ಬೆಂಗಳೂರು: ಆಪ್ಟಿಕಲ್ ಇಲ್ಯೂಷನ್ ಮತ್ತು ಮೆದುಳಿಗೆ ಕೆಲಸ ಕೊಡುವಂತಹ ಸಾಕಷ್ಟು ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗುತ್ತಿರುತ್ತವೆ. ಇದೀಗ ಅದೇ ರೀತಿ ಮೆದುಳಿಗೆ ಕೆಲಸ ಕೊಡುವಂತಹ ಆಟವೊಂದು ಸಾಮಾಜಿಕ ಜಾಲತಾಣಗಳಲ್ಲಿ (Viral News) ಸುದ್ದಿಯಲ್ಲಿದೆ. ಅದಕ್ಕೆ ನೀವು ಸರಿ ಉತ್ತರ ಕೊಡಬಲ್ಲಿರೇ?
ಇಲ್ಲಿ ನಾಲ್ಕು ಗಾಜಿನ ಲೋಟಗಳನ್ನು ಇರಿಸಲಾಗಿದೆ. ನಾಲ್ಕರಲ್ಲಿಯೂ ಸರಿ ಪ್ರಮಾಣದಲ್ಲಿ ಕಾಣುವಂತೆ ನೀರಿದೆ. ಆದರೆ ಈ ನಾಲ್ಕೂ ಲೋಟಗಳಲ್ಲೂ ಬೇರೆ ಬೇರೆ ವಸ್ತುಗಳನ್ನೂ ಇರಿಸಲಾಗಿದೆ. ಮೊದಲನೇ ಲೋಟದಲ್ಲಿ ಕತ್ತರಿಯಿದ್ದರೆ ಎರಡನೇ ಲೋಟದಲ್ಲಿ ಪೇಪರ್ ಪಿನ್, ಮೂರನೇ ಲೋಟದಲ್ಲಿ ರಬ್ಬರ್, ನಾಲ್ಕನೇ ಲೋಟದಲ್ಲಿ ಕೈಗಡಿಯಾರ ಇರಿಸಲಾಗಿದೆ. ಈ ನಾಲ್ಕರಲ್ಲಿ ಯಾವುದರಲ್ಲಿ ಹೆಚ್ಚು ನೀರಿದೆ ಎನ್ನುವದನ್ನು ನೀವು ಹೇಳಬೇಕು. ಅದುವೇ ನಿಮ್ಮ ಮುಂದಿರುವ ಸವಾಲು.
ಇದನ್ನೂ ಓದಿ: Viral Photo: ಬಸ್ ಮೆಟ್ಟಿಲಿಗೆ ನಮಸ್ಕರಿಸಿದ ಅಜ್ಜಿ ಫೋಟೋ ವೈರಲ್
ಈ ಸವಾಲನ್ನು ಡಾ.ಮೈಕ್ ಡೇವಿಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜೂನ್ 5ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಅಂದಿನಿಂದ ಇಂದಿನವರೆಗೆ 41,000 ಸಾವಿರಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಸಾವಿರಾರು ಮಂದಿ ಈ ಪೋಸ್ಟ್‌ನ್ನು ಲೈಕ್ ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ಇದನ್ನು ರಿಟ್ವೀಟ್ ಮಾಡಿದ್ದಾರೆ.
Today's "Brain Teaser": pic.twitter.com/VWhJUjbGfq
— Dr. Mike Davis 🌊 (@FrankMikeDavis1) June 5, 2023
ಈ ಸವಾಲಿಗೆ ಹಲವಾರು ರೀತಿಯ ಕಾಮೆಂಟ್‌ಗಳ ಮೂಲಕ ಜನರು ಉತ್ತರ ನೀಡಲಾರಂಭಿಸಿದ್ದಾರೆ. ಕೆಲವರು ಎರಡನೇ ಲೋಟವೇ ಸರಿಯಾದ ಉತ್ತರ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ರಬ್ಬರ್ ನೀರಿನಲ್ಲಿ ಮುಳುಗುವುದಿಲ್ಲ. ಹಾಗಾಗಿ ಮೂರನೇ ಲೋಟದಲ್ಲಿ ನೀರೇ ಇಲ್ಲ ಎನ್ನುವ ಚರ್ಚೆಯನ್ನೂ ಮಾಡಿದ್ದಾರೆ. ಹಾಗೆಯೇ ಕೆಲವರು ವೈಜ್ಞಾನಿಕವಾಗಿ ಯೋಚಿಸಿ ಎಲ್ಲದರಲ್ಲೂ ಸರಿಯಾದ ಪ್ರಮಾಣದ ನೀರಿದೆ ಎಂದೂ ಹೇಳುತ್ತಿದ್ದಾರೆ.