Site icon Vistara News

Viral Video: ಅರಚಿ-ಕಿರುಚಿ, ತಲೆ ಬಡಿದುಕೊಂಡು ಹಣ್ಣು ಮಾರಾಟ ಮಾಡುವ ವ್ಯಾಪಾರಿ; ಯಾಕೆ ಹೀಗೆ?

Fruit Vendor

ತರಕಾರಿ-ಹಣ್ಣು ಮಾರಾಟ ಮಾಡುವವರು ಬಹುತೇಕರು ಒಂದು ವಿಭಿನ್ನತೆಯನ್ನು ಅಳವಡಿಸಿಕೊಂಡಿರುತ್ತಾರೆ. ಅದರಲ್ಲೂ ಕೈಗಾಡಿ ತಳ್ಳಿಕೊಂಡು ಬರುವವರು ಗ್ರಾಹಕರನ್ನು ಸೆಳೆಯಲು ವಿಚಿತ್ರ-ವಿಶಿಷ್ಟವಾಗಿ ಕೂಗುವುದನ್ನು ನೋಡಿದ್ದೇವೆ. ಆದರೆ ನೀವು ಒಮ್ಮೆ ಈ ವಿಡಿಯೋ ನೋಡಿ. ಇದರಲ್ಲಿರುವ ಹಣ್ಣಿನ ವ್ಯಾಪಾರಿಯಂಥವನನ್ನು ನೀವು ನೋಡಿರಲಿಕ್ಕಿಲ್ಲ. ಇವರು ರಸ್ತೆ ಬದಿಯಲ್ಲಿ ಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಾರೆ. ಆದರೆ ಅವರ ವ್ಯಾಪಾರದ ಶೈಲಿ ನೋಡಿದರೆ ಭಯವಾಗುತ್ತದೆ.

ವ್ಯಾಪಾರಿಯ ಹೆಸರು ಯಾಸಿನ್‌ ಎಂದಾಗಿದ್ದು, ಇವರು ಗಾಡಿಯಲ್ಲಿ ಕಲ್ಲಂಗಡಿ, ಪಪ್ಪಾಯ ಹಣ್ಣನ್ನು ಇಟ್ಟುಕೊಂಡಿದ್ದಾರೆ. ಅದನ್ನು ಕತ್ತರಿಸಿದ ಕೂಡಲೇ ದೊಡ್ಡದಾಗಿ ಅರಚುತ್ತಾರೆ. ಆ ಹಣ್ಣುಗಳು ಕೊಳೆತಿಲ್ಲ, ಸರಿಯಾಗಿ ಹಣ್ಣು ಆಗಿ ಸೊಗಸಾಗಿದೆ ಎಂಬುದನ್ನು ಕೂಗುತ್ತ, ತಲೆ ಬಡಿದುಕೊಳ್ಳುತ್ತ, ಅರಚುತ್ತ ತೋರಿಸುವ ಇವರನ್ನು ನೋಡಿದರೆ ಭಯದ ಜತೆ, ನಗುವೂ ಬರುತ್ತದೆ. ಅವರು ಕಿರುಚುವ ಪರಿಗೆ ಗ್ರಾಹಕರು ಸಹಜವಾಗಿಯೇ ಅವರತ್ತ ಹೋಗುತ್ತಾರೆ. ಒಮ್ಮೊಮ್ಮೆ ತಮ್ಮ ಮುಖ, ಕಣ್ಣು-ಬಾಯಿಯನ್ನೆಲ್ಲ ವಿಚಿತ್ರವಾಗಿ ತಿರುಗಿಸುತ್ತಾರೆ. ಎರಡೂ ಕೈಯಲ್ಲಿ ಹಣ್ಣನ್ನು ಇಟ್ಟುಕೊಂಡು ʼಬನ್ನಿ ಬನ್ನಿʼ ಎಂದು ಒಂದೇ ಸಮನೆ ಉಸಿರಾಡದೆ ಕಿರುಚುತ್ತಾರೆ. ಸ್ಟೀಲ್‌ನ ಬಟ್ಟಲೊಂದರಲ್ಲಿ ಕಲ್ಲಂಗಡಿ ಹಣ್ಣಿಗೆ ಬಡಿದು, ತಮ್ಮ ತಲೆಗೂ ಬಡಿದುಕೊಳ್ಳುವುದನ್ನೂ ನೋಡಬಹುದು.

ಈ ವಿಡಿಯೋ ಯೂಟ್ಯೂಬ್‌, ರೆಡ್ಡಿಟ್‌ ಸೇರಿ ಬಹುತೇಕ ಎಲ್ಲ ಸೋಷಿಯಲ್‌ ಮೀಡಿಯಾಗಳಲ್ಲೂ ವೈರಲ್‌ ಆಗುತ್ತಿದೆ. ವ್ಯಾಪರಿಯ ಅರಚಾಟವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಆದರೆ ಕೆಲವರು ಇದು ಕಿರಿಕಿರಿ ಎಂದಿದ್ದಾರೆ. ವ್ಯಾಪಾರಿಯನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಅವರಿಗೆ ಆಗುತ್ತಿರುವ ಲಾಭವೇ ಸಾಕ್ಷಿ. ʼನನ್ನ ಎದುರು ಭಾಗದಲ್ಲಿ ಇನ್ನೊಬ್ಬ ವ್ಯಾಪಾರಿ ಹಣ್ಣುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ. ಆದರೆ ಇಲ್ಲಿ ಬರುವವರು ಹೆಚ್ಚಿನ ಜನ ನನ್ನ ಬಳಿಯೇ ಬಂದು ಹಣ್ಣು ಖರೀದಿ ಮಾಡುತ್ತಾರೆʼ ಎಂದು ಯಾಸಿನ್‌ ಹೇಳಿಕೊಂಡಿದ್ದಾರೆ. ಹಾಗೇ, ನನ್ನ ಈ ಸ್ಟೈಲ್‌ನಿಂದಲೇ ಗ್ರಾಹಕರು ನನ್ನ ಅಂಗಡಿಗೆ ಬರುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: Viral Video | ಹಲ್ಲಿಯೊಂದು ಹಳ್ಳಿಯೊಂದರಲ್ಲಿ ಚಹ ಕುಡಿಯಿತಂತೆ!

Exit mobile version