Site icon Vistara News

Viral Video: ಶೇ. 100ರಷ್ಟು ಆದಾಯ ತೆರಿಗೆಯನ್ನು ಹೀಗೂ ಉಳಿಸಬಹುದಂತೆ ನೋಡಿ!

Viral Video

ಸಂಬಳ ಪಡೆಯುವ ತೆರಿಗೆದಾರರಿಗೆ ತಮ್ಮ ಆದಾಯದಲ್ಲಿ ಶೇ. 100ರಷ್ಟು ಉಳಿತಾಯ ಮಾಡುವ ದಾರಿಯನ್ನು ಕನ್ನಡಿಗನೊಬ್ಬ ಸರಳವಾಗಿ ತೋರಿಸಿದ್ದಾನೆ. ಆದಾಯ ತೆರಿಗೆ ಉಳಿಸುವ (save income tax) ಬಗ್ಗೆ “ಹಣಕಾಸಿನ ಸಲಹೆ” (financial advice) ನೀಡಿದ ಶ್ರೀನಿಧಿ ಹಂದೆ ಅವರ ವಿಡಿಯೋ ಇನ್‌‌ಸ್ಟಾಗ್ರಾಮ್ ನಲ್ಲಿ ( Instagram) ಹಂಚಿಕೊಳ್ಳಲಾಗಿದ್ದು, ಇದು ಭಾರಿ ವೈರಲ್ (Viral Video) ಆಗಿದೆ.

ಜುಲೈ 23ರಂದು ಕೇಂದ್ರ ಬಜೆಟ್ 2024 ಅನ್ನು ಮಂಡಿಸಿದ ಬಳಿಕ ಶ್ರೀನಿಧಿ ಹಂದೆ ಅವರು ವಿಡಂಬನಾತ್ಮಕ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಉದ್ಯೋಗದಾತರಿಗೆ ಹುಲ್ಲು ಬೆಳೆದು ಮಾರಾಟ ಮಾಡುವ ಮೂಲಕ ಶೇ. 100ರಷ್ಟು ಆದಾಯ ತೆರಿಗೆಯನ್ನು ಹೇಗೆ ಉಳಿಸಬಹುದು ಎಂಬುದನ್ನು ವಿವರಿಸಿದ್ದಾರೆ.

ಈ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಂದೆ ಅವರ ವಿಡಿಯೋವನ್ನು ಚಾರ್ಟರ್ಡ್ ಅಕೌಂಟೆಂಟ್ ಅಖಿಲ್ ಪಚೋರಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಎಕ್ಸ್ ನಲ್ಲಿಯೂ ವೇಗವಾಗಿ ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಬಳಕೆದಾರರು ಇದಕ್ಕೆ ನಗುವಿನ ಇಮೋಜಿ ಕಳುಹಿಸಿದ್ದಾರೆ.

ಈ ವಿಡಿಯೋದಲ್ಲಿ ಶ್ರೀನಿಧಿ ಹಂದೆ ಅವರು ಹೀಗೆ ಹೇಳಿದ್ದಾರೆ. ಆದಾಯ ತೆರಿಗೆಯಲ್ಲಿ ಶೇ. 100ರಷ್ಟು ಉಳಿಸುವುದು ಹೇಗೆ ಎಂದು ನಾನು ನಿಮಗೆ ಹೇಳುತ್ತೇನೆ. ಇದು ಅತ್ಯಂತ ಸುಲಭ, ಕಾನೂನು ಮತ್ತು ಸರಳ ಪ್ರಕ್ರಿಯೆಯ ಮೂರು ಹಂತಗಳನ್ನು ಒಳಗೊಂಡಿದೆ.

ಮೊದಲನೇ ಹಂತದಲ್ಲಿ ನೀವು ನಿಮ್ಮ ಮನೆಯಲ್ಲಿ ಅಥವಾ ಬಾಲ್ಕನಿ ಅಥವಾ ನಿಮ್ಮ ಟೆರೇಸ್ ನಲ್ಲಿ ಹುಲ್ಲು ಬೆಳೆಯಬೇಕು. ಇದು ತುಂಬಾ ಕಾನೂನು ಪ್ರಕ್ರಿಯೆಯಾಗಿದೆ. ಈಗ ಹೆಚ್ ಆರ್ ಗೆ ಹೋಗಿ ನಿಮಗೆ ಯಾವುದೇ ಸಂಬಳ ಬೇಡ ಎಂದು ಹೇಳಿ. ಅವರು ನಿಮ್ಮ ಸಂಬಳಕ್ಕೆ ತಕ್ಕುದಾಗಿ ಕಂಪೆನಿಯು 50,000 ರೂ. ನ ಹುಲ್ಲು ಖರೀದಿಸಬೇಕು ಎಂದು ಹೇಳಿ. ಕಾನೂನು ಪ್ರಕ್ರಿಯೆಯಂತೆ ಅವರು ಖರೀದಿ ಮಾಡಿದ ಹುಲ್ಲಿಗೆ ನಿಮಗೆ ಹಣ ಪಾವತಿ ಮಾಡಿದರೆ ನೀವು ಆದಾಯ ತೆರಿಗೆಯಿಂದ ಮುಕ್ತರಾಗುತ್ತೀರಿ.

ಸಂಬಳದಿಂದ ಬರುವ ಆದಾಯ ಶೂನ್ಯವಾಗುತ್ತದೆ ಮತ್ತು ಭಾರತದಲ್ಲಿ ತೆರಿಗೆಗೆ ಒಳಪಡದ ಕೃಷಿ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ನೀವು ಹೊಂದಿರುತ್ತೀರಿ. ಈ ಮೂಲಕ ಶೇ. 100ರಷ್ಟು ತೆರಿಗೆಯನ್ನು ಉಳಿಸಬಹುದು. ಆದಾಯ ತೆರಿಗೆ, ಟಿಡಿಎಸ್ ಅಥವಾ ಹೂಡಿಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ.


ಭಾರತೀಯರು ನಿಜವಾಗಿಯೂ ಎಲ್ಲದಕ್ಕೂ ಒಂದಲ್ಲ ಒಂದು ತಂತ್ರ ಹೊಂದಿರುತ್ತಾರೆ ಎಂಬುದು ಈ ವಿಡಿಯೋ ವೈರಲ್ ಆದ ಅನಂತರ ಕಾಮೆಂಟ್‌ಗಳ ವಿಭಾಗದಲ್ಲಿ ಸಾಕಷ್ಟು ಮಂದಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಅಪಘಾತವಾದ ಲಾರಿಯಿಂದ ಜ್ಯೂಸ್‌ ಪ್ಯಾಕ್‌ ಎತ್ತಿಕೊಂಡ ಐಫೋನ್‌ಧಾರಿ! ದೊಡ್ಡವರ ಸಣ್ಣತನ ಎಂದ ನೆಟ್ಟಿಗರು

ಕೇಂದ್ರ ಬಜೆಟ್ 2024 ರಲ್ಲಿ ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ 75,000 ಮಾಸಿಕ ಆದಾಯ ಪಡೆಯುವವರಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಈ ಹಿಂದೆ ೫೦,೦೦೦ ರೂ. ಆಗಿತ್ತು. ರೀ ಬಾರಿಯ ಬಜೆಟ್ ನಲ್ಲಿ 25,000 ರೂ. ನಷ್ಟು ಹೆಚ್ಚಿಸಲಾಗಿದೆ.

Exit mobile version