Site icon Vistara News

Viral Video: ಸರ್ಕಾರಿ ಕಚೇರಿಯಲ್ಲಿ ಡ್ಯಾನ್ಸ್‌ ಮಾಡಿ ರೀಲ್ಸ್; 8 ನೌಕರರಿಗೆ ನೋಟಿಸ್‌ ಬಿಸಿ!

Viral Video

ತಿರುವನಂತಪುರಂ: ನೌಕರರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಮಾಡಿದ ಬಳಿಕ ಹಿರಿಯ ಅಧಿಕಾರಿಯ ಕೆಂಗಣ್ಣಿಗೆ ಗುರಿಯಾದ ಘಟನೆ ಕೇರಳದಲ್ಲಿ (kerala) ನಡೆದಿದೆ. ಪಟ್ಟನಂತಿಟ್ಟ ಜಿಲ್ಲೆಯ (Pathanamthitta district) ತಿರುವಲ್ಲಾ ಪುರಸಭೆ ಪಾಲಿಕೆ ಕಾರ್ಯದರ್ಶಿ ಅವರು ಇದೀಗ ಎಂಟು ಮಂದಿ ನೌಕರರಿಗೆ ಶೋಕಾಸ್ ನೋಟಿಸ್‌ (notice) ಜಾರಿಗೊಳಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ರೀಲ್ಸ್ ಮಾಡಿರುವ ನೌಕರರು ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ವೈರಲ್ ಆಗಿದ್ದು, ಮೂರು ದಿನಗಳ ಬಳಿಕ ರೀಲ್ಸ್ ನಲ್ಲಿ ಕಾಣಿಸಿಕೊಂಡಿರುವ ಎಲ್ಲ ನೌಕರರಿಗೆ ನೊಟೀಸ್ ಜಾರಿ ಗೊಳಿಸಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನೌಕರರು ಕಚೇರಿಯಲ್ಲಿ ಹಾಡುವುದು ಮತ್ತು ನೃತ್ಯ ಮಾಡುವುದು ಸೆರೆಯಾಗಿದೆ. ಪುರಸಭೆ ಉದ್ಯೋಗಿಗಳು ರೀಲ್ಸ್ ಗಾಗಿ ಮೊದಲು ಸ್ಕ್ರಿಪ್ಟ್ ಸಿದ್ಧಪಡಿಸಿ ಬಳಿಕ ಅದನ್ನು ಕಚೇರಿಯಲ್ಲಿ ವಿಡಿಯೋ ಮಾಡಿದ್ದಾರೆ. ಹಾಡು ಮತ್ತು ನೃತ್ಯದ ಸಂಯೋಜನೆ ಇದರಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕೂಡಲೇ ರೀಲ್ಸ್ ಭಾರೀ ವೈರಲ್ ಆಗಿದೆ.


ಇದನ್ನೂ ಓದಿ: Viral Video: ಸಾವು ಹೇಗೆಲ್ಲ ಹೊಂಚು ಹಾಕುತ್ತದೆ! ಈ ವಿಡಿಯೊ ನೋಡಿ

ಈ ಕುರಿತು ನಗರಸಭೆ ಕಾರ್ಯದರ್ಶಿ ಗಮನಕ್ಕೆ ಬಂದಿದ್ದು, ಅವರು ಕೂಡಲೇ ಎಂಟು ನೌಕರರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಈ ಕುರಿತು ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯದರ್ಶಿ, ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಇದು ನಿರುಪದ್ರವಿ ಕೃತ್ಯವಾಗಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ನಿರೀಕ್ಷಿಸಿದ್ದರು. ಆದರೆ, ನೋಟಿಸ್‌ ಜಾರಿ ಮಾಡಿದ ಅನಂತರ ಕಚೇರಿ ಕೆಲಸದ ಬಿಡುವಿನ ಸಮಯದಲ್ಲಿ ರೀಲ್ ಮಾಡಿರುವುದು, ಕೆಲಸ ಮಾಡಲು ಅಥವಾ ತಮ್ಮ ಅಗತ್ಯಗಳಿಗಾಗಿ ಬಂದವರಿಗೆ ಯಾವುದೇ ಅಡ್ಡಿ ಉಂಟುಮಾಡಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

Exit mobile version