Site icon Vistara News

Viral Video: ಅಳುತ್ತಾ ವಿದಾಯ ಹೇಳಿದ್ದೇಕೆ ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್?

Viral Video

ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್ (Pakistan’s youngest YouTuber) ಮೊಹಮ್ಮದ್ ಶಿರಾಜ್ (Mohammad Shiraz) ತನ್ನ ಕೊನೆಯ ವ್ಲಾಗ್ (last vlog) ಅನ್ನು ಮೇ 15ರಂದು ಸಾಮಾಜಿಕ ಜಾಲತಾಣದಲ್ಲಿ (Viral Video) ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳು, ಅನುಯಾಯಿಗಳಿಗೆ ಭಾವನಾತ್ಮಕವಾಗಿ ವಿದಾಯ ( goodbye) ಹೇಳಿದ್ದಾಳೆ. ಸುಮಾರು 11 ನಿಮಿಷಗಳ ವಿಡಿಯೋದಲ್ಲಿ ಆಕೆ ಅಳುತ್ತಾ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾಳೆ.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿರುವ 11 ನಿಮಿಷಗಳ ವಿಡಿಯೋದಲ್ಲಿ ಶಿರಾಜ್ ವ್ಲಾಗ್ ಮಾಡುವ ಬದಲು ಈ ಸಮಯದಲ್ಲಿ ತನ್ನ ಅಧ್ಯಯನದ ಮೇಲೆ ಗಮನ ಹರಿಸಬೇಕೆಂದು ತಂದೆ ಬಯಸುತ್ತಾರೆ ಎಂದು ಹೇಳಿದ್ದಾಳೆ.

ತನ್ನ ಚಿಕ್ಕ ಸಹೋದರಿ ಮುಸ್ಕಾನ್ ಜೊತೆಗೆ ವೀಕ್ಷಕರನ್ನು ಸ್ವಾಗತಿಸಿದ ಶಿರಾಜ್, “ಮೇಂ ಆಜ್ ಸೆ ವ್ಲೋಗ್ ನಹೀ ಬನೌಂಗಾ. ಮೇರೆ ಅಬ್ಬು ನೆ ಬೋಲಾ ಹೈ ಆಪ್ ಕುಚ್ ದಿನ್ ಪಧೈ ಕರೋ ಔರ್ ವಿಡಿಯೋ ನಹೀ ಬನಾವೋ. ಲೇಕಿನ್, ಮುಝೆ ವ್ಲೋಗ್ ಬನಾನೇ ಕಾ ಬೋಹತ್ ಶೌಖ್ ಹೈ. ಇಸ್ಲಿಯೇ, ಆಜ್ ಮೇರಾ ಆಕ್ರಿ ವ್ಲಾಗ್ ಹೈ ಎಂದು ಹೇಳಿದಳು. ಅಂದರೆ ನಾನು ಇನ್ನು ಮುಂದೆ ವ್ಲಾಗ್‌ಗಳನ್ನು ಮಾಡುವುದಿಲ್ಲ. ನನ್ನ ತಂದೆ ನನ್ನನ್ನು ಅಧ್ಯಯನಕ್ಕೆ ಹೆಚ್ಚಿನ ಗಮನ ಕೊಡಲು ಹೇಳಿದ್ದಾರೆ. ಸದ್ಯಕ್ಕೆ ವಿಡಿಯೋಗಳನ್ನು ಮಾಡಬೇಡಿ ಎಂದಿದ್ದಾಳೆ.


