Site icon Vistara News

Viral Video: ಅರೆಬರೆ ಬಟ್ಟೆಯಲ್ಲೇ ರೈಲಿನಲ್ಲಿ ಡ್ಯಾನ್ಸ್‌ ಮಾಡಿದ ಯುವತಿ; ಛೀಮಾರಿ ಹಾಕಿದ ಜನ

dance

dance

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾಗಳ ಬಳಕೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಎಲ್ಲೆಡೆ ಮಿಂಚಬೇಕು, ವೈರಲ್‌ ಆಗಬೇಕು ಎನ್ನುವ ಮನಸ್ಥಿತಿ ಯುವ ಜನತೆಯಲ್ಲಿ ಹೆಚ್ಚಾಗಿದೆ. ಅದಕ್ಕಾಗಿ ಅವರು ಏನು ಮಾಡಲು ಬೇಕಾದರೂ ತಯಾರಿರುತ್ತಾರೆ. ಅಪಾಯಕಾರಿ ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ಕ್ರೂರ ಪ್ರಾಣಿ, ಹಾವಿನ ಜತೆ ವಿಡಿಯೊ ಮಾಡುವುದು, ಚಲಿಸುವ ವಾಹನಗಳಲ್ಲಿ ರೀಲ್ಸ್‌ ಮಾಡುವುದು ಮುಂತಾದ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾರೆ. ಇನ್ನು ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ, ಇತರರಿಗೆ ಕಿರಿಕಿರಿಯಾಗುತ್ತದೆ ಎನ್ನುವುದನ್ನೂ ಲೆಕ್ಕಿಸದೆ ಡ್ಯಾನ್ಸ್‌ ಮಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಸದ್ಯ ಯುವತಿಯೊಬ್ಬಳು ಜನನಿಬಿಡ ರೈಲಿನ ಬೋಗಿಯೊಂದರಲ್ಲಿ ಕುಣಿಯುವ ವಿಡಿಯೊ ವೈರಲ್‌ (Viral Video) ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಅದು ಜನನಿಬಿಡ ರೈಲಿನ ಬೋಗಿ. ಸೀಟ್‌ ಎಲ್ಲ ಭರ್ತಿ ಆಗಿ ಪ್ರಯಾಣಿಕರು ಅಲ್ಲಲ್ಲಿ ನಿಂತು ಪ್ರಯಾಣಿಸುತ್ತಿದ್ದಾರೆ. ಈ ಮಧ್ಯೆ ಜಾಗ ಮಾಡಿಕೊಂಡು ಯುವತಿಯೊಬ್ಬಳು ಭೋಜ್‌ಪುರಿ ಹಾಡಿಗೆ ನರ್ತಿಸುತ್ತಾಳೆ. ಈ ವಿಡಿಯೊ ಇದೀಗ ಹರಿದಾಡುತ್ತಿದೆ. ಕೆಲವರು ಆಕೆಯ ಡ್ಯಾನ್ಸ್‌ ಅನ್ನು ಚಿತ್ರೀಕರಿಸುತ್ತಿದ್ದರೆ ಇನ್ನು ಕೆಲವರು ಕಿರಿಕಿರಿ ಅನುಭವಿಸುತ್ತಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಈಗಾಗಲೇ ಈ ವಿಡಿಯೊವನ್ನು 2 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಕ್ಲಾಸ್‌ ತೆಗೆದುಕೊಂಡ ನೆಟ್ಟಿಗರು

