Site icon Vistara News

Viral Video: ಜಿಂಕೆಯನ್ನು ತಿನ್ನಲು ಸುರುಳಿ ಸುತ್ತಿದ ಹೆಬ್ಬಾವಿಗೆ ಕೊನೆಗೆ ಆಗಿದ್ದೇನು? ಭಯಾನಕ ವಿಡಿಯೊ

Viral Video


ಬೆಂಗಳೂರು: ಹೆಚ್ಚಿನ ಜನ ಸ್ವಾರ್ಥಿಯಾಗಿರುತ್ತಾರೆ. ಯಾಕೆಂದರೆ ಯಾವುದೇ ಜೀವಿಗಳು ಸಂಕಷ್ಟದಲ್ಲಿದ್ದರೂ ಕೂಡ ಅವುಗಳನ್ನು ರಕ್ಷಿಸುವ ಬದಲು ತನ್ನ ಜೀವ ಉಳಿದರೆ ಸಾಕು ಎಂದು ಓಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಜೀವವನ್ನು ಲೆಕ್ಕಿಸದೆ ಜಿಂಕೆಯೊಂದರ ಪ್ರಾಣ ರಕ್ಷಣೆಗೆ ಮುಂದಾಗಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವ್ಯಕ್ತಿಯ ಕಾರ್ಯವನ್ನು ಮೆಚ್ಚಿಕೊಂಡರೆ ಕೆಲವರು ಪ್ರಕೃತಿ ನಿಯಮವನ್ನು ಉಲ್ಲಂಘಿಸಿರುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಆಘಾತಕಾರಿ ವಿಡಿಯೊದಲ್ಲಿ ಬೃಹತ್ ಹೆಬ್ಬಾವೊಂದು ಮತ್ತು ಜಿಂಕೆಯನ್ನು ಹಿಡಿದಿರುವ ದೃಶ್ಯ ಕಂಡುಬಂದಿದೆ. ಹೆಬ್ಬಾವು ರಸ್ತೆ ಬದಿಯಲ್ಲಿ ಜಿಂಕೆಯೊಂದರ ಮೈಯನ್ನು ಬಿಗಿಯಾಗಿ ಸುತ್ತಿಕೊಂಡಿರುವುದನ್ನು ತೋರಿಸುತ್ತದೆ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಮರದ ಕೊಂಬೆಯಿಂದ ಹೊಡೆಯುತ್ತಿರುವುದನ್ನು ತೋರಿಸುತ್ತದೆ. ಆಗ ಹೆದರಿದ ಹೆಬ್ಬಾವು ಜಿಂಕೆಯನ್ನು ಬಿಟ್ಟು ಓಡಿ ಹೋಗಿದೆ. ಗಾಬರಿಗೊಂಡಿದ್ದ ಜಿಂಕೆ ಜೀವ ಉಳಿಸಿಕೊಂಡು ಓಡಿ ಹೋಗಿದೆ. ಕಾರಿನ ಒಳಗಿನಿಂದ ಚಿತ್ರೀಕರಿಸಲಾದ ಈ ದೃಶ್ಯ ನೈಜ ಘಟನೆಯಾಗಿದ್ದು, ಇದನ್ನು 50 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. “ನೀವು ಚಾಲನೆ ಮಾಡುತ್ತಿದ್ದಾಗ ಇದನ್ನು ನೋಡಿದರೆ, ನೀವು ಮಧ್ಯಪ್ರವೇಶಿಸುತ್ತೀರಾ ಅಥವಾ ಈ ಮುಂದುವರಿಸಲು ಬಿಡುತ್ತೀರಾ? “ ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.

ಈ ಘಟನೆ ನೈಸರ್ಗಿಕವಾಗಿದೆ. ಯಾಕೆಂದರೆ ಒಂದು ಪ್ರಾಣಿ ತನ್ನ ಆಹಾರಕ್ಕಾಗಿ ಮತ್ತೊಂದು ಪ್ರಾಣಿಯನ್ನು ಹಿಡಿದು ತಿನ್ನುವುದು ಅನಿರ್ವಾಯ. ಇದು ದೇವರ ಸೃಷ್ಟಿ. ಆದರೆ ಇಂತಹ ಘಟನೆಯಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವೇ ಎಂಬ ಬಗ್ಗೆ ಈ ವಿಡಿಯೊ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

ಜಿಂಕೆಯ ಜೀವ ಉಳಿಸಿದ್ದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಹೆಬ್ಬಾವಿನ ಆಹಾರವನ್ನು ಕಸಿದುಕೊಂಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕೃತಿಯ ನಿಯಮಗಳ ಮಧ್ಯೆ ಹಸ್ತಕ್ಷೇಪ ಮಾಡಬೇಡಿ. ಇದು ಸೂಕ್ಷ್ಮ ಸಮತೋಲನವಾಗಿದೆ. ಅದನ್ನು ಭಂಗಗೊಳಿಸುವುದು ಒಳ್ಳೆಯದಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಆ ವ್ಯಕ್ತಿ ಅಲ್ಲಿಗೆ ಬಂದಿರುವುದೇ ಈ ಜಿಂಕೆಯ ಜೀವ ಉಳಿಸಲು ಎಂದು ಸಮರ್ಥನೆ ನೀಡಿದ್ದಾರೆ.

Exit mobile version