Site icon Vistara News

Viral Video: ತರಗತಿಯಲ್ಲಿ ಕಳಚಿ ಬಿದ್ದ ಸೀಲಿಂಗ್ ಫ್ಯಾನ್; ವಿದ್ಯಾರ್ಥಿನಿ ಸ್ಥಿತಿ ಗಂಭೀರ; ವಿಡಿಯೊ ನೋಡಿ

Viral Video

ತರಗತಿ ನಡೆಯುತ್ತಿದ್ದಾಗಲೇ ಸೀಲಿಂಗ್ ಫ್ಯಾನ್ (Ceiling Fan ) ಬಿದ್ದು ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ (madhyapradesh) ಸೆಹೋರ್ ನ ಖಾಸಗಿ ಶಾಲೆಯಲ್ಲಿ ನಡೆದಿದೆ. ಇದರ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ತರಗತಿಯ ಸಮಯದಲ್ಲಿ ಇದ್ದಕ್ಕಿದ್ದಂತೆ ಸೀಲಿಂಗ್ ಫ್ಯಾನ್ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯವಾಗಿದೆ. ಕೂಡಲೇ ತೀವ್ರ ರಕ್ತಸ್ರಾವ ಉಂಟಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಫ್ಯಾನ್‌ ಬಿದ್ದ ತಕ್ಷಣ ತರಗತಿಯಲ್ಲಿದ್ದ ಶಿಕ್ಷಕಿ ಇನ್ನೊಬ್ಬ ಶಿಕ್ಷಕರ ಸಹಾಯಕ್ಕೆ ಕರೆದರು. ಬಳಿಕ ಗಾಯಗೊಂಡ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಗೆ ಕರೆದುಕೊಂಡು ಹೋಗಲಾಗಿದೆ.

ಅಪಘಾತದ ಬಳಿಕ ವಿದ್ಯಾರ್ಥಿನಿಗೆ ಶಾಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಅನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಭೋಪಾಲ್‌ಗೆ ಕಳುಹಿಸಲಾಯಿತು.


ಘಟನೆಯ ಸಿಸಿಟಿವಿ ದೃಶ್ಯಾವಳಿಯು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದೆ. ಇದು ಸಾಕಷ್ಟು ಮಂದಿಯ ಗಮನ ಸೆಳೆಯಿತು. ಅಧಿಕಾರಿಗಳು ಪ್ರಸ್ತುತ ಘಟನೆಗೆ ಕಾರಣವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದು, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ತಡೆಯಲು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ದೇವರ ದರ್ಶನಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಬಿದ್ದ ಮರ; ಮೈ ಜುಂ ಎನಿಸುವ ವಿಡಿಯೊ

ಬಿಸಾಡಿದ ಕಸದಿಂದ 56 ಲಕ್ಷ ರೂ. ಸಂಪಾದಿಸಿದ

ಕಳೆದ ವರ್ಷ ಸಿಡ್ನಿಯಲ್ಲಿ ಲಿಯೊನಾರ್ಡೊ ಉರ್ಬಾನೊ ಎಂಬಾತ ಕಸದ ರಾಶಿಯ ಮೂಲಕ ಅತ್ಯುಮೂಲ್ಯ ವಸ್ತುಗಳನ್ನು ಸಂಗ್ರಹಿಸಿ 1,00,000 ಆಸ್ಟ್ರೇಲಿಯನ್ ಡಾಲರ್ ಅಂದರೆ 56.20 ಲಕ್ಷ ರೂ ಗಳಿಸಿದ್ದಾನೆ.

ಅವನಿಗೆ ಕಸದ ರಾಶಿಯಲ್ಲಿ ಚೀಲ, ಕಾಫಿ ಯಂತ್ರ, ಚಿನ್ನದ ಆಭರಣ ಮತ್ತು ನಗದು ಸೇರಿದಂತೆ ಇತರ ವಸ್ತುಗಳು ಸಿಕ್ಕಿವೆ ಎನ್ನಲಾಗಿದೆ.

