Site icon Vistara News

Viral Video : ಮಯ್ಯ ಮಯ್ಯ ಎನ್ನುತ್ತ ಮೈ ಕುಣಿಸುವ ಈ ಹುಡುಗಿಯ ನೃತ್ಯ ನೋಡದಿರಲು ಸಾಧ್ಯವೇ?

Woman's belly dance to Mayya Mayya

ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ ನೃತ್ಯಗಳ ವಿಡಿಯೊಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಇದೀಗ ಮತ್ತೊಂದು ವಿಡಿಯೊ ಸುದ್ದಿಯಲ್ಲಿದೆ. ಯುವತಿಯೊಬ್ಬಳು ಮಯ್ಯ ಮಯ್ಯ ಹಾಡಿಗೆ ನೃತ್ಯ ಮಾಡುತ್ತಿದ್ದರೆ ಅದನ್ನೇ ನೋಡುತ್ತ ವಿಡಿಯೊ ವೈರಲ್‌(Viral Video) ಲಿಸ್ಟ್‌ಗೆ ಸೇರುವಂತೆ ಮಾಡಿದ್ದಾರೆ ನೆಟ್ಟಿಗರು.

ದಿಯಾ ಬಿಹಾನಿ ಹೆಸರಿನ ಯುವತಿ 2007ರ ಗುರು ಸಿನಿಮಾದ ಮಯ್ಯ ಮಯ್ಯ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಕಪ್ಪು ಬಣ್ಣದ ದಿರಸು ತೊಟ್ಟಿರುವ ಯುವತಿ ಸೊಂಟಕ್ಕೆ ಸೊಂಟದ ಪಟ್ಟಿ ಕಟ್ಟಿಕೊಂಡು ಹಾಡಿನ ತಾಳಕ್ಕೆ ತಕ್ಕಂತೆ ಸೊಂಟ ಬಳುಕಿಸಿದ್ದಾಳೆ. ತನ್ನ ಕೋಣೆಯಲ್ಲೇ ನಿಂತುಕೊಂಡು ನೃತ್ಯದ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ.

ಇದನ್ನೂ ಓದಿ: Video Viral : ಫ್ರೀ ಬಸ್‌ ಬಗ್ಗೆ ಉಗಿದು ಉಪ್ಪಿನಕಾಯಿ ಹಾಕಿದ ಮಹಿಳೆ! ಸಿದ್ದರಾಮಯ್ಯಗೆ ಏಕವಚನ ಪ್ರಯೋಗ

ವಿಡಿಯೊವನ್ನು ಏಪ್ರಿಲ್‌ 27ರಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡಿದೆ. 27 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಕೊಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೂರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಸಾವಿರಾರು ಮಂದಿ ವಿಡಿಯೊಗೆ ಕಮೆಂಟ್‌ಗಳನ್ನೂ ಮಾಡಿದ್ದಾರೆ.


“ಅಬ್ಬಾ, ಅದ್ಭುತವಾದ ನೃತ್ಯ”, “ಅತಿ ಸುಂದರವಾಗಿ ಹೆಜ್ಜೆ ಹಾಕಿದ್ದೀರಿ”, “ನಿಮ್ಮಲ್ಲಿ ಪ್ರತಿಭೆಯಿದೆ. ಚೆನ್ನಾಗಿ ನೃತ್ಯ ಮಾಡಿದ್ದೀರಿ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ “ಸೂಪರ್‌”, “ವಾವ್‌” ಎನ್ನುವಂತಹ ಕಾಮೆಂಟ್‌ಗಳೂ ಸಾಕಷ್ಟು ಈ ವಿಡಿಯೊಗೆ ಬಂದಿವೆ. ಅಂದ ಹಾಗೆ ಈ ದಿಯಾ ಬಿಹಾನಿ ಅವರ ಹಲವಾರು ವಿಡಿಯೊಗಳು ಈ ಹಿಂದೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದವು.

Exit mobile version