Site icon Vistara News

Viral Video: ಇಂದಿನ ತಲೆಮಾರು ಭಾರೀ ಫಾಸ್ಟ್;‌ ಹೇಗೆ ಎನ್ನುವ ಪ್ರಶ್ನೆಗೆ ಈ ಆಮೆಯ ವಿಡಿಯೊ ನೋಡಿ

viral news

viral news

ಬೆಂಗಳೂರು: ನಿಧಾನವಾಗಿ ಚಲಿಸುವ ಪ್ರಾಣಿಗಳ ಹೆಸರನ್ನು ಪಟ್ಟಿ ಮಾಡುವಾಗ ಬರುವ ಮೊದಲ ಹೆಸರೇ ಆಮೆ. ಹೀಗಾಗಿ ನಿಧಾನ ಚಲನೆಗೆ ʼಆಮೆ ವೇಗʼ ಎಂದೇ ಕರೆಯಲಾಗುತ್ತದೆ. ಆದ್ದರಿಂದ ಆಮೆ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಬರುವ ಚಿತ್ರಣ ನಿಧಾನವಾಗಿ ಸಾಗುವ ದೃಶ್ಯವೊಂದೇ. ಆದರೆ ನಿಮ್ಮ ಕಲ್ಪನೆಯನ್ನು ಬುಡಮೇಲು ಮಾಡುವ ವಿಡಿಯೊವೊಂದು ಇಲ್ಲಿದೆ (Viral Video). ಅದೇನು ಎನ್ನುವುದರ ವಿವರ ಇಲ್ಲಿದೆ.

ವಿಡಿಯೊದಲ್ಲೇನಿದೆ?

ಬಹುತೇಕರ ಯೋಚನೆಯನ್ನು ಬದಲಾಯಿಸುವಂತೆ ಆಮೆಯೊಂದು ವೇಗವಾಗಿ ಸಾಗುವ ದೃಶ್ಯ ಈ ವಿಡಿಯೊದಲ್ಲಿ ಸೆರೆಯಾಗಿದೆ. ಸೇತುವೆಯ ಮೇಲೆ ಇರುವ ಪುಟ್ಟ ಆಮೆಯೊಂದು ಶರವೇಗದಲ್ಲಿ ಸಾಗುವ ವಿಡಿಯೊ ಇದಾಗಿದೆ. “ಅತ್ಯಂತ ವೇಗದಲ್ಲಿ ಸಾಗುವ ಆಮೆಯೊಂದನ್ನು ನಾನು ನೋಡಿದೆ?ʼʼ ಎನ್ನುವ ಅಚ್ಚರಿಯೊಂದಿಗೆ ಕ್ಯಾಪ್ಶ್‌ನ್‌ನೊಂದಿಗೆ ಈ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಲಕ್ಷಾಂತರ ಮಂದಿಯಿಂದ ವೀಕ್ಷಣೆ

ಈ ಪುಟ್ಟ ವಿಡಿಯೊ ಈಗಾಗಲೇ ನೆಟ್ಟಿಗರ ಗಮನ ಸೆಳೆದಿದೆ. ಅಪ್‌ಲೋಡ್‌ ಆದ ಕೆಲವೇ ದಿನಗಳಲ್ಲಿ 30 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜತೆಗೆ ಹಲವು ಕಮೆಂಟ್‌ ಮೂಲಕ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಆಮೆಯ ಈ ಗುಪ್ತ ಮಹಾಶಕ್ತಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೆಲವರು ಹಿಂದಿನಿಂದಲೂ ಜನಜನಿತವಾಗಿರುವ ಆಮೆ-ಮೊಲ ಓಟದ ಕಥೆಯನ್ನು ನೆನಪಿಸಿಕೊಂಡಿದ್ದಾರೆ. ವಿಡಿಯೊ ನೋಡಿದ ಹಲವರು ಇಂದಿನ ವೇಗದ ಜೀವನಕ್ಕೆ ಅನುಗುಣವಾಗಿ ಆಮೆಯೂ ತನ್ನ ಶೈಲಿಯನ್ನು ಬದಲಾಯಿಸಿಕೊಂಡಿದೆ ಎಂದು ಹೇಳಿದ್ದಾರೆ.

