Site icon Vistara News

Viral Video: ಗ್ರಹಚಾರ ಕೆಟ್ಟಾಗ ಕಾರಿನ ಚಕ್ರ ಕಳಚಿ ತಲೆಗೆ ಅಪ್ಪಳಿಸಬಹುದು! ವಿಡಿಯೊ ನೋಡಿ

Viral Video

ಅಪಘಾತ (accident) ಯಾವಾಗ, ಎಲ್ಲಿ, ಹೇಗೆ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ನಾವು ಎಲ್ಲೇ ಇದ್ದರೂ ಬಹಳ ಎಚ್ಚರಿಕೆಯಿಂದ ಇರಬೇಕು. ಎಷ್ಟೋ ಬಾರಿ ವಾಹನ (vehicle rider) ಸವಾರರ ಅಜಾಗರೂಕತೆಯಿಂದ ರಸ್ತೆ ಬದಿಯಲ್ಲಿ (Pedestrian) ನಡೆದುಕೊಂಡು ಹೋಗುವವರು ಅಪಘಾತಕ್ಕೆ ಈಡಾಗುವುದು ಇದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋವೊಂದು (Viral Video) ಹರಿದಾಡುತ್ತಿದೆ.

ಪಾದಚಾರಿಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನ ಚಕ್ರವೊಂದು ಬಂದು ಅವರ ತಲೆಗೆ ಬಡಿದಿದೆ. ಅಪಘಾತದ ತೀವ್ರತೆಗೆ ಪಾದಚಾರಿ ಮಹಿಳೆ ನೆಲಕ್ಕೆ ಬಿದ್ದಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.

ಏನಿದೆ ವಿಡಿಯೋದಲ್ಲಿ?

ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಕಾರಿನ ಟೈರ್ ವೊಂದು ಅವರ ಬದಿಯಲ್ಲೇ ಹಾದು ಹೋಗುತ್ತದೆ. ಇನ್ನೇನು ತಾನು ಬಚಾವಾದೆ ಎನ್ನುವಷ್ಟರಲ್ಲಿ ಆ ಚಕ್ರ ಹಿಂದಿನ ಗೋಡೆಗೆ ಬಡಿದು ಮರಳಿ ಅವರ ತಲೆಯ ಹಿಂಭಾಗಕ್ಕೆ ಬಡಿಯುತ್ತದೆ. ಪರಿಣಾಮವಾಗಿ ಮಹಿಳೆ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ಮುಂದೇನಾಯಿತು ಎಂಬುದು ವಿಡಿಯೋದಲ್ಲಿ ಸೆರೆಯಾಗದೇ ಇದ್ದರೂ ಅಪಘಾತದ ತೀವ್ರತೆಗೆ ಮಹಿಳೆ ತೀವ್ರವಾಗಿ ಗಾಯಗೊಂಡಿರುವ ಸಾಧ್ಯತೆ ಇದೆ.


ಸಿಸಿಟಿವಿ ಕೆಮರಾದಲ್ಲಿ ರೆಕಾರ್ಡ್ ಆಗಿರುವ ಈ ದೃಶ್ಯಾವಳಿಯು ಅನಿರೀಕ್ಷಿತ ಅಪಾಯಗಳ ಬಗ್ಗೆ ಹೇಳುತ್ತದೆ. ಇಂತಹ ಅವಘಡದಿಂದ ಹಲವಾರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಕೆಲವರು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಹೀಗಾಗಿ ರಸ್ತೆ ಬದಿ ನಡೆದುಕೊಂಡು ಹೋಗುವಾಗಲೂ ಅನಿರೀಕ್ಷಿತ ಘಟನೆಗಳ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು.
ಈ ಕುರಿತು ವೈರಲ್ ಆಗಿರುವ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಅಪಾಯದಿಂದ ಪಾರಾಗಲು ಅವಕಾಶವಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ದರೋಡೆ ಮಾಡಲು ಬಂದು ನಿದ್ದೆ ಮಾಡಿದ ಕಳ್ಳ

ಸರ್ಕಾರಿ ನೌಕರನೊಬ್ಬನ ಮನೆಗೆ ದರೋಡೆ ಮಾಡಲು ಬಂದ ಕಳ್ಳನೊಬ್ಬ ನಿದ್ದೆಗೆ ಜಾರಿದ ಘಟನೆ ಲಕ್ನೋದಲ್ಲಿ ನಡೆದಿದ್ದು, ಪೊಲೀಸರು ಬಂದ ಬಳಿಕವೇ ಆತನಿಗೆ ಎಚ್ಚರವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ವಿಚಿತ್ರ ಘಟನೆ ಇದಾಗಿದೆ. ಕೈಗೆ ಸಿಕ್ಕಿದ್ದನ್ನೆಲ್ಲಾ ದರೋಡೆ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ ಆರಾಮ ಮತ್ತು ತಂಪಾಗಿಸುವ ಎಸಿ ಗಾಳಿಯ ಅಡಿಯಲ್ಲಿ ನಿದ್ದೆಗೆ ಜಾರಿದನು. ಆತನ ಸಹಚರರು ಆತನನ್ನು ಎಬ್ಬಿಸಲು ಪ್ರಯತ್ನಿಸಿ ಸುಸ್ತಾಗಿ ಆತನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.

ಬೆಳಗ್ಗೆ ಮನೆಯ ಗೇಟ್ ತೆರೆದಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಪಾಸಣೆಗೆ ಬಂದ ಪೊಲೀಸರು ಮನೆಯೊಳಗೇ ಆರಾಮವಾಗಿ ಮಲಗಿರುವ ಕಳ್ಳನನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಕಳ್ಳರು ಮನೆಯಿಂದ ಬಹಳಷ್ಟು ವಸ್ತುಗಳನ್ನು ಕದ್ದೊಯ್ದಿರುವುದು ತಿಳಿದುಬಂದಿದೆ. ಕಳ್ಳ ಎಚ್ಚರಗೊಂಡಾಗ ಅವನ ಮುಂದೆ ಪೊಲೀಸರು ಕುಳಿತಿರುವುದನ್ನು ಕಂಡು ಆತ ಗಾಬರಿಯಾಗಿದ್ದಾನೆ. ಬಳಿಕ ಆತ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ವಿವರಿಸಿದ್ದು, ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version