Site icon Vistara News

Viral Video: ಥೇಟ್‌ ನಮ್ಮದೇ ಕೈಬರಹದಂತೆ ಬರೆಯುತ್ತದೆ ಈ ಯಂತ್ರ!

Viral Video

ವಿಜ್ಞಾನ ಮತ್ತು ತಂತ್ರಜ್ಞಾನ (Science and Technology) ಎಷ್ಟೇ ಮುಂದುವರಿದರೂ ಕೆಲವೊಂದು ಕೆಲಸ ಯಂತ್ರಗಳಿಗೆ ಮಾಡುವುದು ಸಾಧ್ಯವೇ ಇಲ್ಲ ಎನ್ನಲಾಗುತ್ತಿತ್ತು. ಅದರಲ್ಲೂ ಮುಖ್ಯವಾಗಿ ಮಾನವನ ಹ್ಯಾಂಡ್ ರೈಟಿಂಗ್ (Handwriting). ಆದರೆ ಈ ಯಂತ್ರ ಮಾತ್ರ ಮಾನವನ ಹ್ಯಾಂಡ್ ರೈಟಿಂಗ್ ಅನ್ನು ಕಾಪಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ (social media) ಹಂಚಿಕೊಂಡಿರುವ ಈ ವಿಡಿಯೋ (Viral Video) ಈಗ ಸಾಕಷ್ಟು ವೈರಲ್ ಆಗಿದೆ.

ವಿಜ್ಞಾನ, ತಂತ್ರಜ್ಞಾನದಿಂದಾಗಿ ನಮ್ಮ ಸಾಕಷ್ಟು ಕೆಲಸ ಕಾರ್ಯಗಳು ಸುಲಭವಾಗಿದೆ. ಕೆಲವೇ ಕೆಲವು ನಿಮಿಷಗಳಲ್ಲಿ ಯಂತ್ರಗಳ ಸಹಾಯದಿಂದ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಬಹುದು. ಕೆಲಸದ ಸ್ಥಳ, ಮನೆಯ ಬಹುತೇಕ ಕೆಲಸಗಳನ್ನು ನಿರ್ವಹಿಸುವ ಯಂತ್ರಗಳಿಂದಾಗಿ ನಮ್ಮ ಜೀವನ ಇಂದು ಬಹುತೇಕ ಸರಳವಾಗಿದೆ.

ಕಳೆದ ದಶಕದಲ್ಲಿ ಕೃತಕ ಬುದ್ಧಿಮತ್ತೆಯು ವಿಕಸನಗೊಂಡ ಪರಿಣಾಮ ಸಾಕಷ್ಟು ಸಂಕೀರ್ಣವೆನಿಸುವ ಕಾರ್ಯಗಳು ಇಂದು ಸುಲಭವಾಗಿದೆ. ವಿಶ್ಲೇಷಣಾತ್ಮಕ ಮತ್ತು ತಾರ್ಕಿಕತೆಯನ್ನು ಸಹ ಎಐ ನಿರ್ವಹಿಸುತ್ತಿದೆ. ಇನ್ನು ಕೈಯಾರೆಯೇ ಮಾಡಬೇಕಾದ ಒಂದು ಕೆಲಸವೆಂದರೆ ಪೆನ್ನಿನಿಂದ ಕಾಗದದ ಮೇಲೆ ಬರೆಯುವುದು. ಆದರೆ ಇನ್ನು ಈ ಕೆಲಸವು ಕಷ್ಟವಲ್ಲ. ಯಾಕೆಂದರೆ ಇದೀಗ ಬಂದಿರುವ ಹೊಸ ಯಂತ್ರವೆಂದು ಈ ಕಾರ್ಯವನ್ನು ಅತ್ಯಂತ ವೇಗವಾಗಿ ಮಾಡಿ ಮುಗಿಸುತ್ತದೆ.

ಕಾಗದದ ಮೇಲೆ ಬರೆಯುವ ಮತ್ತು ಮುದ್ರಿಸದ ಹಳೆಯ ಶೈಲಿ ಈಗ ಸುಲಭವಾಗಿದೆ. ಇನ್ನು ಮುಂದೆ ಹಸ್ತಚಾಲಿತ ಹಸ್ತಕ್ಷೇಪದ ಅಗತ್ಯವಿಲ್ಲದೆ ಯಂತ್ರಗಳು ಈ ಕಾರ್ಯವನ್ನು ಮಾಡಿ ಮುಗಿಸುತ್ತದೆ.

ಪ್ರಾಜೆಕ್ಟ್‌, ವಿವರಣೆಗಳನ್ನು ರಚಿಸಲು ಮಕ್ಕಳು ಕಂಪ್ಯೂಟರ್‌ಗಳನ್ನು ಬಳಸುತ್ತಾರೆ. ಆದರೆ ಇಲ್ಲಿಯವರೆಗೆ ಕೈಯಿಂದ ಬರೆಯುವುದು ಮಾತ್ರ ಯಂತ್ರಗಳಿಗೆ ಸಾಧ್ಯವಿರಲಿಲ್ಲ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹೊಸ ಆವಿಷ್ಕಾರವೊಂದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.


ಇದು ಮಾನವ ಕೈಬರಹವನ್ನು ಪುನರಾವರ್ತಿಸುತ್ತದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಸೈನ್ಮೆಂಟ್ ಅನ್ನು ಬರೆಯಲಾಗುತ್ತಿದೆ. ವಿಷಯವೇನೆಂದರೆ ಇದನ್ನು ಬರೆಯುತ್ತಿರುವುದು ಒಂದು ಯಂತ್ರ. ಪೆನ್ ಅನ್ನು ಯಂತ್ರದಲ್ಲಿ ಅಳವಡಿಸಲಾಗಿದೆ, ಇದು ಯಾವುದೇ ದೋಷಗಳಿಲ್ಲದೆ ಮಾನವ ಕೈಬರಹದಂತೆ ಬರೆಯುವುದನ್ನು ಮುಂದುವರಿಸಿದೆ. ಪುಟದ ಕೊನೆಯಲ್ಲಿ ಯಂತ್ರವು ಸ್ವಯಂಚಾಲಿತವಾಗಿ ಪುಟವನ್ನು ತಿರುಗಿಸಿ ಇನ್ನೊಂದು ಬದಿಯಲ್ಲಿ ಬರೆಯಲು ಪ್ರಾರಂಭಿಸುತ್ತದೆ.

ಈ ವಿಡಿಯೋವನ್ನು ಹಸ್ನಾ ಜರೂರಿ ಹೈ ಹೆಸರಿನ ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ: Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ; ಹೆಡ್ ಕಾನ್‌ಸ್ಟೇಬಲ್‌ ಹೀರೋನಂತೆ ಜೀವ ರಕ್ಷಿಸಿದ!

ಈ ವಿಡಿಯೋಗೆ ಹಲವಾರು ಮಂದಿ ಕಾಮೆಂಟ್ ಮಾಡಿದ್ದು, ಒಬ್ಬ ಬಳಕೆದಾರ, ಹಿಂದೆ, ಪೋಷಕರು ನಿಮಗೆ ಚೆನ್ನಾಗಿ ಅಧ್ಯಯನ ಮಾಡಲು ಹೇಳುತ್ತಿದ್ದರು; ಈಗ ಅವರು ನಿಮಗೆ ಯಂತ್ರವನ್ನು ಚೆನ್ನಾಗಿ ಕೆಲಸ ಮಾಡಲು ಹೇಳುತ್ತಾರೆ ಎಂದಿದ್ದಾರೆ.

Exit mobile version