Site icon Vistara News

Viral Video: ಚಲಿಸುತ್ತಿದ್ದ ಮೆಟ್ರೋ ರೈಲಿನೊಳಗೆ ಯುವತಿಯ ಕುಣಿತ; ಮೂರ್ಖತನ ಇದು ಎಂದ ನೆಟ್ಟಿಗರು!

Woman dances inside Delhi Metro video Viral

#image_title

ಮಹಾನಗರಗಳಲ್ಲಿನ ಮೆಟ್ರೋ ರೈಲುಗಳು ಜನರ ಪ್ರಯಾಣಕ್ಕೆ ಅತ್ಯಂತ ಆರಾಮದಾಯಕ ಎನ್ನಿಸಿವೆ. ಮೆಟ್ರೋ ವ್ಯವಸ್ಥೆ ಇದ್ದಲ್ಲಿ, ಜನ ಬಸ್​​ಗೆ ಹೋಗಲು ಇಷ್ಟಪಡುವುದಿಲ್ಲ. ಆರಾಮಾಗಿ ಹೋಗಬಹುದು, ಒಂದು ಮೆಟ್ರೋ ತಪ್ಪಿದರೂ, ಬಸ್​ಗೆ ಕಾದಷ್ಟು ಕಾಯುವ ಅಗತ್ಯವಿಲ್ಲ, ಕೆಲ ನಿಮಿಷಗಳಲ್ಲಿ ಇನ್ನೊಂದು ಬರುತ್ತದೆ. ಸುರಕ್ಷಿತ ಎಂಬಿತ್ಯಾದಿ ಹಲವು ಕಾರಣಕ್ಕೆ ಜನರು ಮೆಟ್ರೋವನ್ನು ಇಷ್ಟಪಡುತ್ತಾರೆ. ಇಂಥ ಮೆಟ್ರೋಕ್ಕೆ ಸಂಬಂಧಪಟ್ಟ ಹಲವು ವಿಡಿಯೊಗಳು ಸೋಷಿಯಲ್ ಮಿಡಿಯಾಗಳಲ್ಲಿ ಈಗಾಗಲೇ ವೈರಲ್ ಆಗಿದೆ. ಮೆಟ್ರೋ ಸ್ಟೇಶನ್​ನಲ್ಲಿ, ರೈಲಿನಲ್ಲಿ ನಡೆಯುವ ಫನ್ನಿ, ಭಾವನಾತ್ಮಕ ಸನ್ನಿವೇಶಗಳ ವಿಡಿಯೊಗಳನ್ನು ನಾವು ನೋಡಿದ್ದೇವೆ. ಇದೀಗ ದೆಹಲಿ ಮೆಟ್ರೋದಲ್ಲಿ ನಡೆದ ಒಂದು ವಿಡಿಯೊ ವೈರಲ್ ಆಗುತ್ತಿದ್ದು, ಅದರಲ್ಲಿನ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ ಸನ್ನಿವೇಶ ಇದು ಎನ್ನಲಾಗಿದೆ.

ಚಲಿಸುತ್ತಿದ್ದ ಮೆಟ್ರೋ ರೈಲಿನೊಳಗೆ ಒಬ್ಬಳು ಯುವತಿ ಡ್ಯಾನ್ಸ್ ಮಾಡಿದ್ದಾಳೆ. ಮತ್ತೊಬ್ಬಾಕೆ ಅದನ್ನು ವಿಡಿಯೊ ಮಾಡಿಕೊಂಡಿದ್ದಾಳೆ. ಇದನ್ನು ಮೂರನೇಯವರು ಯಾರೋ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೆಟ್ರೋದಲ್ಲಿ ಹಲವು ಪ್ರಯಾಣಿಕರು ಇದ್ದಾರೆ. ಕೆಲವರು ಕುಳಿತಿದ್ದಾರೆ, ಸೀಟ್​ ಸಿಗದವರು ನಿಂತಿದ್ದಾರೆ. ಅವರ ಮಧ್ಯೆಯೇ ಪ್ಯಾಂಟ್​-ಹಾಫ್​ ಟಾಪ್​ ಹಾಕಿದ ಹುಡುಗಿ ಡ್ಯಾನ್ಸ್ ಮಾಡಿದ್ದಾಳೆ. ಮೇಜರ್​ ಡಿ.ಪಿ.ಸಿಂಗ್​ ಎನ್ನುವವರು ವಿಡಿಯೊ ಪೋಸ್ಟ್ ಮಾಡಿ, ‘ಏನಿದು?’ ಎಂದು ಪ್ರಶ್ನಿಸಿದ್ದಾರೆ. ದೆಹಲಿ ಮೆಟ್ರೋ ರೈಲು ಕಾರ್ಪೋರೇಶನ್​ ಮತ್ತು ದೆಹಲಿ ಮೆಟ್ರೋ ಡಿಸಿಪಿಯವರನ್ನು ಟ್ಯಾಗ್ ಮಾಡಿದ್ದಾರೆ.

ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಅನೇಕರು ವಿಡಿಯೊ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮೂರ್ಖತನ ಎಂದಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ‘ಕಲಾವಿದರು, ಹಾಡುಗಾರರು, ನೃತ್ಯಕಲಾವಿದರೆಲ್ಲ ತಮ್ಮತಮ್ಮ ಪ್ರತಿಭೆಯನ್ನು ವೇದಿಕೆ ಮೇಲೆ ತೋರಿಸಬೇಕು. ಹೀಗೆ ಸಾರ್ವಜನಿಕ ಪ್ರದೇಶದಲ್ಲಿ ಹೊರಹಾರಕಬಾರದು’ ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ದೆಹಲಿ ಮೆಟ್ರೋದಲ್ಲಿ ಯುವತಿಯ ನೃತ್ಯದ ವಿಡಿಯೊ

Exit mobile version