Site icon Vistara News

Viral Video: ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಮರುಜೀವ ನೀಡಿದ ಪೊಲೀಸ್ ಅಧಿಕಾರಿ; ಮನ ಮಿಡಿಯೋ ವಿಡಿಯೊ ಇಲ್ಲಿದೆ

Viral Video

ಮರದಿಂದ ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ (monkey) ಪೊಲೀಸ್ ಅಧಿಕಾರಿಯೊಬ್ಬರು (police officer) ಮರುಜೀವ ನೀಡಿದ ಘಟನೆ ಉತ್ತರಪ್ರದೇಶದ (uttarpradesh) ಬುಲಂದ್‌ಶಹರ್‌ನಲ್ಲಿ (Bulandshahr) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral Video) ಆಗಿದ್ದು, ಪೊಲೀಸ್ ಅಧಿಕಾರಿಯ ನಡೆಗೆ ಭಾರಿ ಪ್ರಶಂಸೆ ಕೇಳಿ ಬರುತ್ತಿದೆ.

ಪೊಲೀಸ್ ಠಾಣೆ ಆವರಣದೊಳಗೆ ನಿರ್ಜೀವವಾಗಿ ಬಿದ್ದಿದ್ದ ಕೋತಿಯನ್ನು ಕಂಡ ಪೊಲೀಸ್ ಅಧಿಕಾರಿ ಕೂಡಲೇ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ. ಮೇ 24 ರಂದು ತೀವ್ರವಾದ ಬಿಸಿಲಿನಿಂದ ಕೋತಿ ಪ್ರಜ್ಞೆ ಕಳೆದುಕೊಂಡು ಮರದಿಂದ ಕೆಳಗೆ ಬಿದ್ದಿತ್ತು. ಇದನ್ನು ನೋಡಿದ ಛಾತಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿಕಾಸ್ ತೋಮರ್ ಅವರು ಕೋತಿಗೆ ಮರುಜೀವ ನೀಡಲು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಅನ್ನು ನೀಡಿದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ನಾವು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ತರಬೇತಿ ಪಡೆದಿದ್ದೇವೆ. ಮನುಷ್ಯರು ಮತ್ತು ಕೋತಿಗಳ ದೇಹಗಳು ತುಂಬಾ ಹೋಲುವುದರಿಂದ ಈ ರೀತಿ ಮಾಡಿದೆ. ಸಹೋದ್ಯೋಗಿಗಳು ಉದ್ರೇಕಗೊಂಡ ಗುಂಪಿನಿಂದ ಈ ಕೋತಿಯನ್ನು ರಕ್ಷಿಸಲು ನಾನು ಪ್ರಯತ್ನಿಸಿದೆ. ಸುಮಾರು 45 ನಿಮಿಷಗಳ ಕಾಲ ಎದೆಯನ್ನು ಉಜ್ಜಿ ಸ್ವಲ್ಪ ಪ್ರಮಾಣದ ನೀರನ್ನು ಬಾಯಿಗೆ ಸುರಿದೆ. ಅಂತಿಮವಾಗಿ ಅದಕ್ಕೆ ಜೀವ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ಕೋತಿಗೆ ಪ್ರಜ್ಞೆ ಮರಳಿದ ಬಳಿಕ ಪಶುವೈದ್ಯ ಡಾ. ಹರಿ ಓಂ ಶರ್ಮಾ ಅವರು ಅದಕ್ಕೆ ಚಿಕಿತ್ಸೆ ಮುಂದುವರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದರ ವಿಡಿಯೊವನ್ನು ಸುದ್ದಿ ಸಂಸ್ಥೆ ಐಎಎನ್‌ಎಸ್ ಹಂಚಿಕೊಂಡಿದ್ದು, ವ್ಯಾಪಕ ಗಮನ ಸೆಳೆದಿದೆ.

ಬುಲಂದ್‌ಶಹರ್‌ ಪೊಲೀಸ್ ಠಾಣೆಯ ಆವರಣದಲ್ಲಿ ಶಾಖದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿರ್ಜೀವ ಕೋತಿಯನ್ನು ಪೋಲೀಸ್ ಅಧಿಕಾರಿಯೊಬ್ಬರು ಪುನರುಜ್ಜೀವನಗೊಳಿಸಿದ್ದಾರೆ, ಅದಕ್ಕೆ ನೀರು ನೀಡಿ, ಅದರ ಜೀವವನ್ನು ಉಳಿಸಿದ್ದಾರೆ ಎಂಬ ಶೀರ್ಷಿಕೆ ನೀಡಿ ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಪ್ರಜ್ಞಾಹೀನ ಕೋತಿಯ ಮೇಲೆ ತೋಮರ್ ಸಿಪಿಆರ್ ಮಾಡುತ್ತಿರುವುದು, ಹಿನ್ನಲೆಯಲ್ಲಿ ಯಾರೋ “ಇಸ್ಕೋ ಥೋಡಾ ಸಾ ಪಾನಿ ಔರ್ ದೋ. ಥೋಡಾ ಪಾನಿ ಡಾಲ್ ದೋ ಅಂದರೆ ಇನ್ನಷ್ಟು ನೀರು ಕೊಡಿ. ಅದರ ಮೇಲೆ ಸ್ವಲ್ಪ ನೀರು ಸುರಿಯಿರಿ ಎಂದು ಹೇಳುತ್ತಿರುವುದು ಕೇಳುತ್ತದೆ.


ವಿಡಿಯೋ ಮುಂದುವರಿದಂತೆ, ತೋಮರ್ ಕೋತಿಯ ಮುಂಭಾಗದ ಕಾಲುಗಳನ್ನು ಹಿಡಿದುಕೊಂಡು ಅದರ ಹಿಂಗಾಲುಗಳ ಮೇಲೆ ನಿಲ್ಲಲು ಸಹಾಯ ಮಾಡಿದರು. ಕ್ಲಿಪ್‌ನ ಕೊನೆಯಲ್ಲಿ ಕೋತಿಗೆ ಪ್ರಜ್ಞೆ ಮರಳಿ ಬಂದಿದೆ. ತೋಮರ್ ಅದರ ಮೇಲೆ ನೀರನ್ನು ಸುರಿಯುತ್ತಿದ್ದಂತೆ ಅದು ಅತ್ತಿತ್ತ ಜಿಗಿಯ ತೊಡಗುತ್ತದೆ. ಗುರುವಾರ ಹಂಚಿಕೊಳ್ಳಲಾದ ಈ ವಿಡಿಯೋ ಹಲವಾರು ವೀಕ್ಷಣೆಗಳನ್ನು ಗಳಿಸಿದೆ. ಅನೇಕ ವೀಕ್ಷಕರು ಅಧಿಕಾರಿಯ ಪ್ರಯತ್ನಗಳನ್ನು ಶ್ಲಾಘಿಸಲು ಕಾಮೆಂಟ್‌ ಮಾಡಿದ್ದಾರೆ.

Exit mobile version