Site icon Vistara News

Viral Video : ಮೊದಲ ಬಾರಿಗೆ ತಂದೆಯನ್ನು ವಿಮಾನದಲ್ಲಿ ಕರೆದೊಯ್ದ ಮಗ; ಅನೇಕರಿಗೆ ಕಣ್ಣೀರು ಹಾಕಿಸಿದ ವಿಡಿಯೊವಿದು

#image_title

ಬೆಂಗಳೂರು: ವಿಮಾನದಲ್ಲಿ ಪ್ರಯಾಣ ಮಾಡಬೇಕು ಎನ್ನುವುದು ಈಗಲೂ ಅದೆಷ್ಟೋ ಜನರ ಕನಸು. ಆಗಸದಲ್ಲಿ ಹಾರುವ ವಿಮಾನವನ್ನು ಕಂಡೇ ಸಂಭ್ರಮಿಸುವವರು ಅದೆಷ್ಟೋ ಮಂದಿ. ಅದೇ ರೀತಿಯಲ್ಲಿ ಗಗನದಲ್ಲಿ ವಿಮಾನವನ್ನು ಮಾತ್ರವೇ ಕಂಡಿದ್ದ ತಂದೆಯೊಬ್ಬರನ್ನು ಅವರ ಪುತ್ರ ವಿಮಾನದಲ್ಲಿ ಸಂಚಾರ ಮಾಡಿಸಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು (Viral Video) ಮಾಡುತ್ತಿದೆ.

ಜತಿನ್‌ ಲಾಂಬಾ ಎಂಬುವರು ಈ ರೀತಿಯಲ್ಲಿ ತನ್ನ ತಂದೆಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ವಾಣಿಜ್ಯ ನಗರಿ ಮುಂಬೈಗೆ ಅವರು ತಂದೆಯನ್ನು ಕರೆದುಕೊಂಡು ಹೋಗಿದ್ದಾರೆ. ಮೊದಲಿಗೆ ವಿಮಾನ ನಿಲ್ದಾಣಕ್ಕೆ ಮೆಟ್ರೋದಲ್ಲಿ ಸಂಚಾರ ಮಾಡಿ, ವಿಮಾನ ನಿಲ್ದಾಣದಲ್ಲಿ ತಂದೆಯೊಂದಿಗೆ ಸ್ವಲ್ಪ ಉಪಹಾರ ಸೇವಿಸಿದ್ದಾರೆ.

ಇದನ್ನೂ ಓದಿ: Viral News : ಬರ್ತ್‌ಡೇ ಆಚರಿಸಿಕೊಳ್ಳುತ್ತಿದೆ ವಿಶ್ವದ ಅತ್ಯಂತ ಹಿರಿಯ ನಾಯಿ! ಇದರ ವಯಸ್ಸೆಷ್ಟು ಗೊತ್ತಾ?
ನಂತರ ತಂದೆಯನ್ನು ವಿಮಾನದಲ್ಲಿ ಮುಂಬೈಗೆ ಕರೆದುಕೊಂಡು ಬಂದು ತನ್ನ ರೂಮನ್ನು ತೋರಿಸಿದ್ದಾರೆ. ಈ ಮಧ್ಯೆ ವಿಮಾನದಲ್ಲಿ ತಂದೆ ಸಂತಸದಿಂದ ನಗುಮುಖದ ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಜತಿನ್‌ ವಿಡಿಯೊ ಮಾಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ.


ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿ ಬೇರೆಯವರೊಂದಿಗೆ ಹಂಚಿಕೊಂಡಿದ್ದಾರೆ. “ನಿಜಕ್ಕೂ ನೀವು ಹೆಮ್ಮೆಯ ಪುತ್ರ”, “ಇದು ಎಲ್ಲ ತಂದೆ ತಾಯಿಯ ಕನಸು” ಹೀಗೆ ಹಲವಾರು ರೀತಿಯಲ್ಲಿ ಕಾಮೆಂಟ್‌ಗಳು ಈ ವಿಡಿಯೊಗೆ ಬಂದಿವೆ. ಅನೇಕರು ತಾವೂ ಕೂಡ ತಂದೆ ತಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗಬೇಕು ಎನ್ನುವ ಬಗ್ಗೆಯೂ ಹೇಳಿಕೊಂಡಿದ್ದಾರೆ.

Exit mobile version