Site icon Vistara News

ನಾಯಿಮರಿ ಬೇಕೆಂದು ತಂದು ಬೇಸ್ತುಬಿದ್ದ ಯುವತಿ; ಬೆಳೆದು ನಿಂತಾಗ ಅದು ನಾಯಿಯೇ ಆಗಿರಲಿಲ್ಲ, ಈಕೆ ಫುಲ್ ಶಾಕ್​!

Pomeranian Puppy

#image_title

ಯುವತಿಯೊಬ್ಬಳು ಸಾಕಲೆಂದು ಪೊಮೆರೇನಿಯನ್​ ನಾಯಿಮರಿ (Pomeranian Puppy)ಯನ್ನು ಮನೆಗೆ ತಂದು, ಬೇಸ್ತುಬಿದ್ದಿದ್ದಾರೆ. ಆಕೆ ಶ್ವಾನಪ್ರಿಯೆ. ತನ್ನ ಜತೆಗೊಂದು ಮುದ್ದಾದ ನಾಯಿಮರಿ ಇರಲಿ, ಅದೂ ಪೊಮೆರೇನಿಯನ್​ ತಳಿಯೇ ಆಗಿರಲಿ ಎಂದುಕೊಂಡು ತಂದಿದ್ದರು. ಆದರೆ ಪುಟ್ಟನಾಯಿ ಮರಿ ಬೆಳೆದ ಮೇಲೆ ಆ ಯುವತಿ ಅಕ್ಷರಶಃ ಶಾಕ್ ಆಗಿದ್ದಳು. ನಾಯಿ ಎಂದುಕೊಂಡು ತಂದಿದ್ದ ಪ್ರಾಣಿ ನಾಯಿ ಆಗಿರಲೇ ಇಲ್ಲ !

ಯುಎಸ್​​ನ ಅಮಂಡಾ ಹ್ಯಾಮಿಲ್ಟನ್ ಎಂಬ ಯುವತಿ ತನ್ನ ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈಕೆ ಮೆಕ್ಸಿಕನ್​ ಗಡಿ ಭಾಗದ ಒಬ್ಬ ವ್ಯಕ್ತಿಯಿಂದ ನಾಯಿ ಮರಿಯನ್ನು ಖರೀದಿಸಿ ತಂದಿದ್ದಳು. ಪೊಮೆರೇನಿಯನ್ ತಳಿಯ ನಾಯಿ ಮರಿ ಇದು ಎಂದೇ ಅವನೂ ಹೇಳಿದ್ದ. ಆತನ ಮಾತು ನಂಬಿ, ಆ ಮರಿಗೆ ಅಮಂಡಾ ಹ್ಯಾಮಿಲ್ಟನ್​ ಕೊಟ್ಟಿದ್ದು 50 ಯುಎಸ್​ ಡಾಲರ್​(4000 ರೂಪಾಯಿ). ಸಾಮಾನ್ಯವಾಗಿ ಈ ತಳಿಯ ನಾಯಿಮರಿಗಳು ದುಬಾರಿ. ಕೆಲವರು 600-6000 ಡಾಲರ್​ವರೆಗೆ (50 ಸಾವಿರದಿಂದ 5 ಲಕ್ಷ ರೂ.ವರೆಗೆ) ಚಾರ್ಜ್​ ಮಾಡುತ್ತಾರೆ. ಇದ್ದುದರಲ್ಲೇ ಕಡಿಮೆ ಬೆಲೆಗೆ, ಅತ್ಯಂತ ಚೆಂದನೆಯ, ಕಪ್ಪು-ಬಿಳುಪು ಬಣ್ಣದ, ಪುಟಾಣಿ ನಾಯಿಮರಿ ಸಿಕ್ಕಿತಲ್ಲ ಎಂದು ಖುಷಿಯಿಂದಲೇ ಆಕೆ ಮನೆಗೆ ತಂದಿದ್ದಳು. ಅದಕ್ಕೆ ಕ್ರಿಪ್ಟೋ ಎಂದು ಹೆಸರಿಟ್ಟಿದ್ದರು. ಆದರೆ ಅದು ಬೆಳೆಯುತ್ತ, ಬೆಳೆಯುತ್ತ ನಾಯಿಮರಿಯಾಗಿ ಉಳಿದಿರಲಿಲ್ಲ. ಅದೊಂದು ತೋಳವಾಗಿತ್ತು. ನಾಯಿ ಎಂದು ಕೊಟ್ಟವ ಯುವತಿಯನ್ನು ಸರಿಯಾಗಿ ಯಾಮಾರಿಸಿದ್ದ!

