ಆಮಸ್ಟರ್‌ಡ್ಯಾಂ: ಅವರು ನೆದರ್‌ಲೆಂಡ್‌ನಲ್ಲಿ ವಾಸವಿರುವ ಜೆರ್ಟ್-ಜನ್ ಒಸ್ಕಮ್. 12 ವರ್ಷಗಳ ಹಿಂದೆ ಜರ್ಟ್‌ಗೆ ಮೋಟಾರು ವಾಹನ ಅಪಘಾತವಾಗಿ ಅಂದಿನಿಂದ ಅವರು ಹಾಸಿಗೆಯ ಮೇಲೇ ಉಳಿಯುವಂತೆ ಆಯಿತು. ಅವರು ಎರಡೂ ಕಾಲುಗಳು ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿಡ್ದವು. ಆದರೆ ಇದೀಗ ಡಿಜಿಟಲ್ ತಂತ್ರಜ್ಞಾನದ (Viral News) ಸಹಾಯದಿಂದಾಗಿ ಜೆರ್ಟ್ ಮತ್ತೆ ನಿಂತುಕೊಳ್ಳುತ್ತಿದ್ದಾರೆ, ನಡೆದಾಡುತ್ತಿದ್ದಾರೆ.
ಹೌದು. ಅಂಥದ್ದೊಂದು ವಿಶೇಷವಾದ ತಂತ್ರಜ್ಞಾನವನ್ನು ಸ್ವಿಟ್ಜರ್ಲೆಂಡ್‌ನ ಎಕೋಲ್ ಪಾಲಿಟೆಕ್ನಿಕ್ ಫೆಡರಲ್ ಡಿ ಲೌಸನ್ನೆ (ಇಪಿಎಫ್‌ಎಲ್) ನಲ್ಲಿರುವ ನರವಿಜ್ಞಾನಿಗಳು ಕಂಡುಕೊಂಡಿದ್ದಾರೆ. ವೈರ್‌ಲೆಸ್ ಡಿಜಿಟಲ್ ಬ್ರಿಡ್ಜ್ ಮೂಲಕವೇ ಮನುಷ್ಯನ ಮೆದುಳು ಬೇರೆ ಅಂಗಾಂಗದ ಜತೆ ಸ್ಪಂದಿಸುವಂತಹ ಸಂಪರ್ಕ ನಿರ್ಮಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: Viral News : ಅಮ್ಮನಿಗೆ ಬುದ್ಧಿ ಕಲಿಸಲು ಊರಿಗೇ ಬೆಂಕಿ ಇಟ್ಟ ಮಗಳು! ಇದರ ಹಿಂದಿದೆ ಅಕ್ರಮ ಸಂಬಂಧದ ಕತೆ
ಜೆರ್ಟ್ ಅವರಿಗೆ ಅಪಘಾತದಿಂದಾಗಿ ಸ್ಪೈನಲ್ ಕಾರ್ಡ್ ಮತ್ತು ಮೆದುಳಿನ ನಡುವಿನ ಸಂಪರ್ಕ ಕಡಿತವಾಗಿತ್ತು. ಮನುಷ್ಯ ನಡೆದಾಡಬೇಕೆಂದರೆ ಮೊದಲು ಮೆದುಳು ಅದರ ಬಗ್ಗೆ ಸ್ಪೈನಲ್ ಕಾರ್ಡ್‌ಗೆ ಸೂಚನೆ ನೀಡಬೇಕು. ಅದನ್ನ ಸ್ಪೈನಲ್ ಕಾರ್ಡ್ ಅನುಸರಿಸಬೇಕು. ಆದರೆ ಜೆರ್ಟ್‌ಗೆ ಮೆದುಳು ಮತ್ತು ಸ್ಪೈನಲ್ ಕಾರ್ಡ್ ನಡುವಿನ ಸಂಬಂಧವೇ ಇಲ್ಲವಾಗಿದ್ದರಿಂದಾಗಿ ಎದ್ದೇಳುವುದು ಕೂಡ ಸಾಧ್ಯವಾಗುತ್ತಿರಲಿಲ್ಲ.
ವಿಜ್ಞಾನಿಗಳು ವೈರ್‌ಲೆಸ್ ಡಿಜಿಟಲ್ ಬ್ರಿಡ್ಜ್ ಮೂಲಕ ಸ್ಪೈನಲ್ ಕಾರ್ಡ್ ಮತ್ತು ಮೆದುಳಿನ ಮೂಲಕ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದಾಗಿ ಮೆದುಳು ಸ್ಪೈನಲ್ ಕಾರ್ಡ್‌ಗೆ ಸೂಚನೆ ನೀಡಲು ಸಾಧ್ಯವಾಗುತ್ತಿದೆ. ಹಾಗಾಗಿ ಜೆರ್ಟ್ ಎದ್ದು ನಡೆದಾಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ ವಿಜ್ಞಾನಿಗಳು.
ಇದನ್ನೂ ಓದಿ: Viral News : ಬಾರ್ಬಿಯಂತೆ ಕಾಣುವುದಕ್ಕಾಗಿ 90 ಲಕ್ಷ ರೂ. ಖರ್ಚು ಮಾಡಿದ ಯುವತಿ!
ಸದ್ಯ ಈ ತಂತ್ರಜ್ಞಾನವನ್ನು ಒಬ್ಬರ ಮೇಲೆಯೇ ಪರೀಕ್ಷಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನದ ಮೂಲಕ ಮೆದುಳು ಮತ್ತು ಕೈಗಳು ಹಾಗೂ ಇತರೆ ಅಂಗಾಂಗಗಳ ಜತೆ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅದೇನೇ ಇರಲಿ ದೇವರು ಸೃಷ್ಟಿಸಿರುವ ದೇಹದಲ್ಲಿ ಮಾನವ ತನ್ನದೇ ಶಕ್ತಿಯಿಂದ ಹೊಸ ಬದಲಾವಣೆ ಮಾಡುತ್ತಿರುವುದು ಮಾತ್ರ ಒಂದು ಅದ್ಭುತವೇ ಸರಿ.