ಬೆಂಗಳೂರು: ವಿದೇಶಗಳಲ್ಲಿ ಕೆಲವರು ಐಫೆಲ್ ಟವರ್, ಸೇತುವೆಗಳು, ಮನೆಯಲ್ಲಿರುವ ಸಾಮಗ್ರಿಗಳನ್ನೆಲ್ಲ ಮದುವೆಯಾಗುವ ವಿಚಿತ್ರಗಳು ಆಗಾಗ ಸುದ್ದಿಯಾಗುತ್ತಿರುತ್ತದೆ. ಅದೇ ರೀತಿ ಇದೀಗ ಇಂಗ್ಲೆಂಡ್‌ನ ಯುವತಿಯೊಬ್ಬಳು ತಾನು ರಾತ್ರಿ ಹೊದ್ದು ಮಲಗುವ ಹೊದಿಕೆಯನ್ನೇ (Blanket) ಮದುವೆಯಾಗಿದ್ದಾಳೆ. ತನ್ನ ಬಾಯ್‌ಫ್ರೆಂಡ್ ಸಮ್ಮುಖದಲ್ಲಿಯೇ ಹೊದಿಕೆಯನ್ನು ವರಿಸಿರುವ ಈ ಯುವತಿಯ ಮದುವೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ:Viral video | ಸಹಪಾಠಿಗೆ ಥಳಿಸಿದ ತೆಲಂಗಾಣ ಬಿಜೆಪಿ ಅಧ್ಯಕ್ಷನ ಮಗ, ವಿಡಿಯೋ ವೈರಲ್
ಪಾಸ್ಕಲ್ ಸೆಲಿಕ್ ಹೆಸರಿನ ಯುವತಿ ಈ ರೀತಿ ವಿವಾಹವಾದವಳು. 2019ರ ಪ್ರೇಮಿಗಳ ದಿನದಂದೇ ಈ ವಿವಾಹ ನಡೆದಿದೆ. ಪಾಸ್ಕಲ್ ಬಳಿ ಸಾಕಷ್ಟು ಹೊದಿಕೆಗಳಿವೆಯಂತೆ. ಆದರೆ ಈ ಒಂದು ಹೊದಿಕೆ ಕೊಟ್ಟಂತಹ ಸಂತೋಷವನ್ನು ಬೇರಾವ ಹೊದಿಕೆಯೂ ಕೊಟ್ಟಿಲ್ಲವಂತೆ. ಅದೇ ಹಿನ್ನೆಲೆ ಆಕೆ ಆ ಹೊದಿಕೆಗೆ ಡುವೆಟ್ ಎನ್ನುವ ಹೆಸರನ್ನು ನಾಮಕರಣ ಮಾಡಿ, ಅದರೊಂದಿಗೆ ವಿವಾಹವಾಗಿದ್ದಾಳೆ.
ಪಾಸ್ಕಲ್ ತನ್ನ ಕುಟುಂಬಸ್ಥರು, ಸ್ನೇಹಿತರು ಹಾಗೂ ಬಾಯ್‌ಫ್ರೆಂಡ್ ಜಾನಿಯ ಸಮ್ಮುಖದಲ್ಲಿಯೇ ಹೊದಿಕೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ತಾನೇ ಉಂಗುರ ತೊಟ್ಟು, ಡುವೆಟ್ ಕಡೆಯಿಂದ ತನಗೆ ಸಿಕ್ಕಿರುವುದು ಎನ್ನುವಂತೆ ಸಂಭ್ರಮಿಸಿದ್ದಾಳೆ. ಈ ಮದುವೆಯ ಬಗ್ಗೆ ಜಾನಿ ಬೇಸರಗೊಂಡಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಆಕೆ, “ನನ್ನ ಬಾಯ್‌ಫ್ರೆಂಡ್ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ನನ್ನದು ಮತ್ತು ಡುವೆಟ್(ಹೊದಿಕೆ)ದು ಲವ್ ಅಟ್ ಫಸ್ಟ್ ಸೈಟ್. ಹಾಗಾಗಿ ನಾನು ಡುವೆಟ್‌ನ್ನು ಮದುವೆಯಾಗಿರುವುದು ಜಾನಿಗೆ ಬೇಸರ ತರಿಸಿಲ್ಲ. ಅವನು ನನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದಾನೆ” ಎಂದು ಹೇಳಿದ್ದಾಳೆ.