Site icon Vistara News

Viral Video : ಹಾವು ಮತ್ತು ಮುಂಗುಸಿ ನಡುವೆ ನಡೆಯಿತು ಫೈಟ್‌; ವೈರಲ್‌ ಆಯ್ತು ವಿಡಿಯೊ

#image_title

ಬೆಂಗಳೂರು: ಹಾವೆಂದರೆ ಹೆದರಿ ಓಡುವವರು ಅನೇಕರಿದ್ದಾರೆ. ವಿಷಕಾರಿ ಹಾವನ್ನು ಕಂಡಾಕ್ಷಣ ಎಲ್ಲರಿಗೂ ಭಯ ಆಗುವುದು ಸಾಮಾನ್ಯ. ಆದರೆ ಮುಂಗುಸಿ ಮಾತ್ರ ಹಾವನ್ನು ಕಂಡೊಡನೆ ಅದರೊಟ್ಟಿಗೆ ಜಗಳಕ್ಕೆ ನಿಲ್ಲುವ ಪ್ರಾಣಿ. ಅದೇ ರೀತಿ ಹಾವು ಮುಂಗುಸಿ ಜಗಳವಾಡುತ್ತಿರುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral video: ಮಹಿಳಾ‌ ಪ್ಯಾಸೆಂಜರ್ ಜೊತೆ ರೈಲ್ವೆ ಟಿಟಿ ಅನುಚಿತ ವರ್ತನೆ, ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು
ದೊಡ್ಡದೊಂದು ನಾಗರಹಾವು ಮತ್ತು ಮುಂಗುಸಿ ಜಗಳವಾಡುತ್ತಿವೆ. ಒಮ್ಮೆ ಮುಂಗುಸಿ ಹಾವಿನ ಕುತ್ತಿಗೆ ಭಾಗಕ್ಕೆ ಕಚ್ಚಿದರೆ, ಎಚ್ಚರಿಸಿಕೊಳ್ಳುವ ಹಾವು ಮುಂಗುಸಿಯನ್ನು ಕಚ್ಚುತ್ತದೆ. ಹಾಗೆಯೇ ಕೆಲವು ಸೆಕೆಂಡುಗಳ ಕಾಲ ಕಿತ್ತಾಟವಾಡಿದ ನಂತರ ಹಾವು ಮುಂಗುಸಿಗೆ ಜೋರಾಗಿ ಕಚ್ಚಿ, ಅದನ್ನು ಸುತ್ತಿಕೊಳ್ಳುತ್ತದೆ.


ಈ ದೃಶ್ಯವಿರುವ ವಿಡಿಯೊವನ್ನು ಬ್ಯೂಟಿಫುಲ್‌ ನ್ಯೂ ಪಿಕ್ಸ್‌ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಾರ್ಚ್‌ 5ರಂದು ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, ವಿಡಿಯೊ ಸಾವಿರಾರು ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಕೂಡ ಮಾಡಿದ್ದಾರೆ. “ಅಬ್ಬಾ ನೋಡುವುದಕ್ಕೆ ಭಯಾನಕವಾಗಿದೆ” ಎಂದು ಕಾಮೆಂಟ್‌ಗಳನ್ನೂ ಮಾಡಿದ್ದಾರೆ.

Exit mobile version