Site icon Vistara News

Viral News : ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ! ವಿವೇಕ್‌ ಬಿಂದ್ರಾ ಫೋಟೋ ವೈರಲ್ ಆಗಿದ್ದೇಕೆ?

rishi sunak

ಬೆಂಗಳೂರು: ಭಾರತ ಬ್ರಿಟಿಷರ ಕಪಿಮುಷ್ಠಿಯಲ್ಲಿ ನರಳಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಅದೇ ಬ್ರಿಟನ್‌ಗೆ ಭಾರತ ಮೂಲದ ವ್ಯಕ್ತಿಯೇ ಪ್ರಧಾನಿಯಾಗಿ ದೇಶವನ್ನಾಳುತ್ತಿದ್ದಾರೆ. ಇದೇ ವಿಚಾರದಲ್ಲಿ ಪ್ರಸಿದ್ಧ ಉದ್ಯಮಿ ವಿವೇಕ್‌ ಬಿಂದ್ರಾ ಅವರು ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ವಿವೇಕ್‌ ಅವರು ರಿಷಿ ಸುನಾಕ್‌ ಅವರು ತಮ್ಮ ಅಧಿಕೃತ ನಿವಾಸ ಮತ್ತು ಕಚೇರಿಯಾಗಿರುವ 10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ತಮ್ಮ ಪ್ರಧಾನಿ ಕುರ್ಚಿ ಮೇಲೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರಷ್ಟೇ ಕೂರದೆ ತಮ್ಮ ಪ್ರೀತಿಯ ಸಾಕು ನಾಯಿಯಾದ ಲೋವಾವನ್ನು ಕೂಡ ತಮ್ಮ ತೊಡೆಯ ಮೇಲೆ ಕೂರಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral News : ವಿಶ್ವದಲ್ಲೇ ಅತಿ ಉದ್ದದ ನಾಲಿಗೆ ಹೊಂದಿರುವ ನಾಯಿ ಇದೇ ನೋಡಿ; ಅಬ್ಬಬ್ಬಾ ಎಷ್ಟೊಂದು ಉದ್ದವಿದೆ ಇದರ ನಾಲಿಗೆ!
ಈ ಫೋಟೋವನ್ನು ಹಂಚಿಕೊಂಡಿರುವ ವಿವೇಕ್‌ ಅವರು, “ಒಂದು ಕಾಲದಲ್ಲಿ ಬ್ರಿಟನ್‌ನ ಈ ಕಚೇರಿಯೊಳಗೆ ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ ಎಂದು ಬೋರ್ಡ್‌ ಹಾಕಲಾಗಿತ್ತು. ಆದರೆ ಇದೀಗ ಅದೇ ನಿಷೇಧಿತರೇ ಪ್ರಧಾನಿ ಕುರ್ಚಿ ಮೇಲೆ ಕುಳಿತಿದ್ದಾರೆ. ಇದುವೇ ಕಾಲಚಕ್ರ” ಎಂದು ಬರೆದಿದ್ದಾರೆ.


ವಿವೇಕ್‌ ಅವರ ಈ ಪೋಸ್ಟ್‌ ಅನ್ನು ಸಾವಿರಾರು ಮಂದಿ ನೋಡಿದ್ದಾರೆ. ನೂರಾರು ಮಂದಿ ಈ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿದ್ದಾರೆ. “ನಮ್ಮನ್ನು ಆಳಿದವರನ್ನು ಈಗ ನಾವು ಆಳುವ ಕಾಲ ಬಂದಿದೆ”, “ಇದು ನಿಜಕ್ಕೂ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತ ವಿಚಾರ” ಎನ್ನುವ ನೂರಾರು ಕಾಮೆಂಟ್‌ಗಳು ಈ ಟ್ವೀಟ್‌ಗೆ ಬಂದಿವೆ. ಸರಿಸುಮಾರು 30 ಸಾವಿರದಷ್ಟು ಮಂದಿ ಈ ಟ್ವೀಟ್‌ ಅನ್ನು ಲೈಕ್‌ ಮಾಡಿದ್ದಾರೆ.

ಇದನ್ನೂ ಓದಿ: Viral News: ಫಸ್ಟ್‌ ನೈಟ್‌ ಆದ ಮರುದಿನವೇ ಹೆಣ್ಣುಮಗುವಿಗೆ ಜನ್ಮ ನೀಡಿದ ಯುವತಿ, ಗಂಡನಿಗೆ ಫಜೀತಿ
ಇನ್‌ಫೋಸಿಸ್‌ ಸಂಸ್ಥಾಪಕರಾಗಿರುವ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಾಕ್‌ ಅವರು ಕಳೆದ ವರ್ಷ ಬ್ರಿಟನ್‌ನ ಪ್ರಧಾನಿಯಾಗಿ ನೇಮಕಗೊಂಡರು. ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆಯಾದ ಮೊದಲನೇ ಭಾರತ ಮೂಲದ ವ್ಯಕ್ತಿ ಅವರಾಗಿದ್ದಾರೆ.

Exit mobile version