ನಾನು ವ್ಲಾಗ್‌ಗಳನ್ನು ಮಾಡಲು ಇಷ್ಟಪಡುತ್ತೇನೆ. ಆದರೆ ಇದು ನನ್ನ ಕೊನೆಯ ವ್ಲಾಗ್. ನಾನು ಏನು ಮಾಡಲಿ? ಎಂದು ಅಳುತ್ತಾ, ಕಣ್ಣೀರು ಒರೆಸುತ್ತಾ ಶಿರಾಜ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಸ್ವಲ್ಪ ಸಮಯದ ಅನಂತರ ಅವರು ಮುಸ್ಕಾನ್‌ಳೊಂದಿಗೆ ತಮ್ಮ ಹಳ್ಳಿಯಲ್ಲಿ ಅಡ್ಡಾಡಿದ್ದಾಳೆ ಮತ್ತು ವೀಕ್ಷಕರಿಗೆ ಅವರ ನೆಚ್ಚಿನ ತಾಣಗಳಲ್ಲಿ ಒಂದಾದ ಸ್ವಲ್ಪ ಸ್ಟ್ರೀಮ್ ಅನ್ನು ತೋರಿಸಿದ್ದಾಳೆ.


ಬುಟ್ಟಿಗಳನ್ನು ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಭೇಟಿಯಾದ ಶಿರಾಜ್ ಈಗ ಸ್ವಲ್ಪ ಸಮಯದವರೆಗೆ ವಿಡಿಯೋಗಳನ್ನು ಪೋಸ್ಟ್ ಮಾಡುವುದಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾಳೆ. ಏಕೆ ಎಂದು ಕೇಳಿದಾಗ ಶಿರಾಜ್ ಕಾರಣವನ್ನು ವಿವರಿಸಿದ್ದಾಳೆ. ಆದರೆ ಆ ವ್ಯಕ್ತಿ ವ್ಲಾಗ್‌ಗಳನ್ನು ರಚಿಸಲು ಸ್ವಲ್ಪ ಸಮಯವನ್ನು ಮೀಸಲಿಡುವಂತೆ ಸಲಹೆ ನೀಡಿದ್ದಾನೆ.

ಸ್ವಲ್ಪ ಅಸಮಾಧಾನಗೊಂಡ ಶಿರಾಜ್, ಅನಂತರ ಅವರ ಎಲ್ಲಾ ಪ್ರೀತಿಗಾಗಿ ತನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದಳು. ವ್ಲಾಗ್ ಮಾಡಲು ಅವಕಾಶ ನೀಡುವಂತೆ ಅವರ ತಂದೆಗೆ ವಿನಂತಿಸುವಂತೆ ಕೇಳಿಕೊಂಡಳು.
ಮೈ ಲಾಸ್ಟ್ ವ್ಲಾಗ್. ಎಮೋಷನಲ್ ಗುಡ್ ಬೈ ಎಂಬ ಶೀರ್ಷಿಕೆಯಡಿ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಶಿರಾಜ್ ಅವರ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಇದನ್ನೂ ಓದಿ: Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

‘ಶಿರಾಜಿ ವಿಲೇಜ್ ವ್ಲಾಗ್ಸ್’ ಎಂಬುದು ಅವರ ಯೂಟ್ಯೂಬ್ ಚಾನೆಲ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯ ಹೆಸರು. ಇದರಲ್ಲಿ ಅವರು ತಮ್ಮ ಕುಟುಂಬ ಜೀವನ ಮತ್ತು ದೈನಂದಿನ ಅನುಭವಗಳ ಸಾರವನ್ನು ಸೆರೆ ಹಿಡಿಯುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾಳೆ. ಶಿರಾಜ್ 1.56 ಮಿಲಿಯನ್ ಚಂದಾದಾರರನ್ನು ಹೊಂದಿದೆ ಯೂಟ್ಯೂಬ್ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ 2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾಳೆ.

ಆರು ವರ್ಷದ ಮೊಹಮ್ಮದ್ ಶಿರಾಜ್ ಗಿಲ್ಗಿಟ್-ಬಾಲ್ಟಿಸ್ತಾನ್‌ನ ಖಪ್ಲು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮಾರ್ಚ್ ನಲ್ಲಿ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದಳು.

Exit mobile version