Site icon Vistara News

Viral Video : ಪಂಜಾಬಿ ಅಜ್ಜನ ಈ ಹಾಡಿಗೆ ಮನಸೋಲದವರಿಲ್ಲ; ಅಬ್ಬಬ್ಬಾ ಎಂಥ ಗೀತೆ ಎನ್ನುತ್ತಿದ್ದಾರೆ ನೆಟ್ಟಿಗರು

ಹಾಡು ಹೇಳುತ್ತಿರುವ ಅಜ್ಜ

ಬೆಂಗಳೂರು: ಹಳೆಯ ಹಾಡುಗಳನ್ನು ಕೇಳುವುದಕ್ಕೆ ಏನೋ ಒಂದು ರೀತಿಯ ಆನಂದ. ಅದರಲ್ಲೂ ವಯಸ್ಸಿನಲ್ಲಿ ಹಿರಿಯರೇ ಆ ಹಾಡುಗಳನ್ನು ಹೇಳುತ್ತಿದ್ದರಂತೂ ಕಿವಿಗೆ ಎಲ್ಲಿಲ್ಲದ ಸಂತೋಷ. ಅದೇ ರೀತಿಯಲ್ಲಿ ಇಲ್ಲೊಬ್ಬ ಅಜ್ಜ ಪಂಜಾಬಿ ಗೀತೆಯನ್ನು ಹೇಳುತ್ತಿದ್ದಾರೆ. ಅವರದ್ದೇ ಆದ ರೀತಿಯಲ್ಲಿ ತಾಳವನ್ನೂ ಹಾಕಿಕೊಳ್ಳುತ್ತಾ ಹಾಡು ಹೇಳಿರುವ ಅಜ್ಜನ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

ಅಜ್ಜ ಮನೆಯ ಹೊರಾಂಗಣದಲ್ಲಿ ಮಂಚ ಹಾಕಿಕೊಂಡು ಅದರ ಮೇಲೆ ಕುಳಿತಿದ್ದಾರೆ. ಪಾತ್ರೆಯೊಂದನ್ನು ಹಿಡಿದುಕೊಂಡಿರುವ ಅವರು ‘ಜಿದ ದಿಲ್‌ ಟೂಟ್‌ ಜಾಯೆʼ ಹಾಡನ್ನು ಹಾಡಲಾರಂಭಿಸುತ್ತಾರೆ. ಪಾಕಿಸ್ತಾನಿ ಪಂಜಾಬಿ ಹಾಡನ್ನು ಹಾಡುವ ಅವರು ಹಾಡಿಗೆ ತಕ್ಕಂತೆ ಪಾತ್ರೆಯ ಮೇಲೆ ತಾಳವನ್ನೂ ಬಾರಿಸುತ್ತಾರೆ. ಸುಮಾರು 2 ನಿಮಿಷ 20 ಸೆಕೆಂಡುಗಳ ಸಮಯದಲ್ಲಿ ಪೂರ್ತಿ ಹಾಡನ್ನು ಹಾಡುತ್ತಾರೆ.

ಇದನ್ನೂ ಓದಿ: Viral Video : ಸೀರೆಯುಟ್ಟ ಚೆಲುವೆಯ ಲಗಾ ಲಗಾ ರೇ ಡ್ಯಾನ್ಸ್‌; ಮನಸೋತು ಲೈಕ್‌ ಮಾಡುತ್ತಿದ್ದಾರೆ ನೆಟ್ಟಿಗರು
ಈ ಚಂದದ ದೃಶ್ಯವಿರುವ ವಿಡಿಯೊವನ್ನು ಐಎಫ್‌ಎಸ್‌ ಅಧಿಕಾರಿಯಾಗಿರುವ ಪ್ರವೀಣ್‌ ಕಾಸ್ವಾನ್‌ ಅವರು ಹಂಚಿಕೊಂಡಿದ್ದಾರೆ. ವಿಡಿಯೊವನ್ನು ಮೇ 28ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಈ ವಿಡಿಯೊ 90 ಸಾವಿರಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ಮಂದಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಸಾಕಷ್ಟು ಕಾಮೆಂಟ್‌ಗಳು ಕೂಡ ವಿಡಿಯೊಗೆ ಹರಿದುಬಂದಿವೆ.


“ಅಬ್ಬಾ ಎಂತಹ ಅದ್ಭುತ ಕಂಠ”, “ಹಾಡಿನ ಜತೆಯಲ್ಲಿ ಅದಕ್ಕೆ ತಕ್ಕಂತೆ ತಾಳವನ್ನೂ ಬಾರಿಸಿಕೊಳ್ಳುವುದು ಸುಲಭದ ಕೆಲಸವೇನಲ್ಲ. ನಿಜಕ್ಕೂ ಇವರು ತುಂಬಾ ಗ್ರೇಟ್‌”, “ಆ ಹಾಡು, ಆ ಸಂಗೀತ, ಆ ಬ್ಯಾಕ್‌ಗ್ರೌಂಡ್‌ ಎಲ್ಲವೂ ಹೇಳಿಮಾಡಿಸಿದಂತಿದೆ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ “ವಾವ್‌”, “ಸೂಪರ್‌” ಎನ್ನುವಂತಹ ನೂರಾರು ಕಾಮೆಂಟ್‌ಗಳನ್ನು ಇಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Viral Video : ರಾಕಿ ಸಾವಂತ್‌ ಜತೆ ಶೀಲಾ ಕೀ ಜವಾನಿ ಎನ್ನುತ್ತಾ ಹೆಜ್ಜೆ ಹಾಕಿದ ವಿಕ್ಕಿ! ವಿಡಿಯೊ ವೈರಲ್‌
ಈ ರೀತಿಯ ಹಾಡುಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತ ಮೂಲದ ಲಕ್ಷ್‌ ಹೆಸರಿನ ವ್ಯಕ್ತಿ ಕಿಶೋರ್‌ ಕುಮಾರ್‌ ಅವರ ಹಾಡೊಂದನ್ನು ಹಾಡಿದ್ದ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದೆ.

Exit mobile version