ʼʼಮೊಲದ ಜತೆಗಿನ ಮುಂದಿನ ಬಾರಿಯ ಓಟಕ್ಕಾಗಿ ಆಮೆ ತಯಾರಿ ನಡೆಸುತ್ತಿದೆʼʼ ಎಂದು ಒಬ್ಬರು ಹೇಳಿದ್ದಾರೆ. ಆಮೆಯ ಅನಿರೀಕ್ಷಿತ ವೇಗದಿಂದ ಅಚ್ಚರಿಗೊಳಗಾದ ಇನ್ನೊಬ್ಬರು, ʼʼಇದನ್ನು ನಂಬಲು ಸಾಧ್ಯವಾಗುತ್ತಿಲ್ಲʼʼ ಎಂದು ಉದ್ಘರಿಸಿದ್ದಾರೆ. ʼʼಮನೆಯಲ್ಲಿ ಯಾರೂ ಇಲ್ಲ ಎಂದು ಅದರ ಪ್ರೇಯಸಿ ಹೇಳಿರಬೇಕು. ಅದಕ್ಕಾಗಿ ಆಮೆ ತರಾತುರಿಯಿಂದ ಹೊರಟಿದೆʼʼ ಎಂದು ಮಗದೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼʼಈ ವಿಡಿಯೊವನ್ನು ನಾನು ಪದೇ ಪದೆ ವೀಕ್ಷಿಸುತ್ತಿದ್ದೇನೆʼʼ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಆಮೆಯ ಈ ವಿಡಿಯೊ ಹಲವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಪ್ಪು ಶೂ ಕಂಡರೆ ಕೋಪಗೊಳ್ಳುವ ಆಮೆ

ಕೆಲವು ತಿಂಗಳ ಹಿಂದೆ ಇಂತಹದ್ದೇ ವಿಶಿಷ್ಟ ಸ್ವಭಾವದ ಆಮೆಯೊಂದು ಇಂಟರ್‌ ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಫ್ಯಾಷನ್‌ ಪ್ರಿಯ ಆಮೆಗೆ ಕಪ್ಪು ಶೂ ಕಂಡರೆ ಆಗುತ್ತಿರಲಿಲ್ಲವಂತೆ. ತನ್ನ ಏರಿಯಾದಲ್ಲಿ ಯಾರೊಬ್ಬರೂ ಕಪ್ಪು ಶೂ ಹಾಕಿದ್ದು ಕಂಡರೆ ಸೀದಾ ಹೋಗಿ ಅವರ ಮೇಲೆ ದಾಳಿ ಮಾಡುತ್ತಿತ್ತು. 12 ವರ್ಷದ ಈ ಸಾಕು ಪ್ರಾಣಿ ಆಮೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. 24ರ ಹರೆಯದ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ಶೈರ್‌ನ ಹ್ಯಾರಿ ವೀನ್ಸ್‌ ಎಂಬಾತ ಈ ವಿಚಾರವನ್ನು ಹಂಚಿಕೊಂಡಿದ್ದು, ತನ್ನ ಅಜ್ಜಿಯ ತೋಟದಲ್ಲಿ ಇರುವ ಟಾಮಿ ಶೆಲ್ಬಿ ಎಂಬ ಆಮೆಗಾಗಿ ನಾನು ಶೂ ಹಾಕುವುದನ್ನೇ ಬಿಟ್ಟು ಬರಿಗಾಲಲ್ಲಿ ನಡೆಯುತ್ತೇನೆ. ಯಾವಾಗ ನಾನು ಕಪ್ಪು ಶೂ ಹಾಕುತ್ತೇನೋ ಆಗ ಅದು ನನ್ನ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದ್ದರು. ಇದು ವೈರಲ್‌ ಆಗಿತ್ತು.

ಇದನ್ನೂ ಓದಿ: Viral Video: ಕಾಲು ಮುಟ್ಟಿ ನಮಸ್ಕರಿಸಲು ಬಂದ ಅಭಿಮಾನಿ: ಗಲಿಬಿಲಿಗೊಂಡ ಕೆಎಲ್ ರಾಹುಲ್

Exit mobile version