Site icon Vistara News

Viral Video: ನೋಡ ನೋಡ್ತಿದ್ದಂತೆ ಕುಸಿದು ಬಿತ್ತು ಕ್ಲಾಸ್‌ರೂಂ ಗೋಡೆ; ಒಳಗಿದ್ದ ಮಕ್ಕಳ ಕತೆ ಏನಾಯ್ತು ಗೊತ್ತಾ? ವಿಡಿಯೋ ಇದೆ

Viral Video

ವಡೋಧರಾ: ಅವಘಡಗಳು ಹೇಗೆ ಬೇಕದರೂ ಎಲ್ಲಿ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತರಗತಯೊಳಗೆ ಆಟ ಪಾಠ ಅಂತ ಖುಷಿ ಖುಷಿಯಾಗಿದ್ದ ಮಕ್ಕಳ ಮೇಲೆ ಗೋಡೆ ಕುಸಿದು(Wall Collapsed) ಬಿದ್ದಿದೆ. ಈ ಘಟನೆ ವಡೋಧರಾದ ಶ್ರೀ ನಾರಾಯಣ ವಿದ್ಯಾಲಯದಲ್ಲಿ ನಡೆದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ(Viral Video). ಘಟನೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅದೃಷ್ಟವಶಾತ್‌ ಯಾವುದೇ ಸಾವು ಸಂಭವಿಸಿಲ್ಲ.

ಅವಶೇಷದಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗೆ ಪ್ರಾಥಮಿಕ ಚಿಕಿತ್ಸೆ ಪಡೆದು ಮೂರು ಹೊಲಿಗೆ ಹಾಕಿದ್ದು ಆತನ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ವಿರಾಮದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಗೋಡೆ ಕುಸಿದಾಗ ಹೆಚ್ಚಿನ ವಿದ್ಯಾರ್ಥಿಗಳು ತರಗತಿಯ ಹೊರಗೆ ಇದ್ದುದರಿಂದ ಭಾರೀ ಅನಾಹುತ ತಪ್ಪಿದೆ.

ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿದ್ದಾರೆ ಎಂಬ ಕರೆ ಸ್ವೀಕರಿಸಿದ ನಂತರ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಕರೆಗಳಿಗೆ ಸ್ಪಂದಿಸಿದವು. ಆದರೆ, ತರಗತಿಯ ಕೆಳಗೆ ನಿಲ್ಲಿಸಿದ್ದ ಕೆಲವು ಸೈಕಲ್‌ಗಳು ಮಾತ್ರ ನಜ್ಜುಗುಜ್ಜಾಗಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಾಥಮಿಕ ವಿಭಾಗದ ಹಿರಿಯ ಶಿಕ್ಷಕಿ ರೂಪಾಲ್ ಶಾ, ಇತರ ಸಿಬ್ಬಂದಿಯೊಂದಿಗೆ ಕಚೇರಿಯಲ್ಲಿದ್ದಾಗ ಶಬ್ದ ಕೇಳಿಸಿದ್ದು, ಕಟ್ಟಡವನ್ನು ತೆರವು ಮಾಡಲು ಪ್ರೇರೇಪಿಸಿದರು. “ಧೈರ್ಯ ಸುತಾರ್ ಎಂಬ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಮೂರು ಹೊಲಿಗೆ ಹಾಕಲಾಗಿದೆ. ನಂತರ ಆತನನ್ನು ಪೋಷಕರಿಗೆ ಒಪ್ಪಿಸಲಾಯಿತು,” ಎಂದು ದೃಢಪಡಿಸಿದ ಅವರು, ಇತರ ಯಾವುದೇ ವಿದ್ಯಾರ್ಥಿಗಳಿಗೆ ಹಾನಿಯಾಗಿಲ್ಲ ಎಂದು ಹೇಳಿದರು.

ಅಗ್ನಿಶಾಮಕ ದಳದ ಅಧಿಕಾರಿ ವಿನೋದ ಮೋಹಿತ್‌ ಪ್ರತಿಕ್ರಿಯಿಸಿದ್ದು, “ಗೋಡೆ ಕುಸಿತದ ಬಗ್ಗೆ ನಮಗೆ ಶಾಲೆಯಿಂದ ಕರೆ ಬಂದಿತು. ನಾವು ಸ್ಥಳಕ್ಕೆ ತಲುಪಿದ್ದೇವೆ. 7 ನೇ ತರಗತಿಯ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ. 10-12 ವಿದ್ಯಾರ್ಥಿಗಳ ಬೈಸಿಕಲ್ಗಳು ಅವಶೇಷಗಳಡಿಯಲ್ಲಿ ಹೂತುಹೋಗಿವೆ ಮತ್ತು ನಾವು ತೆಗೆದುಹಾಕಿದ್ದೇವೆ ಎಂದಿದ್ದಾರೆ.

ಇಂತಹ ಅಪಾಯಕಾರಿ ಘಟನೆಯನ್ನು ತಡೆಯಬಹುದಾದ ಅಗತ್ಯ ದುರಸ್ತಿಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಪಾಲಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುಸಿತವು ಶಾಲೆಯ ಸುರಕ್ಷತಾ ಮಾನದಂಡಗಳ ಅನುಸರಣೆ ಮತ್ತು ಅಗತ್ಯವಿರುವ ಸುರಕ್ಷತಾ ಪ್ರಮಾಣಪತ್ರವನ್ನು ಹೊಂದಿದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ:Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

Exit mobile version