ಹಲವರು ಯುವತಿಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼʼಲೋಕಲ್‌ ರೈಲು ಮತ್ತು ಸ್ಟೇಷನ್‌ಗಳಲ್ಲಿ ರೀಲ್ಸ್‌ ಮಾಡುವುದನ್ನು ನಿಷೇಧ ಮಾಡಬೇಕುʼʼ ಎಂದು ಒಬ್ಬರು ಆಗ್ರಹಿಸಿದ್ದಾರೆ. ʼʼಇಂತಹ ಪ್ರವೃತ್ತಿಯನ್ನು ನಿಲ್ಲಿಸಬೇಕುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಸಾರ್ವಜನಿಕ ಸಾರಿಗೆಗಳಲ್ಲಿ ರೀಲ್ಸ್‌ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕುʼʼ ಎಂದು ಮಗದೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ʼʼನೀವು ಮಾಡಬಲ್ಲಿರಿ ಎಂದ ಮಾತ್ರಕ್ಕೆ ನೀವು ಹಾಗೆ ಮಾಡಲೇಬೇಕು ಎಂದರ್ಥವಲ್ಲʼʼ ಎಂದು ಮತ್ತೊಬ್ಬರು ಬುದ್ಧಿಮಾತು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗರಿಗೆ ಇದು ʼವಿಚಿತ್ರ ಸ್ವಭಾವʼದಂತೆ ಭಾಸವಾಗಿದೆ. ʼʼಇದೂ ಒಂದು ರೀತಿಯ ಮಾನಸಿಕ ದೌರ್ಜನ್ಯ ಎಂದಿದ್ದಾರೆʼʼ ನೋಡುಗರೊಬ್ಬರು. ಒಟ್ಟಿನಲ್ಲಿ ಆ ಯುವತಿಯ ಕುಣಿತಕ್ಕೆ ಮೆಚ್ಚುಗೆಗಿಂತ ಹೆಚ್ಚು ಟೀಕೆಯೇ ವ್ಯಕ್ತವಾಗಿದೆ. ಪ್ರತಿಭೆ ತೋರಲು ಬೇರೆ ಕಡೆ ಹಲವಾರು ಅವಕಾಶಗಳಿವೆ. ಅದನ್ನು ಉಪಯೋಗಿಸಲಿ. ಅದು ಬಿಟ್ಟು ಸಾರ್ವಜನಿಕರಿಗೆ ಹೀಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಹಲವರು ಸೂಚಿಸಿದ್ದಾರೆ.

ಇದನ್ನೂ ಓದಿ: Viral Video: ಇಂಥವರೂ ಇರ್ತಾರೆ ನೋಡಿ! ನಿರ್ಮಾಣ ಹಂತದ ರಸ್ತೆಯನ್ನೇ ದೋಚಿದ ಖತರ್ನಾಕ್‌ ಗ್ರಾಮಸ್ಥರು!

ಇದು ಮೊದಲ ಸಲವಲ್ಲ

ಸಾರ್ವಜನಿಕ ಸಾರಿಗೆಗಳಲ್ಲಿ ಅದರಲ್ಲೂ ರೈಲಿನಲ್ಲಿ ಇಂತಹ ಪ್ರವೃತ್ತಿ ಕಂಡು ಬರುತ್ತಿರುವುದು ಇದು ಮೊದಲ ಸಲವಲ್ಲ. ಹಿಂದೆಯೂ ಇದೇ ರೀತಿಯ ಸಾಕಷ್ಟು ವಿಡಿಯೊಗಳು ವೈರಲ್‌ ಆಗಿವೆ. ನವರಾತ್ರಿ ಸಮಯದಲ್ಲಿ ಮುಂಬೈನ ಲೋಕಲ್‌ ಟ್ರೈನ್‌ನಲ್ಲಿ ಹಿರಿಯ ನಾಗರಿಕರ ಗುಂಪೊಂದು ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕಿದ್ದ ವಿಡಿಯೊ ವೈರಲ್‌ ಆಗಿತ್ತು. ಜತೆಗೆ ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಕಳೆದ ವರ್ಷ ಮಹಿಳೆಯರ ಗುಂಪೊಂದು ಗರ್ಬಾ ನೃತ್ಯ ಪ್ರದರ್ಶನ ನೀಡುತ್ತಿದ್ದ ವಿಡಿಯೊ ಕೂಡ ಎಲ್ಲೆಡೆ ಹರಿದಾಡಿತ್ತು. ಆಗೆಲ್ಲ ಅನೇಕರು ಟೀಕಿಸಿದ್ದರೂ ಇಂತಹ ಪ್ರವೃತ್ತಿಗೆ ಬ್ರೇಕ್‌ ಹಾಕಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದು ವಿಪರ್ಯಾಸ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ

Exit mobile version