Site icon Vistara News

Viral Video : ನಟ ಸಲ್ಮಾನ್‌ ಖಾನ್‌ಗೆ ಪ್ರೊಪೋಸ್‌ ಮಾಡಿದ ಫಾರಿನ್‌ ಬೆಡಗಿ ಯಾರು? ಏನು ಆಕೆಯ ಕೆಲಸ?

#image_title

ಮುಂಬೈ: ಸಲ್ಮಾನ್‌ ಖಾನ್‌ ಅವರನ್ನು ಬಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಎಂದೂ ಕರೆಯಲಾಗುತ್ತದೆ. 56 ವರ್ಷ ವಯಸ್ಸಾಗಿದ್ದರೂ ಫಿಟ್‌ ಆಗಿರುವ ನಟನಿಗೆ ಈಗಲೂ ಸಾಕಷ್ಟು ಪ್ರೊಪೋಸ್‌ಗಳು ಬರುತ್ತಲೇ ಇರುತ್ತವೆ. ಅಂದ ಹಾಗೆ ಸಲ್ಮಾನ್‌ ಅವರು ಇತ್ತೀಚೆಗೆ ದುಬೈನಲ್ಲಿ ಐಫಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾದಾಗಲೂ ಅವರಿಗೆ ಪ್ರೊಪೋಸಲ್‌ ಬಂದಿತ್ತು. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಸಲ್ಮಾನ್‌ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ಅಲೆನಾ ಖಲೀಫ್ ಹೆಸರಿನ ಫಾರಿನ್‌ ಬೆಡಗಿ ಒಬ್ಬರು ಅವರಿಗೆ ನೇರವಾಗಿ ಪ್ರೊಪೋಸ್‌ ಮಾಡಿದ್ದಾರೆ. “ನಾನು ನಿಮಗೋಸ್ಕರ ಹಾಲಿವುಡ್‌ನಿಂದ ಬಂದಿದ್ದೇನೆ. ನಾನು ನಿಮ್ಮನ್ನು ನೋಡಿದಾಗಿನಿಂದ ನಿಮ್ಮನ್ನು ಪ್ರೀತಿಸಲಾರಂಭಿಸಿದ್ದೇನೆ” ಎಂದು ಅಲೆನಾ ಸಲ್ಮಾನ್‌ ಅವರಿಗೆ ಹೇಳಿದ್ದಾರೆ. ಆಗ ಗೊಂದಲಕ್ಕೆ ಒಳಗಾದ ಸಲ್ಮಾನ್‌, “ನೀವು ಶಾರುಖ್‌ ಖಾನ್‌ ಬಗ್ಗೆ ಮಾತನಾಡುತ್ತಿಲ್ಲ ತಾನೆ?” ಎಂದು ಕೇಳಿದ್ದಾರೆ.

ಇದನ್ನೂ ಓದಿ: Viral Video : ಸೀರೆಯುಟ್ಟ ಚೆಲುವೆಯ ಲಗಾ ಲಗಾ ರೇ ಡ್ಯಾನ್ಸ್‌; ಮನಸೋತು ಲೈಕ್‌ ಮಾಡುತ್ತಿದ್ದಾರೆ ನೆಟ್ಟಿಗರು
ಅದಕ್ಕೆ ಅಲೆನಾ, “ಇಲ್ಲ ಇಲ್ಲ, ನಾನು ನಿಮ್ಮ ಬಗ್ಗೆಯೇ ಮಾತನಾಡಿದ್ದು. ನೀವು ನನ್ನನ್ನು ಮದುವೆಯಾಗುತ್ತೀರಾ?” ಎಂದು ಕೇಳಿದ್ದಾರೆ. “ನನ್ನ ಮದುವೆಯಾಗುವ ಸಮಯ ಮುಗಿದಿದೆ. ನೀವು ನನ್ನನ್ನು 20 ವರ್ಷ ಹಿಂದೆಯೇ ಭೇಟಿಯಾಗಬೇಕಿತ್ತು” ಎಂದು ಸಲ್ಮಾನ್‌ ಹೇಳಿದ್ದಾರೆ.


ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ವೈರಲ್‌ ಆಗಿದೆ. ಸಲ್ಮಾನ್‌ ಅವರ ಮುಗ್ಧತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ. ಅಂದ ಹಾಗೆ ಹೀಗೆ ಸಲ್ಮಾನ್‌ ಅವರಿಗೆ ನೇರವಾಗಿ ಪ್ರೊಪೋಸ್‌ ಮಾಡಿರುವ ಬೆಡಗಿಗೆ ಹಾಲಿವುಡ್‌ನಲ್ಲಿ ಒಳ್ಳೆಯ ಹೆಸರಿನ ಅಲೆನಾ ಅವರು ಎಕೆ ಚಾಟ್ಸ್‌ ಹೆಸರಿನ ಟಿವಿ ಶೋ ನಡೆಸಿಕೊಡುತ್ತಾರೆ. ಒಂದೊಳ್ಳೆ ಡಿಜಿಟಲ್‌ ಕ್ರಿಯೇಟರ್‌ ಎನ್ನುವ ಹೆಸರೂ ಈಕೆಗೆ ಇದೆ.

ಇದನ್ನೂ ಓದಿ: Viral Video : ರಾಕಿ ಸಾವಂತ್‌ ಜತೆ ಶೀಲಾ ಕೀ ಜವಾನಿ ಎನ್ನುತ್ತಾ ಹೆಜ್ಜೆ ಹಾಕಿದ ವಿಕ್ಕಿ! ವಿಡಿಯೊ ವೈರಲ್‌
ಸಲ್ಮಾನ್‌ ಖಾನ್‌ ಅವರು ಸದ್ಯ ಮನೀಶ್‌ ಶರ್ಮಾ ನಿರ್ದೇಶನದ ಟೈಗರ್‌ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಾರುಖ್‌ ಖಾನ್‌ ಅವರ ಪಠಾಣ್‌ ಸಿನಿಮಾದಲ್ಲಿ ಸಲ್ಮಾನ್‌ ಅತಿಥಿ ಕಲಾವಿದನಾಗಿ ಕಾಣಿಸಿಕೊಂಡಿದ್ದರು. ಅದೇ ರೀತಿಯಲ್ಲಿ ಟೈಗರ್‌ 3 ಸಿನಿಮಾದಲ್ಲಿ ಶಾರುಖ್‌ ಅವರು ಅತಿಥಿ ಕಲಾವಿದರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

Exit mobile version