ಲಕ್ನೋ: ಲವ್ ಅಟ್ ಫಸ್ಟ್ ಸೈಟ್ ಎನ್ನುವುದು ಈಗಿನ ಜನರೇಷನ್ ಅವರಿಗೆ ಆಗಾಗ ಆಗುವಂತಹ ವಿಚಾರ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿದೆಯಂತೆ! ಹೀಗೆ ಹೇಳುತ್ತಿದ್ದಾರೆ ಅದೊಂದು ವಿಡಿಯೊ (Viral Video) ನೋಡಿರುವ ನೆಟ್ಟಿಗರು.
ಇದನ್ನೂ ಓದಿ: Viral Video: ಕಾಶ್ಮೀರದ ಚಳಿಗೆ ನಡುಗಿದ ರಾಹುಲ್ ಗಾಂಧಿ; ಕೊನೆಗೂ ಜಾಕೆಟ್ ಧರಿಸಿಯೇ ಪಾದಯಾತ್ರೆ ನಡೆಸಿದರು!
ಬೆಕ್ಕೊಂದು ಸೋಫಾದ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದೆ. ಅದರ ಹತ್ತಿರ ಬಗ್ಗಿ ನಿಂತ ಯೋಗಿ ಆದಿತ್ಯನಾಥ “ಏನಾದರೂ ತಿಂತೀಯಾ?” ಎಂದು ಪದೇಪದೆ ಕೇಳುತ್ತಿದ್ದಾರೆ. ಬೆಕ್ಕು ಸುಮ್ಮನೆ ಆಕಳಿಸುತ್ತ ಯೋಗಿ ಅವರನ್ನು ನೋಡಿ ಸುಮ್ಮನಾಗಿದೆ. ಇಂತಹ ಮುದ್ದಾದ ದೃಶ್ಯವಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ.
ಈ ವಿಡಿಯೊ ನೋಡಿರುವ ನೆಟ್ಟಿಗರು, “ಯೋಗಿ ಮತ್ತು ಬೆಕ್ಕು ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆದಂತಿದೆ” ಎಂದಿದ್ದಾರೆ. “ಒಬ್ಬ ಮುಖ್ಯಮಂತ್ರಿಯಾಗಿ ಚಿಕ್ಕ ಪ್ರಾಣಿಯೊಂದಿಗೆ ಅದೆಷ್ಟು ಪ್ರೀತಿಯಿಂದ ಮಾತನಾಡುತ್ತಿದ್ದಾರೆ” ಎಂದು ಕೆಲವರು ಅಚ್ಚರಿ ಹೊರಹಾಕಿದ್ದಾರೆ.