಟ ಮಾಡಲು ಹೋಗಿ ಸ್ಕೂಟರನ್ನೇ ಕಳೆದುಕೊಂಡ! ಮದುವೆ ಊಟಕ್ಕೆ ನುಗ್ಗುವ ಮುನ್ನ ಈ ಸುದ್ದಿ ಓದಿ
ಈ ವಿಡಿಯೊವನ್ನು ಅಭಿಜಿತ್ ಅವರ ಸೋದರ ಸಂಬಂಧಿ ಅವರೊಂದಿಗೆ ಹಂಚಿಕೊಂಡಿದ್ದಾಗಿ ಅಭಿಜಿತ್ ತಿಳಿಸಿದ್ದಾರೆ. ವಿಡಿಯೊದಲ್ಲಿರುವುದು ಆ ಸೋದರ ಸಂಬಂಧಿಯ ಸ್ನೇಹಿತನಂತೆ. ರೈಲ್ವೆ ಪ್ರಯಾಣವನ್ನು ಇಷ್ಟೊಂದು ಸಾಹಸಮಯ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿ ಅವರು ರೈಲ್ವೆ ಇಲಾಖೆಯನ್ನು ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.
Got this video from my cousin who was travelling in Railway.
— Abhijeet Dipke (@abhijeet_dipke) June 18, 2023
Here is his friend trying to make his way to the toilet. @RailMinIndia, thank you for transforming train journey into an adventure sport. pic.twitter.com/3fuHdXWS2A
ಈ ಟ್ವೀಟ್ ಎಲ್ಲ ಕಡೆ ಹರಿದಾಡಿದ್ದು ಭಾರೀ ಸದ್ದು ಮಾಡುತ್ತಿದೆ. ಸಾಕಷ್ಟು ಜನರು ತಮಗೂ ಇದೇ ರೀತಿಯಲ್ಲಿ ಅನುಭವವಾಗಿರುವುದಾಗಿ ಹೇಳಿಕೊಂಡಿದ್ದಾರೆ. “ರೈಲಿನಲ್ಲಿ 23 ಬೋಗಿಗಳಿದ್ದರೆ ಅದರಲ್ಲಿ ಕೇವಲ ಎರಡು ಬೋಗಿಯನ್ನು ಜನರಲ್ ಮಾಡಿರುತ್ತಾರೆ. ಇದರಿಂದಾಗಿ ಆ ಎರಡೂ ಬೋಗಿಗಳಲ್ಲಿ ಕಾಲಿಡುವುದಕ್ಕೂ ಜಾಗ ಇರುವುದಿಲ್ಲ”, “ಬರೀ ಜನರಲ್ ಮಾತ್ರ ಅಲ್ಲ, ಸ್ಲೀಪರ್ ಕೋಚ್‌ನಲ್ಲಿಯೂ ಇದೇ ಕಥೆ. ಜನರಲ್ ಟಿಕೆಟ್ ತೆಗೆದುಕೊಂಡವರೂ ಸ್ಲೀಪರ್‌ಗೆ ಹತ್ತಿ ಕುಳಿತುಕೊಳ್ಳುತ್ತಾರೆ” ಎನ್ನುವಂತಹ ಹಲವಾರು ಕಮೆಂಟ್‌ಗಳು ವಿಡಿಯೊಗೆ ಬಂದಿವೆ.