ಬೆಂಗಳೂರು: ಪ್ರಪಂಚದಲ್ಲೇ ಅತ್ಯಂತ ಕಷ್ಟದ ನೃತ್ಯ ಶೈಲಿಯೆಂದರೆ ಯಾವುದೆಂದು ನೀವು ಹೇಳುತ್ತೀರಿ. ಬೆಲ್ಲಿ, ಬ್ಯಾಲೆಟ್ ಎಂದು ನೀವು ಕೆಲವು ಹೆಸರನ್ನು ಹೆಸರಿಸಬಹುದು. ಆದರೆ ನೆಟ್ಟಿಗರು ಹೇಳುವ ಪ್ರಕಾರ (Viral Video) ಅತ್ಯಂತ ಕಷ್ಟದ ನೃತ್ಯ ಶೈಲಿಯೆಂದರೆ ಅದು ಜೌಲಿ ನೃತ್ಯ ಶೈಲಿಯಂತೆ. ಈ ವಿಡಿಯೊ ನೋಡಿದ ಮೇಲೆ ನೀವೂ ಕೂಡ ಇದನ್ನೇ ಅತ್ಯಂತ ಕಷ್ಟದ ನೃತ್ಯ ಶೈಲಿಯೆಂದು ಒಪ್ಪಿಕೊಂಡರೆ ಆಶ್ಚರ್ಯವೇನಿಲ್ಲ.
ಇದನ್ನೂ ಓದಿ: Viral Video | ಅಫಘಾನಿಸ್ತಾನದ ಈ ಪುಟಾಣಿಯ ನಗುವಿಗೆ ಮನಸೋಲದವರಿಲ್ಲ; ವಿಡಿಯೊ ವೈರಲ್
ಈ ಜೌಲಿ ನೃತ್ಯ ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್‌ನ ಗುರೊ ಸಮುದಾಯದವರ ನೃತ್ಯವಾಗಿದೆ. ತಲತಲಾಂತರಗಳಿಂದಲೂ ಈ ಸಮುದಾಯ ಜೌಲಿ ನೃತ್ಯವನ್ನು ಮಾಡುತ್ತಾ ಬಂದಿದೆ. ಈ ನೃತ್ಯವೆಂದರೆ ಒಂದು ರೀತಿಯ ದೈವಿಕ ಭಾವನೆ ಅವರಿಗಿದೆ. ಹಾಗಾಗಿ ಮದುವೆ, ಅಂತ್ಯಸಂಸ್ಕಾರದಂತಹ ವಿಶೇಷ ಸಂದರ್ಭದಲ್ಲಿ ಮಾತ್ರ ಈ ನೃತ್ಯವನ್ನು ಮಾಡುತ್ತಾರೆ.
ಈ ನೃತ್ಯವನ್ನು ಗುರೊ ಸಮುದಾಯದ ಪುರುಷರು ಮಾಡುತ್ತಾರೆ. ಅದಕ್ಕೆಂದೇ ವಿಶೇಷ ವೇಷ ಭೂಷಣವೂ ಇದೆ. ನೃತ್ಯ ಮಾಡುವವರು ಮುಖಕ್ಕೆ ಮರದ ಮಾಸ್ಕ್, ಅದಕ್ಕೆರೆಡು ಕೊಂಬು, ಬಣ್ಣ ಬಣ್ಣದ ಉಡುಗೆ ತೊಟ್ಟಿರುತ್ತಾರೆ. ಪ್ರಾಣಿಗಳನ್ನು ಪ್ರತಿಬಿಂಬಿಸುವಂತಹ ಕೆಲವು ವಿಶೇಷ ಆಭರಣಗಳನ್ನೂ ಹಾಕಿಕೊಂಡಿರುತ್ತಾರೆ.
ಇದನ್ನೂ ಓದಿ: Viral story | ಪ್ರತ್ಯೇಕ ದಿನ, ತಿಂಗಳು, ವರ್ಷದಲ್ಲಿ ಹುಟ್ಟಿದ ಅವಳಿ ಮಕ್ಕಳು!
ಈ ಜೌಲಿ ನೃತ್ಯದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಫಿಜೆನ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಗುರುವಾರ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, ವಿಡಿಯೊ ಒಂದೇ ದಿನದಲ್ಲಿ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. “ಅಬ್ಬಬ್ಬಾ ಇದೆಂತಾ ನೃತ್ಯ” ಎಂದು ನೆಟ್ಟಿಗರು ಕಾಮೆಂಟ್ ಮಾಡಲಾರಂಭಿಸಿದ್ದಾರೆ.