ನವದೆಹಲಿ: ರಸ್ತೆಗಳಲ್ಲಿ ಪ್ರಯಾಣಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಅದನ್ನೆಲ್ಲ ಮರೆತು ರಾಷ್ಟ್ರೀಯ ಹೆದ್ದಾರಿಯಲ್ಲೇ ಬರ್ತ್‌ಡೇ ಆಚರಿಸಿಕೊಂಡಿದ್ದ ಯೂಟ್ಯೂಬರ್ (Viral Video) ಒಬ್ಬನಿಗೆ ಇದೀಗ ಪೊಲೀಸರು ತಮ್ಮದೇ ಶೈಲಿಯ ಗಿಫ್ಟ್ ನೀಡಿದ್ದಾರೆ.
ಇದನ್ನೂ ಓದಿ: Viral Post: ಹೆಂಡತಿಯೇ ತಂಗಿ! ಮದುವೆಯಾಗಿ ಆರು ವರ್ಷಗಳ ಬಳಿಕ ಸತ್ಯ ಬಯಲಾದದ್ದು ಹೇಗೆ?
ಯೂಟ್ಯೂಬರ್ ಪ್ರಿನ್ಸ್ ಕಳೆದ ವರ್ಷ ನವೆಂಬರ್ 16ರಂದು ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ದೆಹಲಿಯ ಎನ್‌ಎಚ್-24ನಲ್ಲಿ ಪ್ರಿನ್ಸ್ ಹಾಗೂ ಆತನ ಸ್ನೇಹಿತರು ಕಾರಿನಲ್ಲಿಯೇ ಪಾರ್ಟಿ ಮಾಡುತ್ತಾ ತೆರಳಿದ್ದಾರೆ. ಕಾರಿನ ಸನ್‌ರೂಫ್ ತೆಗೆದು, ಹೊರಬಂದು ಕುಣಿಯುತ್ತಾ ಸಾಗಿದ್ದಾರೆ. ರಸ್ತೆ ಮಧ್ಯೆಯೇ ಅಲ್ಲಲ್ಲಿ ಗಾಡಿಯನ್ನೂ ನಿಲ್ಲಿಸಿದ್ದು, ಬೇರೆ ಪ್ರಯಾಣಿಕರಿಗೂ ತೊಂದರೆಯನ್ನುಂಟು ಮಾಡಿದ್ದಾರೆ.
ಪ್ರಿನ್ಸ್ ಅವರ ಬರ್ತ್‌ಡೇ ಸೆಲೆಬ್ರೇಷನ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಪ್ರಿನ್ಸ್‌ಗೆ ಹುಡುಕಾಟ ನಡೆಸಿದ್ದಾರೆ. ಇದೀಗ ಪ್ರಿನ್ಸ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಪ್ರಿನ್ಸ್ ಜತೆ ರಸ್ತೆಯಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಟ್ಟ ಆತನ ಸ್ನೇಹಿತರನ್ನೂ ಗುರುತಿಸಿ, ವಶಕ್ಕೆ ಪಡೆವ ಪ್ರಯತ್ನದಲ್ಲಿ ಪೊಲೀಸರಿದ್ದಾರೆ.