Site icon Vistara News

Viral video: ಪೋಷಕರ ಫೋಟೊ ಶೋಕಿ; ಮೊಸಳೆ ಎದುರು ಮಕ್ಕಳಿಗೆ ಪ್ರಾಣ ಸಂಕಟ! ಆಘಾತಕಾರಿ ವಿಡಿಯೊ

Viral video

ತಂದೆ ತಾಯಿಗೆ ಮಕ್ಕಳೇ ಜೀವವಾಗಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಅವರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿರುವ ವಿಡಿಯೋವೊಂದು (Viral Video) ಈಗ ಎಲ್ಲ ಪೋಷಕರಲ್ಲೂ ಆತಂಕ ಉಂಟು ಮಾಡಿದೆ ಮಾತ್ರವಲ್ಲ ಸಾಕಷ್ಟು ಆಕ್ರೋಶವನ್ನೂ ಹುಟ್ಟು ಹಾಕಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವೈರಲ್ ಆಗಿರುವ ಈ ವಿಡಿಯೋದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಫೋಟೋಗಾಗಿ ಮೊಸಳೆಯ (photo pose with alligator) ಹತ್ತಿರ ನಿಲ್ಲುವಂತೆ ಪ್ರೋತ್ಸಾಹಿಸುತ್ತಿರುವುದನ್ನು ಕಾಣಬಹುದು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮಕ್ಕಳು ರಸ್ತೆಬದಿಯಲ್ಲಿ ಮೊಸಳೆಯನ್ನು ನೋಡಿ ಪೋಷಕರನ್ನು ಕರೆಯುತ್ತಾರೆ. ಅವರು ಮಕ್ಕಳನ್ನು ಅದರ ಮುಂದೆ ನಿಂತು ಫೋಟೋಗೆ ಪೋಸ್ ನೀಡುವಂತೆ ಒತ್ತಾಯಿಸುತ್ತಾರೆ. ಮಕ್ಕಳು ಭಯದಿಂದಲೇ ಮೊಸಳೆಯ ಮುಂದೆ ನಿಂತು ಸಾಕಷ್ಟು ಫೋಟೋಗಳಿಗೆ ಪೋಸ್ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅಜಾಗರೂಕತೆಯ ಈ ದೃಶ್ಯದಲ್ಲಿ ಮೊಸಳೆ ಬಾಯ್ತೆರೆ ದು ನಿಂತಿತ್ತು. ಕೊಂಚ ಎಚ್ಚರ ತಪ್ಪಿದರೂ ಇದು ಬಹುದೊಡ್ಡ ಅನಾಹುತವನ್ನೇ ಉಂಟು ಮಾಡುತ್ತಿತ್ತು. ಆದರೆ ಈ ವಿಡಿಯೋದಲ್ಲಿ ಯಾರೊಬ್ಬರೂ ಅಪಾಯದ ಬಗ್ಗೆ ಯೋಚಿಸದಿರುವುದು ನೆಟ್ಟಿಗರನ್ನು ಕೆರಳಿಸಿದೆ.

ವಿಡಿಯೋದ ಸ್ಥಳ ಮತ್ತು ದಿನಾಂಕವನ್ನು ಪತ್ತೆ ಮಾಡಲಾಗಲಿಲ್ಲ. ಆದರೂ ಇದು ಸುಮಾರು 8 ತಿಂಗಳ ಹಿಂದಿನದ್ದು ಎಂದು ತಿಳಿದು ಬಂದಿದ್ದು, ಎಜೆ ಎಲ್ಲಿಸ್ ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಸುಮಾರು 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.


ಒಬ್ಬ ಬಳಕೆದಾರರು , ಪೋಷಕರು ಇದನ್ನು ಹೇಗೆ ಅನುಮತಿಸಬಹುದು? ಎಂದು ಪ್ರಶ್ನಿಸಿದ್ದರೆ ಇನ್ನೊಬ್ಬರು ಖಂಡಿತವಾಗಿ, ಪೋಷಕರು ಮೊಸಳೆಯೊಂದಿಗೆ ಮಕ್ಕಳನ್ನು ಸ್ನೇಹಶೀಲವಾಗಿರಲು ಬಿಡುವುದು ಅದ್ಭುತ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬರು ಇದು ಹುಚ್ಚುತನ. ಮೊಸಳೆಗಳು ಕೆಲವೇ ಸೆಕೆಂಡುಗಳಲ್ಲಿ ದಾಳಿ ನಡೆಸಿದ್ದನ್ನು ನಾನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!

ಪೋಷಕರಿಗೆ ಇದು ತಮಾಷೆಯಾದರೆ ಮಕ್ಕಳಿಗೆ ಇದು ಭಯವನ್ನು ಉಂಟು ಮಾಡಿದೆ ಎಂದು ಇನ್ನೊಬ್ಬರು ಕಾಮೆಂಟ್ ವಿಭಾಗದಲ್ಲಿ ಹೇಳಿದ್ದಾರೆ.

ಮತ್ತೊಬ್ಬರು ಜನರಿಗೆ ಇದು ನಿಜವಾಗಿಯೂ ಅರ್ಥವಾಗುವುದಿಲ್ಲ. ಮೊಸಳೆಗಳು ನೀರು, ಭೂಮಿಯಲ್ಲಿ ಎಷ್ಟು ವೇಗವಾಗಿ ಇರುತ್ತದೆ ಎಂದು ಯಾರೂ ಯೋಚಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು, ಮೊಸಳೆಯದ್ದು ಆಕಳಿಕೆ ಅಲ್ಲ. ಅದು ಅಲ್ಲಿರುವ ಜನರಲ್ಲಿ ಒಬ್ಬರು ತನ್ನ ಬಾಯಿಗೆ ಹೊಂದಿಕೊಳ್ಳುತ್ತಾರೆಯೇ ಎಂದು ಯೋಚಿಸುತ್ತಿದೆ ಎಂದು ತಿಳಿಸಿದ್ದಾರೆ.

Exit mobile version