Site icon Vistara News

Viral Video : ಈ ರಾಧಾ ಡ್ಯಾನ್ಸ್‌ಗೆ ಮನಸೋಲದವರಿಲ್ಲ; ನೀವೂ ಹೇಳಿ ಬಿಡಿ ಒನ್ಸ್‌ ಮೋರ್‌

#image_title

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನೃತ್ಯದ ವಿಡಿಯೊಗಳು ಆಗಾಗ ವೈರಲ್‌ (Viral Video) ಆಗುತ್ತಲೇ ಇರುತ್ತವೆ. ಭಾಷೆಗಳ ಹಂಗಿಲ್ಲದೆ ಎಲ್ಲ ಭಾಷೆಯ ಹಾಡಿನ ನೃತ್ಯಗಳೂ ಕೂಡ ವೈರಲ್‌ ಪಟ್ಟಿ ಸೇರಿಕೊಂಡುಬಿಡುತ್ತವೆ. ಅದೇ ರೀತಿಯಲ್ಲಿ ಇದೀಗ ಹಿಂದಿಯ ಸ್ಟುಡೆಂಟ್‌ ಆಫ್‌ ದಿ ಇಯರ್‌ ಸಿನಿಮಾದ ರಾಧಾ ಹಾಡಿಗೆ ಯುವತಿಯೊಬ್ಬಳು ಮಾಡಿರುವ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ರಾಧಾ ಒನ್ಸ್‌ ಮೋರ್‌ ಹಾಡಿನಲ್ಲಿ ನಟಿ ಆಲಿಯಾ ಭಟ್‌ ಹಾಕಿರುವ ಹೆಜ್ಜೆಗಳು ನಿಮಗೆ ನೆನಪಿರಬಹುದು. ಅದೇ ಹೆಜ್ಜೆಗಳನ್ನು ಯುವತಿಯೊಬ್ಬಳು ಹಾಕಿದ್ದಾಳೆ. ಆ ವಿಡಿಯೊವನ್ನು ಕಿರಣ್‌ ರನಾ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಉದ್ದದ ಸ್ಕರ್ಟ್‌, ಅದಕ್ಕೆ ಪೂರ್ತಿ ತೋಳಿನ ಬ್ಲೌಸ್‌ ಹಾಗೂ ದುಪ್ಪಟ್ಟ ತೊಟ್ಟ ಯುವತಿ ಅದ್ಭುತವಾಗಿ ನೃತ್ಯ ಮಾಡಿದ್ದು, ಆ ನೃತ್ಯ ನೆಟ್ಟಿಗರಿಗೆ ಹೆಚ್ಚೇ ಇಷ್ಟವಾಗಿದೆ.

ಇದನ್ನೂ ಓದಿ: Viral Video : ಮೊದಲ ಬಾರಿಗೆ ತಂದೆಯನ್ನು ವಿಮಾನದಲ್ಲಿ ಕರೆದೊಯ್ದ ಮಗ; ಅನೇಕರಿಗೆ ಕಣ್ಣೀರು ಹಾಕಿಸಿದ ವಿಡಿಯೊವಿದು
ಒಂದು ವಾರದ ಹಿಂದೆ ಹಂಚಿಕೊಳ್ಳಲಾದ ವಿಡಿಯೊ ಈಗಾಗಲೇ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದ್ದು, 45 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ.


“ನಾನು ನೋಡಿದ ಅದ್ಭುತ ನೃತ್ಯಗಳಲ್ಲಿ ಇದೂ ಒಂದು”, “ವಾವ್‌”, “ನಿಮ್ಮ ನೃತ್ಯ ಸುಂದರವಾಗಿದೆ”, “ನಿಮ್ಮ ಡ್ರೆಸ್‌ ಚೆನ್ನಾಗಿದೆ” ಎನ್ನುವಂತಹ ಸಾವಿರಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ ಅನೇಕರು ಅವರ ಡ್ರೆಸ್‌ ಅನ್ನು ಎಲ್ಲಿ ಖರೀದಿಸಿದ್ದು ಎನ್ನುವ ಪ್ರಶ್ನೆಗಳನ್ನೂ ಕೇಳಿದ್ದಾರೆ. ಈ ರೀತಿಯ ನೃತ್ಯಗಳ ವಿಡಿಯೊಗಳು ಈ ಹಿಂದೆಯೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

Exit mobile version