Site icon Vistara News

Viral Video : ಇದು ಈ ಯುಗದ ಅದಿತಿ-ಜೈ ಜೋಡಿ; ವೈರಲ್ ಆಗ್ತಿದೆ ಕಾಲೇಜು ವಿದ್ಯಾರ್ಥಿಗಳ ವಿಡಿಯೊ

#image_title

ಮುಂಬೈ: ಇಮ್ರಾನ್ ಖಾನ್ ಮತ್ತು ಜೆನಿಲಿಯಾ ಡಿಸೋಜಾ ನಟನೆಯ ‘ಜಾನೆ ತು ಯಾ ಜಾನೆ ನಾ’ ಸಿನಿಮಾ ನೋಡಿದ ಅದೆಷ್ಟೋ ಮಂದಿ ಅದರಲ್ಲಿನ ಅದಿತಿ-ಜೈ ಜೋಡಿಯಂತೆಯೇ ನಾವೂ ಇರಬೇಕು ಎಂದುಕೊಂಡಿರುತ್ತಾರೆ. ಅದೇ ರೀತಿಯ ಕಾಲೇಜು ಜೀವನ ತಮಗೆ ಸಿಗಬೇಕು ಎಂದು ಬಯಸಿರುತ್ತಾರೆ. ಎಲ್ಲರ ಮನಸ್ಸನ್ನು ಕದ್ದಿದ್ದ ಆ ಸಿನಿಮಾ ಇಂದಿಗೂ ಅನೇಕರ ಅಚ್ಚುಮೆಚ್ಚು. ಆ ಸಿನಿಮಾದ ಹಾಡೊಂದು ಈಗ ವೈರಲ್ (Viral Video) ಆಗಿದೆ. ಅದಕ್ಕೆ ಕಾರಣ ಕಾಲೇಜು ವಿದ್ಯಾರ್ಥಿಗಳ ಆ ವಿಡಿಯೊ.

ಇದನ್ನೂ ಓದಿ: Viral Video: ಅಮೆರಿಕ ಅಧ್ಯಕ್ಷ ಬೈಡೆನ್​ ಎನ್ನುವ ಬದಲು ಅಧ್ಯಕ್ಷ ಒಬಾಮಾ ಎಂದ ವೈಟ್​ಹೌಸ್​​ ಮಾಧ್ಯಮ ಕಾರ್ಯದರ್ಶಿ
ಸಿನಿಮಾದಲ್ಲಿನ ‘ಕಭಿ ಕಭಿ ಅದಿತಿ’ ಹಾಡನ್ನು ನೀವೆಲ್ಲರೂ ಕೇಳಿರುತ್ತೀರಿ. ಈಗ ಅದೇ ಹಾಡು ವೈರಲ್ ಆಗಿದೆ. ಮುಂಬೈನ ಸೇಂಟ್ ಕ್ಷೇವಿಯರ್ ಕಾಲೇಜಿನಲ್ಲಿ ಚಿತ್ರೀಕರಣ ಮಾಡಲಾಗಿದ್ದ ಈ ಹಾಡನ್ನು ಇದೀಗ ಅದೇ ಕಾಲೇಜಿನ ವಿದ್ಯಾರ್ಥಿಗಳು ವೈರಲ್ ಮಾಡಿದ್ದಾರೆ. ಹಾಡಿನಲ್ಲಿ ಅದಿತಿ ಮತ್ತು ಜೈ ನಟಿಸಿದಂತೆಯೇ ಇಬ್ಬರು ವಿದ್ಯಾರ್ಥಿಗಳು ನಟಿಸಿದ್ದಾರೆ. ಅವರಿಗೆ ಉಳಿದ ವಿದ್ಯಾರ್ಥಿಗಳು ಸಾಥ್ ಕೊಟ್ಟಿದ್ದಾರೆ. ಹಾಗೆಯೇ ಮೂಲ ಹಾಡಿನಲ್ಲಿ ಯಾವ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿತ್ತೋ ಅದೇ ಸ್ಥಳದಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನಾಯಕ ನಟ ಮತ್ತು ನಟಿ ಧರಿಸಿದ ರೀತಿಯದ್ದೇ ಬಟ್ಟೆಯನ್ನು ಧರಿಸಿ ಮ್ಯಾಚ್ ಮಾಡಲಾಗಿದೆ.


ಈ ವಿಡಿಯೊವನ್ನು ಕ್ಸೇವಿಯರ್ ಕಾಲೇಜಿನ ಪಠ್ಯೇತರ ಚಟುವಟಿಕೆ ವಿಭಾಗವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ವಿಡಿಯೊ ಅನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಾರು ಮಂದಿ ಲೈಕ್ ಮತ್ತು ಕಮೆಂಟ್ ಮಾಡಿದ್ದಾರೆ.

Exit mobile version