Site icon Vistara News

Viral Video: 500 ರೂ. ನೋಟನ್ನು ಹಾಕಿ ಪರೋಟ ಲಟ್ಟಿಸಿ, ಬೇಯಿಸಿದ ಮೇಲೆ ಅದರಿಂದ 2000 ರೂ. ಹೊರತೆಗೆದ ಮಹಿಳೆ!

Woman Makes Paratha with 500 RS Note

#image_title

ನಾವೆಲ್ಲ ಪರೋಟವನ್ನು ತಿಂದೇ ಇರುತ್ತೇವೆ. ಇದೊಂಥರ ಚಪಾತಿ, ರೊಟ್ಟಿಗಿಂತಲೂ ವಿಭಿನ್ನ ತಿಂಡಿ. ಮೃದುವಾಗಿರುತ್ತದೆ, ತಿನ್ನಲೂ ಬಾರಿ ರುಚಿ, ಹೊಟ್ಟೆಯೂ ತುಂಬುತ್ತದೆ. ಪ್ಲೇನ್​ ಪರೋಟ, ಆಲೂ ಪರೋಟ, ಪನ್ನೀರ್, ಮೊಟ್ಟೆ..ಹೀಗೆ ವಿವಿಧ ಬಗೆಯ ಪರೋಟಗಳನ್ನು ಮಾಡಬಹುದಾಗಿದ್ದು, ಇದರಲ್ಲಿ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಪರೋಟಗಳನ್ನು ನೀವು ಬೆಳಗಿನ ತಿಂಡಿಗೂ ತಿನ್ನಬಹುದು, ಮಧ್ಯಾಹ್ನ ಊಟಕ್ಕೂ ಆಯ್ಕೆ ಮಾಡಿಕೊಳ್ಳಬಹುದು.

ಇದೆಲ್ಲ ಬಿಡಿ, ಈಗೊಬ್ಬಳು ಮಹಿಳೆ ಪರೋಟ ಮಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಏನು ಸ್ಪೆಶಲ್​ ಎಂದು ಕೇಳುತ್ತಿದ್ದೀರಾ? ಆಕೆ ದುಡ್ಡಿನ ಪರೋಟಾ ಮಾಡುತ್ತಿದ್ದಾರೆ!- ಪರೋಟಾ ಹಿಟ್ಟನ್ನು ಸರಿಯಾಗಿ ನಾದಿಕೊಂಡು, ಅದನ್ನು ಸ್ವಲ್ಪವೇ ಲಟ್ಟಿಸಿಕೊಂಡು, ಅದರಲ್ಲಿ 500 ರೂಪಾಯಿ ನೋಟು ಹಾಕಿ ಮತ್ತೆ ಲಟ್ಟಿಸುತ್ತಾರೆ. ಅದಕ್ಕೆಲ್ಲ ಎಣ್ಣೆ ಸವರುತ್ತಾರೆ. ಹಾಗೇ, ಅದನ್ನು ಕಾವಲಿ ಮೇಲೆ ಹಾಕುತ್ತಾರೆ. ತುಪ್ಪವನ್ನೆಲ್ಲ ಸವರಿ ಬೇಯಿಸಿ ತೆಗೆಯುತ್ತಾರೆ. ಹಾಗೇ, ತೆಗೆದ ಮೇಲೆ ಪರೋಟಾದಿಂದ 2000 ರೂಪಾಯಿಯನ್ನು ಹೊರಹಾಕುತ್ತಾರೆ. ಅಂದರೆ ಅವರು 500 ರೂ.ನೋಟನ್ನು ಹಾಕಿ ಲಟ್ಟಿಸಿ, ಬೇಯಿಸಿದ ಮೇಲೆ 500 ರೂ.ಬದಲಾಗಿ, 2000 ರೂಪಾಯಿಯನ್ನು ಹೊರತೆಗೆಯುತ್ತಾರೆ. ಅಲ್ಲೇನು ಟ್ರಿಕ್​ ಮಾಡಿದರೋ ಗೊತ್ತಾಗಲಿಲ್ಲ.

ಇದನ್ನೂ ಓದಿ: Viral Video: 5 ಸೆಕೆಂಡ್‌ನಲ್ಲಿ 4 ಸುತ್ತು ಫೈರಿಂಗ್ ಮಾಡಿದ ಮದುಮಗಳು! ಯುಪಿ ಪೊಲೀಸರು ಮಾಡಿದ್ದೇನು?

ಸುಮಾರು 4.7 ಮಿಲಿಯನ್​ ವೀವ್ಸ್​ ಈ ವಿಡಿಯೊಕ್ಕೆ ಬಂದಿದೆ. ಆದರೆ ನೆಟ್ಟಿಗರು ಮಾತ್ರ ವಿಡಿಯೊವನ್ನು ಇಷ್ಟಪಡಲಿಲ್ಲ. ಅವರು 500 ರೂಪಾಯಿಯನ್ನು ಹಾಕಿ, ಲಟ್ಟಿಸಿದ ಪರೋಟಾವನ್ನು ಬೇಯಿಸಿ ತೆಗೆದಾಗ ಅದರಿಂದ 2000 ರೂಪಾಯಿಯನ್ನು ಹೊರತೆಗೆದಿದ್ದು ಹೇಗೆ ಎಂಬುದರ ಬಗ್ಗೆ ನೆಟ್ಟಿಗರು ಅಷ್ಟು ತಲೆಕೆಡಿಸಿಕೊಂಡಿಲ್ಲ. ಅದರ ಬದಲು, ಹೀಗೆ ಹಣವನ್ನೆಲ್ಲ ಹಾಕಿ ಪರೋಟ ಮಾಡುವ ಅಗತ್ಯವಿಲ್ಲ, ಆ ಹಣ ಸುಟ್ಟು ಹೋದರೆ ಏನು ಕತೆ? ಎಂದೇ ಪ್ರಶ್ನಿಸಿದ್ದಾರೆ. ‘ನೀವು ಜನರ ಗಮನ ಸೆಳೆಯಲು ಸೋಷಿಯಲ್ ಮೀಡಿಯಾದಲ್ಲಿ ಏನನ್ನು ಬೇಕಾದರೂ ಮಾಡಿ, ಆದರೆ ಹಣಕ್ಕೆ ಅವಮಾನ ಮಾಡುವಂಥದ್ದು ಏನನ್ನೂ ಮಾಡಬೇಡಿ. ಇಂಥವರಿಗೆ ಯಾರೂ ಬೆಂಬಲ ನೀಡಬಾರದು’ ಎಂದು ಹೇಳಿದ್ದಾರೆ.

Exit mobile version