Site icon Vistara News

Viral Video | ವಿಮಾನದಲ್ಲಿದ್ದ ಇಬ್ಬರು ವಿಶೇಷ ವ್ಯಕ್ತಿಗಳಿಗೆ ಕವಿತೆ ಹೇಳಿ ಸ್ವಾಗತ ಕೋರಿದ ಪೈಲಟ್​; ಆತನಿಗದು ಖುಷಿಯ ಕ್ಷಣ ಏಕೆ?

ನವದೆಹಲಿ: ಪ್ರತಿಯೊಂದು ಏರ್‌ಲೈನ್‌ ಸಂಸ್ಥೆಯಲ್ಲೂ ವಿಮಾನದಲ್ಲಿರುವ ಸಿಬ್ಬಂದಿ ವಿಮಾನದೊಳಗೆ ಪ್ರಯಾಣಿಕರನ್ನು ಸ್ವಾಗತಿಸುವುದಕ್ಕೆ ನಿರ್ದಿಷ್ಟ ಶೈಲಿಯಿರುತ್ತದೆ. ಆದರೆ ಕೆಲವರು ಮಾತ್ರ ಆ ಕಟ್ಟುನಿಟ್ಟಿನಾಚೆ ಬಂದು ಪ್ರಯಾಣಿಕರ ಮೊಗದಲ್ಲಿ ನಗು ತರಿಸುವ ಪ್ರಯತ್ನ ಮಾಡುತ್ತಾರೆ. ಅಂತದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral Video | ಹಾಲಿವುಡ್‌ ಹಾಸ್ಯ ಕಲಾವಿದರಿಂದಲೂ ನಾಟು ನಾಟು ಹಾಡಿಗೆ ಹೆಜ್ಜೆ! ವಿಡಿಯೊ ಹಂಚಿಕೊಂಡ ಆನಂದ್‌ ಮಹೀಂದ್ರಾ

ಸ್ಪೈಸ್‌ಜೆಟ್‌ನ ಪೈಲಟ್‌ ಆಗಿರುವ ಮೋಹಿತ್‌ ತನ್ನ ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಿ ವಿಶೇಷವಾಗಿ ಅನೌನ್ಸ್‌ಮೆಂಟ್‌ ಮಾಡಿದ್ದಾರೆ. ಮೊದಲಿಗೆ ಹಿಂದಿಯಲ್ಲಿ ಎರಡು ಸಾಲುಗಳನ್ನು ಹೇಳಿ ಎಲ್ಲ ಪ್ರಯಾಣಿಕರಿಗೆ ಶುಭ ಹಾರೈಸುವ ಅವರು ಕೊನೆಯಲ್ಲಿ ವಿಮಾನದಲ್ಲಿರುವ ತನ್ನಿಬ್ಬರು ಮುಖ್ಯ ಪ್ರಯಾಣಿಕರಿಗೆ ಶುಭ ಹಾರೈಸುತ್ತಾರೆ. “ನನಗೆ ಡೈಪರ್‌ ಬದಲಿಸಿದ ನನ್ನಮ್ಮ ಹಾಗೂ ನಾನಿಂದು ಡೈಪರ್‌ ಬದಲಿಸುತ್ತಿರುವ ನನ್ನ ಮಗ ಇಬ್ಬರೂ ಈ ವಿಮಾನದಲ್ಲಿದ್ದಾರೆ. ಹಾಗಾಗಿ ನನಗೆ ಈ ವಿಮಾನ ಹಾರಾಟ ಅತ್ಯಂತ ವಿಶೇಷ. ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದ್ದಾರೆ.

ಈ ವಿಡಿಯೊವನ್ನು ಮೋಹಿತ್‌ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶುಕ್ರವಾರದಂದು ಹಂಚಿಕೊಂಡ ಈ ವಿಡಿಯೊ ಈಗಾಗಲೇ 8 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಿಸಲ್ಪಟ್ಟಿದೆ. ಲಕ್ಷಾಂತರ ಮಂದಿ ಈ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ನಗುತ್ತಾ, ಎಲ್ಲರನ್ನೂ ನಗಿಸುತ್ತಾ ಮಾತನಾಡಿದ ಮೋಹಿತ್‌ಗೆ ನೆಟ್ಟಿಗರು ಶುಭ ಹಾರೈಸಲಾರಂಭಿಸಿದ್ದಾರೆ. “ನಿಮ್ಮ ನಗುವಿನಲ್ಲೇ ನೀವು ಎಲ್ಲ ಪ್ರಯಾಣಿಕರ ಮನಸ್ಸನ್ನು ಗೆದ್ದಿದ್ದೀರಿ” ಎಂದು ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.


ಇದನ್ನೂ ಓದಿ: Viral Video | ಇದು ಪ್ರಪಂಚದಲ್ಲೇ ಅತ್ಯಂತ ಕಷ್ಟದ ನೃತ್ಯವಂತೆ! ಅಬ್ಬಬ್ಬಾ, ಹೇಗಿದೆ ನೋಡಿ

Exit mobile version