ಇದನ್ನೂ ಓದಿ: Viral Video: ಹೆದ್ದಾರಿಯ ಸ್ವಾಗತ ಕಮಾನಿನ ಮೇಲೆ ಪುಶ್​ ಅಪ್ಸ್​; ಇವನು ಕುಡುಕನೋ? ಸಾಹಸಿಯೋ!

ಅಮಂಡಾ ಹ್ಯಾಮಿಲ್ಟನ್ ಅವರು ಆ ಪ್ರಾಣಿಯನ್ನು ತಂದ ದಿನದಿಂದಲೂ ಅದನ್ನು ನಾಯಿಯಂತೆಯೇ ನೋಡಿಕೊಳ್ಳುತ್ತಿದ್ದಳು. ನಾಯಿಗೆ ಕೊಡುವ ಆಹಾರವನ್ನೇ ಕೊಡುತ್ತಿದ್ದಳು. ಮಡಿಲಲ್ಲಿ ಕೂರಿಸಿಕೊಂಡು ಮುದ್ದಾಡುತ್ತಿದ್ದಳು. ಬೆಡ್​ ಮೇಲೆ ಜತೆಗೇ ಮಲಗಿಸಿಕೊಳ್ಳುತ್ತಿದ್ದಳು. ಆದರೆ ಆ ಪ್ರಾಣಿ ಬೆಳೆಯುತ್ತ, ಬೆಳೆಯುತ್ತ ವಿಭಿನ್ನವಾಗಿದೆ ಎಂದೆನಿಸಲು ಶುರುವಾಯಿತು. ಅದರ ಸ್ವರವೆಲ್ಲ ಬೇರೆ ತರದಲ್ಲಿ ಇತ್ತು. ತಾನು ತಂದಿದ್ದು ಪೊಮೆರೇನಿಯನ್ ನಾಯಿ ಆಗಿರಲಿಕ್ಕಿಲ್ಲ ಎಂದೂ ಭಾವಿಸಿದಳು. ಆದರೂ ಆಕೆಗೆ ಯಾಕೋ ಅನುಮಾನ ಶುರುವಾಯಿತು. ಪಶು ವೈದ್ಯರ ಬಳಿ ಹೋಗಿ ತೋರಿಸಿದಾಗ ಅವರೇ ಸ್ಪಷ್ಟಪಡಿಸಿದ್ದರು. ಇದು ನಾಯಿಯಲ್ಲ, ತೋಳವೆಂದು!. ಇದನ್ನು ಕೊಟ್ಟವ ನನಗೆ ಮೋಸ ಮಾಡಿದ ಎಂದೂ ಆಕೆ ಹೇಳಿಕೊಂಡಿದ್ದಾಳೆ. ತೋಳವನ್ನು ಮಡಿಲಲ್ಲಿ ಕೂರಿಸಿಕೊಂಡಿರುವ ಒಂದು ವಿಡಿಯೊವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ನಾಯಿಯೆಂದು ಹೇಳಿ, ತೋಳ ಜತೆಗಿಟ್ಟುಕೊಂಡಿದ್ದಿರಲ್ಲ. ಎಂಥ ಅಪಾಯದ ಜತೆ ಇದ್ದಿರಿ ನೀವು ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಪ್ರಾಣಿಯ ಫೋಟೋ, ಅಮಂಡಾ ಹಂಚಿಕೊಂಡ ವಿಡಿಯೊ ನೋಡಿ, ‘ಇಲ್ಲ ಇದು ಥೇಟ್ ನಾಯಿಯಂತೆಯೇ ಇದೆ. ಗೊಂದಲ ಆಗುತ್ತದೆ’ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Exit mobile version