ಬೆಂಗಳೂರು: ಹಾವು ಕಂಡರೆ ಮೂರು ಮಾರು ದೂರ ಓಡುವವರಿದ್ದಾರೆ. ಆದರೆ ಕೆಲವರಿಗೆ ಹಾವೆಂದರೆ ಅದೆಷ್ಟು ಪ್ರೀತಿಯೆಂದರೆ ಅವುಗಳ ಜತೆ ಒಂಚೂರೂ ಭಯವಿಲ್ಲದಂತೆ ನಡೆದುಕೊಳ್ಳುತ್ತಾರೆ. ಅದೇ ರೀತಿಯಲ್ಲಿ ವ್ಯಕ್ತಿಯೊಬ್ಬ ಚೂರೂ ಭಯವಿಲ್ಲದೆ ಹೆಡೆಯೆತ್ತಿದ್ದ ನಾಗರ ಹಾವನ್ನು ಹಿಡಿದು ಬಾಕ್ಸಿನೊಳಗೆ ತುಂಬಿದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ನಾಗರ ಹಾವೊಂದು ಹೆಡೆಯೆತ್ತಿ ನಿಂತಿರುತ್ತದೆ. ಆಗ ಅಲ್ಲಿಗೆ ಬರುವ ವ್ಯಕ್ತಿ ನಿಧಾನವಾಗಿ ದೊಡ್ಡದೊಂದು ಬಾಕ್ಸಿನೊಳಗೆ ಹಾವಿನ ಹೆಡೆಯನ್ನು ಹಾಕಿ ಬಾಕ್ಸ್‌ನ್ನು ಕೆಳಗಿಡುತ್ತಾನೆ. ನಂತರ ನಿಧಾನವಾಗಿ ತನ್ನ ಕೈಯಿಂದಲೇ ಹಾವನ್ನು ಬಾಕ್ಸಿನೊಳಗೆ ಕಳುಹಿಸುತ್ತಾನೆ. ಪೂರ್ತಿ ಹಾವು ಬಾಕ್ಸಿನೊಳಗೆ ಹೋದ ನಂತರ ರಟ್ಟೊಂದನ್ನು ಬಾಕ್ಸಿನಡಿಗೆ ಹಾಕುತ್ತಾನೆ. ನಂತರ ಪೇಪರ್ ಮತ್ತು ಬಾಕ್ಸ್‌ನ್ನು ಹಿಡಿದು ಬಾಕ್ಸ್‌ನ್ನು ಮೇಲಕ್ಕೆ ಎತ್ತಿ ಅದರ ಮುಚ್ಚಳವನ್ನು ಹಾಕುತ್ತಾನೆ.
ಇದನ್ನೂ ಓದಿ: Viral Video: ತನ್ನ ಹಸುವನ್ನು ಉಳಿಸಿಕೊಳ್ಳಲು ಸಿಂಹವನ್ನೇ ಹೆದರಿಸಿ ಓಡಿಸಿದ ಮಾಲೀಕ!
ಈ ಎಲ್ಲ ಕೆಲಸ ಮಾಡುವಾಗ ಆತ ಚೂರೂ ಭಯವಿಲ್ಲದೆ ಅತ್ಯಂತ ಧೈರ್ಯದಿಂದ ಮಾಡುತ್ತಾನೆ. ಕ್ರೀಡಾ ಜೆರ್ಸಿ, ಶೂ ಧರಿಸಿ ಈ ರೀತಿಯಲ್ಲಿ ಹಾವು ಹಿಡಿದವನ ವಿಡಿಯೊವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಮೂರು ತಿಂಗಳ ಹಿಂದೆಯೇ ಹಂಚಿಕೊಳ್ಳಲಾಗಿದೆಯಾದರೂ ಇಂದಿಗೂ ವಿಡಿಯೊ ಜನರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಿದೆ.
Snake rescue in Pondicherry, Puducherry fire and rescue service
by u/Kaos2018 in nextfuckinglevel
ವಿಡಿಯೊವನ್ನು 17 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಈ ರೀತಿಯ ಕೆಲಸ ಮಾಡುವುದಕ್ಕೆ ಹೆಚ್ಚೇ ಧೈರ್ಯ ಬೇಕು. ನಿಜಕ್ಕೂ ಈ ಮನುಷ್ಯ ಗ್ರೇಟ್”, “ಹಾವುಗಳಿಗೆ ತೊಂದರೆ ಕೊಡದೆ ಹೀಗೆ ಅರಾಮವಾಗಿ ಹಿಡಿದರೆ ಅವು ಸಮಸ್ಯೆ ಕೊಡುವುದಿಲ್ಲ” ಎನ್ನುವಂತಹ ಅನೇಕ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾವು ಹಿಡಿದ ಮನುಷ್ಯನ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.