ಬೆಂಗಳೂರು: ಕುದುರೆ ಸವಾರಿ, ಒಂಟೆ ಸವಾರಿ ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಯುವಕ ಗೂಳಿಯ ಮೇಲೇ ಸವಾರಿ ಮಾಡಿ ವೈರಲ್ (Viral Video) ಆಗಲು ಯತ್ನಿಸಿದ್ದಾನೆ. ಹಾಗೆ ಮಾಡಲು ಯತ್ನಿಸಿರುವ ಯುವಕನಿಗೆ ಪೊಲೀಸರು ತಕ್ಕ ಪಾಠವನ್ನೂ ಕಲಿಸಿದ್ದಾರೆ.
ಯುವಕನೊಬ್ಬ ಮಧ್ಯ ರಾತ್ರಿಯಲ್ಲಿ ಗೂಳಿಯ ಮೇಲೆ ಕುಳಿತುಕೊಂಡು ಜೋರಾಗಿ ಸವಾರಿ ಮಾಡುತ್ತಿದ್ದಾನೆ. ಆ ವೇಳೆ ಆತ ಜೋಶ್‌ನಿಂ ಚೀರಾಡುತ್ತಿದ್ದಾನೆ ಕೂಡ. ಯುವಕನ ಸವಾರಿ ಕಂಡು ದಾರಿಯಲ್ಲಿದ್ದ ಜನರೆಲ್ಲರೂ ದೂರ ಸರಿದುಕೊಂಡು ದಾರಿ ಬಿಟ್ಟುಕೊಡುತ್ತಾರೆ. ಈ ದೃಶ್ಯವಿರುವ ವಿಡಿಯೊ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಇದನ್ನೂ ಓದಿ: Viral Story: ಕೆಟ್ಟ ವಾಸನೆಯ ಸ್ಪ್ರೇಯಿಂದ ಬೇಸ್ತು ಬೀಳಿಸಲು ಹೊರಟ ವಿದ್ಯಾರ್ಥಿಗಳು: ಮಕ್ಕಳು ಆಸ್ಪತ್ರೆ ಪಾಲು!
ಈ ವಿಡಿಯೊ ಪೊಲೀಸರಿಗೂ ತಲುಪಿದ್ದು, ಪೊಲೀಸರು ಆ ಯುವಕನ ಮೂಲದ ಬಗ್ಗೆ ಪತ್ತೆ ಹಚ್ಚಿದ್ದಾರೆ. ಉತ್ತರಾಖಂಡದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ರಿಷಿಕೇಶದ ತಪೋವನ ರಸ್ತೆಯಲ್ಲಿ ಈ ವಿಡಿಯೊ ಮಾಡಿರುವುದೆಂದು ತಿಳಿದು ಬಂದಿದೆ. ಯುವಕನಿಗೆ ಪೊಲೀಸರು ನೋಟಿಸ್ ಮೂಲಕ ಎಚ್ಚರಿಕೆ ಕೊಟ್ಟಿದ್ದು, ಮತ್ತೊಮ್ಮೆ ಹೀಗೆ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಉತ್ತರಾಖಂಡ ಪೊಲೀಸ್ ಇಲಾಖೆಯ ಟ್ವಿಟರ್ ಖಾತೆಯಲ್ಲೂ ಮಾಹಿತಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡಿನಲ್ಲಿ ಆಚರಿಸಲಾಗುವ ಜಲ್ಲಿಕಟ್ಟು ಕೂಡ ಇದೇ ರೀತಿಯಲ್ಲಿ ಇರುತ್ತದೆ. ಹಾಗಾಗಿ ಯುವಕನದ್ದು ತಪ್ಪೇನು ಇಲ್ಲ ಎಂದು ಕೆಲವರು ವಾದಿಸಿದ್ದಾರೆ. ಆದರೆ ರಾತ್ರಿ ವೇಳೆ ಯುವಕ ಪ್ರಾಣಿಗೆ ಹಿಂಸೆ ಕೊಟ್ಟಿರುವುದಷ್ಟೇ ಅಲ್ಲದೆ ಸಾರ್ವಜನಿಕರಿಗೂ ತೊಂದರೆ ಕೊಟ್ಟಿದ್ದಾನೆ ಎಂದು ಹಲವರು ದೂರಿದ್ದಾರೆ.