ಪ್ರತಿದಿನ ಈತ ಬೆಳಿಗ್ಗೆ ಉಪಾಹಾರದ ನಂತರ ತನ್ನ ಬೈಸಿಕಲ್ ಅಥವಾ ಕಾರಿನಲ್ಲಿ ಹೋಗಿ ಸಿಡ್ನಿಯ ಬೀದಿಗಳಲ್ಲಿ ಕಸದ ರಾಶಿಗಾಗಿ ಹುಡುಕುತ್ತಿದ್ದನಂತೆ ಮತ್ತು ಅದರಿಂದ ಅವನಿಗೆ ಪ್ರತಿದಿನ ವಿಭಿನ್ನ ವಸ್ತುಗಳು ಸಿಗುತ್ತಿದ್ದವು ಎನ್ನಲಾಗಿದೆ.
ಕೆಲವೊಮ್ಮೆ ಅಲ್ಲಿ ಫ್ರಿಡ್ಜ್‌, ವಾರ್ಡ್‌ರೋಬ್, ಮತ್ತು ಮಂಚಗಳಂತಹ ದೊಡ್ಡ ವಸ್ತುಗಳು ಇರುತ್ತವೆ ಎಂದು ಅವನು ಹೇಳಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಜನರು ಸಾಮಾನ್ಯವಾಗಿ ಪೀಠೋಪಕರಣಗಳು ಮತ್ತು ಬೃಹತ್ ಸರಕುಗಳನ್ನು ಬೀದಿಗಳಲ್ಲಿ ಎಸೆಯುತ್ತಾರೆ. ಕಂಪ್ಯೂಟರ್‌ಗಳು, ಡೈಸನ್ ವ್ಯಾಕ್ಯೂಮ್ ಕ್ಲೀನರ್‌ಗಳು ಮತ್ತು ಟೆಲಿವಿಷನ್ ಸೆಟ್‍ಗಳು ಇತರ ವಸ್ತುಗಳು ಇರುತ್ತವೆ.

ಕೆಲವು ಶ್ರೀಮಂತ ಕುಟುಂಬದವರು ಕೆಲವೊಂದು ವಸ್ತುಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೂ ಹೊಸದನ್ನು ಖರೀದಿಸಲು ಹಳೆಯದನ್ನು ಕಸಕ್ಕೆ ಎಸೆಯುತ್ತಾರೆ. ಅಂಥವುಗಳನ್ನು ಹುಡುಕಿ ತೆಗೆದು ಮನೆಗೆ ತಂದು ಸ್ವಚ್ಛಗೊಳಿಸಿ ಮತ್ತು ಅದನ್ನು ಸರಿಪಡಿಸಿ ಅದರಲ್ಲಿ ತನಗೆ ಬೇಕಾದನ್ನು ಇಟ್ಟುಕೊಂಡು ಉಳಿದವುಗಳನ್ನು ಫೇಸ್ ಬುಕ್, ಮಾರ್ಕೆಟಿಂಗ್ ಪ್ಲಾಟ್‍ಫಾರ್ಮ್‌ಗಳಲ್ಲಿ ಮಾರಾಟ ಮಾಡುವುದಾಗಿ ಆತ ತಿಳಿಸಿದ್ದಾನೆ.

ಅಲ್ಲದೇ ಕೆಲವೊಮ್ಮೆ ಕಸದಲ್ಲಿ ಸಿಕ್ಕಿದ ಬಟ್ಟೆ ಮತ್ತು ಬ್ಯಾಗ್‌ಗಳ ಜೇಬಿನಲ್ಲಿ ಜನರು ಮರೆತು ಇಟ್ಟ ಹಣವು ಸಿಕ್ಕಿರುವುದಾಗಿ ತಿಳಿಸಿದ್ದಾನೆ. ಉರ್ಬಾನೊ ಅವರು ಇತ್ತೀಚೆಗೆ ಸಣ್ಣ ಚೀಲವನ್ನು ಸುಮಾರು 200 ಡಾಲರ್ ಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ. ಕೆಲವು ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವ ತನ್ನ ಸ್ನೇಹಿತರನ್ನು ಸಹ ಸಂಪರ್ಕಿಸುವುದಾಗಿ ತಿಳಿಸಿದ್ದಾನೆ.

ಕಳೆದ ವರ್ಷ ಅವರಿಗೆ ಕಸದಲ್ಲಿ 50ಕ್ಕೂ ಹೆಚ್ಚು ಟೆಲಿವಿಷನ್ ಸೆಟ್‍ಗಳು, 30 ಫ್ರಿಡ್ಜ್‌ಗಳು, 20ಕ್ಕೂ ಹೆಚ್ಚು ವಾಷಿಂಗ್ ಮಷಿನ್‌ಗಳು, 50 ಕಂಪ್ಯೂಟರ್‌ಗಳು/ಲ್ಯಾಪ್‍ಟಾಟ್‍ಗಳು, 15 ಮಂಚಗಳು, 150ಕ್ಕೂ ಹೆಚ್ಚು ಮಡಿಕೆಗಳು ಮತ್ತು 100ಕ್ಕೂ ಹೆಚ್ಚು ದೀಪಗಳು ಮತ್ತು ಅಲಂಕಾರಿಕ ವರ್ಣಚಿತ್ರಗಳು ಹಾಗೂ 849 ಡಾಲರ್ ನಗದು ಕೂಡ ಸಿಕ್ಕಿರುವುದಾಗಿ ತಿಳಿಸಿದ್ದಾರೆ.

Exit mobile version