Site icon Vistara News

Viral Video: ಐಸ್‌ಕ್ರೀಂ ಕಡ್ಡಿ, ಬೆಂಕಿ ಪೊಟ್ಟಣದ ನೆರಳಿನಲ್ಲೇ ಕಿಂಗ್‌ ಕೊಹ್ಲಿ ಚಿತ್ರ! ಕಲಾವಿದನಿಗೊಂದು ಸಲಾಂ

virat kohli art

ಬೆಂಗಳೂರು: ಇದು ಡಿಜಿಟಲ್‌ ಯುಗ. ಅದಕ್ಕೆ ತಕ್ಕಂತೆ ಆರ್ಟಿಫಿಶಲ್‌ ಇಂಟೆಲಿಜೆನ್ಸ್‌ ತಯಾರಿಸುವ ಹಲವಾರು ವಿಶೇಷ ಫೋಟೋಗಳನ್ನು ನಾವು ನೋಡುತ್ತಿರುತ್ತವೇ. ಅವುಗಳನ್ನೇ ಆಶ್ಚರ್ಯದಿಂದ ಕಾಣುತ್ತೇವೆ. ಆದರೆ ಈ ಕಾಲದಲ್ಲಿಯೂ ಕೂಡ ಸಣ್ಣ ಪುಟ್ಟ ಸಾಮಾಗ್ರಿಗಳನ್ನೇ ಬಳಸಿಕೊಂಡು ವಿಶೇಷವಾದ ಕಲಾಕೃತಿಗಳನ್ನು ರಚಿಸುವ ಹಲವು ಕಲಾವಿದರು ನಮ್ಮ ನಿಮ್ಮೆಲ್ಲರ ನಡುವೆಯೇ ಇದ್ದಾರೆ. ಅಂತವರಲ್ಲಿ ಒಬ್ಬರಾಗಿರುವ ಶಿಂತು ಮೌರ್ಯ ಅವರ ಕಲೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು (Viral Video) ಮಾಡುತ್ತಿದೆ.

ಶಿಂತು ಅವರು ಬೆಂಕಿ ಪೊಟ್ಟಣ ಹಾಗೂ ಐಸ್‌ಕ್ರೀಂನ ಕಡ್ಡಿಗಳನ್ನೇ ಬಳಸಿಕೊಂಡು ಕಲಾಕೃತಿ ರಚಿಸುವ ವಿಶೇಷ ಪ್ರತಿಭೆಯನ್ನು ಹೊಂದಿದ್ದಾರೆ. ಅದರಂತೆ ಅವರು ಇತ್ತೀಚೆಗೆ ಬೆಂಕಿ ಪೊಟ್ಟಣ ಮತ್ತು ಐಸ್‌ಕ್ರೀಂ ಕಡ್ಡಿ ಬಳಸಿಕೊಂಡು ವಿಶೇಷವಾದ ಕಲಾಕೃತಿಯೊಂದನ್ನು ರಚಿಸಿದ್ದಾರೆ. ಆ ಕಲಾಕೃತಿಯ ಎದುರಿಗೆ ಲೈಟ್‌ ಹಾಕಿದರೆ ಅದರ ನೆರಳಿನಲ್ಲಿ ಭಾರತದ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರ ಭಾವಚಿತ್ರ ಮೂಡುವಂತಹ ವಿಶೇಷವಾದ ಕಲಾಕೃತಿ ಅದಾಗಿದೆ.

ಇದನ್ನೂ ಓದಿ: Viral video: ಹಿಂಡು ತಪ್ಪಿಸಿಕೊಂಡ ಕಾಡಾನೆ ಮರಿ ಕರೆದರೆ ಏನು ಮಾಡುತ್ತೆ ನೋಡಿ!
ಕಲಾಕೃತಿ ಮಾಡುವುದಕ್ಕೆ ತಾನು ಪಟ್ಟ ಕಷ್ಟವನ್ನು ಶಿಂತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ರೂಪದಲ್ಲಿ ಹಂಚಿಕೊಂಡಿದ್ದಾರೆ. ಆ ಕಲಾಕೃತಿ ನಿರ್ಮಾಣ ಮಾಡುವುದಕ್ಕೆಂದು ಬರೋಬ್ಬರಿ ಮೂರು ದಿನಗಳ ಸಮಯ ತೆಗೆದುಕೊಂಡಿದ್ದಾಗಿ ಅವರು ವಿಡಿಯೊದ ಕ್ಯಾಪ್ಶನ್‌ನಲ್ಲಿ ಹೇಳಿದ್ದಾರೆ. ಹಾಗೆಯೇ ಕಲಾಕೃತಿ ಬಗ್ಗೆ ನಿಮಗೆ ಏನೆನ್ನಿಸಿತು ಎಂದು ಕಾಮೆಂಟ್‌ ಮೂಲಕ ತಿಳಿಸಿ ಎಂದೂ ಕೇಳಿಕೊಂಡಿದ್ದಾರೆ.


ಈ ವಿಶೇಷ ಕಲೆಯ ವಿಡಿಯೊವನ್ನು ಜುಲೈ 9ರಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 1.25 ಕೋಟಿಗೂ ಅಧಿಕ ಜನರಿಂದ ವೀಕ್ಷಣೆಗೊಂಡಿದೆ. 16 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಸಾವಿರಾರು ಜನರು ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಸಾವಿರಾರು ಜನರು ಈ ಪ್ರತಿಭೆಯ ಬಗ್ಗೆ ಕಾಮೆಂಟ್‌ಗಳ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಧೋನಿಯೊಂದಿಗಿನ ವಿಡಿಯೊ ಹರಿಬಿಟ್ಟ ಗಗನಸಖಿ!
“ಈ ವಿಡಿಯೊವನ್ನು ವಿರಾಟ್‌ ಅವರು ನೋಡಿದರೆ ಚೆನ್ನಾಗಿರುತ್ತದೆ”, “ಇದು ನಿಜಕ್ಕೂ ಅದ್ಭುತವಾದ ಹಾಗೂ ವಿಶೇಷವಾದ ಪ್ರತಿಭೆ. ನೀವು ಇನ್ನಷ್ಟು ಬೆಳೆಯುವಂತಾಗಲಿ”, “ವಿರಾಟ್‌ ಕೊಹ್ಲಿ ಅವರೇ, ಇದು ನಿಮಗಾಗಿ”, “ನನ್ನ ದೇವರು, ನನ್ನ ಸ್ಫೂರ್ತಿ. ಕ್ರಿಕೆಟ್‌ನ ರಾಜ ಕಿಂಗ್‌ ಕೊಹ್ಲಿ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅದಲ್ಲದೆ “ವಾವ್‌”, “ಸೂಪರ್‌”, “ಅಮೇಜಿಂಗ್‌” ಎನ್ನುವಂತಹ ನೂರಾರು ಕಾಮೆಂಟ್‌ಗಳನ್ನು ನಾವು ಕಾಣಬಹುದಾಗಿದೆ.

Exit mobile version