ಬೆಂಗಳೂರು: ಪ್ರಾಣಿಗಳ ಜೀವನ ಶೈಲಿ ಎಂದಿಗೂ ಕುತೂಹಲ ಹುಟ್ಟಿಸುವಂತಹದ್ದು. ಅವುಗಳ ವರ್ತನೆ, ಬೇಟೆಯಾಡುವ ರೀತಿ, ದೈನಂದಿನ ಚಟುವಟಿಕೆಗಳನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತವೆ. ಅದಕ್ಕೆ ತಕ್ಕಂತೆ ಪ್ರಾಣಿಗಳ ವಿಡಿಯೊ ಆಗಾಗ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡು ಸದ್ದು ಮಾಡುತ್ತವೆ. ಈಗಲೂ ಅಂತಹದ್ದೇ ವಿಡಿಯೊವೊಂದು ವೈರಲ್ ಆಗಿದೆ. ಹುಲಿ ಮರಿಯೊಂದು ಬಾಲ್ ಹಿಡಿದು ಆಟವಾಡುವ ಮುದ್ದಾದ ವಿಡಿಯೊ ಇದಾಗಿದೆ (Viral Video).
ಹುಲಿಗಳು ಒತ್ತಡವನ್ನು ನಿವಾರಿಸಲು ಮತ್ತು ಉಷ್ಣತೆಯಿಂದ ಪಾರಾಗಲು ಗಂಟೆಗಟ್ಟಲೆ ನೀರಿನಲ್ಲಿ ಈಜುತ್ತವೆ. ಇಲ್ಲಿಯೂ ಅಂತಹದ್ದೇ ದೃಶ್ಯ ಸೆರೆಯಾಗಿದೆ. ಈ ಹುಲಿ ಮರಿ ದೊಡ್ಡದಾದ ಬಾಲ್ ಹಿಡಿದುಕೊಂಡು ಕೊಳದಲ್ಲಿ ಕಿರು ನಿದ್ದೆ ಮಾಡಲು ಪ್ರಯತ್ನಿಸುತ್ತಿದೆ. ಅದು ಕಣ್ಣು ಮುಚ್ಚುತ್ತಿದ್ದಂತೆ ಬಾಲ್ ಕೈಯಿಂದ ಜಾರುತ್ತದೆ. ಅದನ್ನು ಮತ್ತೆ ಬಿಗಿ ಹಿಡಿದು ನಿದ್ದೆ ಮಾಡಲು ಮಾಡಲು ಪ್ರಯತ್ನಿಸುತ್ತದೆ. ಸೆಕೆಯಿಂದ ಪಾರಾಗಿ ಒಂದೊಳ್ಳೆ ನಿದ್ದೆ ಮಾಡಬೇಕು ಎನ್ನುವುದು ಈ ಹುಲಿ ಮರಿಯ ಉದ್ದೇಶ. ಜತೆಗೆ ಬಾಲ್ ಅನ್ನು ಯಾರಾದರೂ ಕಸಿದುಕೊಳ್ಳಬಹುದೆಂಬ ಅನುಮಾನವೂ ಕಾಡಿರಬೇಕು. ಅದಕ್ಕೆ ಬಾಲ್ ಅನ್ನು ಬಿಗಿಯಾಗಿ ಹಿಡಿದುಕೊಂಡಿದೆ. ಒಟ್ಟಿನಲ್ಲಿ ಈ ಹುಲಿ ನಮ್ಮ-ನಿಮ್ಮ ನಡುವೆ ಓಡಾಡುವ ಬೆಕ್ಕಿನ ತುಂಟಾಟವನ್ನು ನೆನಪಿಸುವಂತಿದೆ.
ನೆಟ್ಟಿಗರು ಫಿದಾ
ಮರಿ ಹುಲಿಯ ಈ ಮುದ್ದಾದ ವಿಡಿಯೊಕ್ಕೆ ನೆಟ್ಟಿಗರು ಮನ ಸೋತಿದ್ದಾರೆ. ‘Wildlife Friends Foundationʼ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ʼʼಸುಮಾರು 18 ತಿಂಗಳ ಹಿಂದೆ ಈ ಮರಿ ಹುಲಿಯನ್ನು ರಕ್ಷಿಸಲಾಗಿದೆ. ಇದಕ್ಕೆ ಮಾರುಯೆ ಎಂದು ಹೆಸರಿಡಲಾಗಿದೆʼʼ ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ.
ನೆಟ್ಟಿಗರು ಏನಂದ್ರು?
ನೆಟ್ಟಿಗರು ಈ ಹುಲಿ ಬೆಕ್ಕಿನ ಮರಿಯಂತೆ ವರ್ತಿಸುತ್ತಿರುವ ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಇದು ಮುದ್ದಾದ ವಿಡಿಯೊ ಎಂದು ಹೇಳಿದ್ದಾರೆ. ಒಬ್ಬರಂತೂ ʼʼಹುಲಿ ಅಪಾಯಕಾರಿ ಪ್ರಾಣಿಯಾದರೂ ಈ ವಿಡಿಯೊ ನೋಡಿ ಮನೆಯಲ್ಲಿ ಸಾಕುವ ಮನಸ್ಸಾಗುತ್ತಿದೆʼʼ ಎಂದು ಕಮೆಂಟ್ ಮಾಡಿದ್ದಾರೆ. ʼʼಇದು ಹುಲಿ ಅಂತ ಗೊತ್ತು. ಹಾಗಿದ್ದರೂ ಅದನ್ನು ಸಾಕಬೇಕು, ತಬ್ಬಿಕೊಳ್ಳಬೇಕು ಮತ್ತು ಅದರ ಜತೆ ಆಟ ಆಡಬೇಕು ಎಂದೆನಿಸುತ್ತಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಹುಲಿ ಬೆಕ್ಕಿನ ಜಾತಿಗೆ ಸೇರಿದ್ದು ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೆ?ʼʼ ಎಂದಿದ್ದಾರೆ ಮತ್ತೊಬ್ಬರು. ʼʼಅದರ ಕೈಯಿಂದ ಬಾಲ್ ಕಿತ್ತುಕೊಳ್ಳಬೇಕು. ಆಗ ಯಾವ ರೀತಿ ವರ್ತಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇದೆʼʼ ಎಂದು ಮಗದೊಬ್ಬರು ಹೇಳಿದ್ದಾರೆ. ʼʼಅದ್ಭುತ ವಿಡಿಯೊ, ಅದ್ಭುತ ಹುಲಿʼʼ ಎಂದು ನೆಟ್ಟಿಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಕಾಳಿಂಗ ಸರ್ಪದೊಂದಿಗೆ ಮಗುವಿನ ಆಟ; ಇಲ್ಲಿದೆ ಬೆಚ್ಚಿ ಬೀಳಿಸುವ ವಿಡಿಯೊ
ಮೊಸಳೆ ಬೇಟೆಗೆ ಸ್ಕೆಚ್ ಹಾಕಿದ ಹುಲಿ
ಕೆಲವು ದಿನಗಳ ಹಿಂದೆಯಷ್ಟೇ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಮೊಸಳೆ ಜತೆಗೆ ಕಾದಾಡುವ ವಿಡಿಯೊ ವೈರಲ್ ಆಗಿತ್ತು. ಪ್ರವಾಸಿಗರೊಬ್ಬರು ಕ್ಯಾಮೆರಾದಲ್ಲಿ ಸೆರೆಯಾದ ಈ ರೋಚಕ ಹೋರಾಟದ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