Site icon Vistara News

ತನ್ನನ್ನು ತಾನೇ ಮದುವೆಯಾಗಿ 24 ಗಂಟೆಯಲ್ಲೇ ವಿಚ್ಛೇದನ ಪಡೆದ ಯುವತಿ; ಒಂದಿನವೂ ಕಳೆಯಲಾಗಲಿಲ್ಲವಂತೆ!

woman who married herself wants Divorce

#image_title

ಕ್ಷಮಾ ಬಿಂದು..ಈ ಹೆಸರು ನಮ್ಮಲ್ಲಿ ಅನೇಕರಿಗೆ ಗೊತ್ತಿದೆ. ಗುಜರಾತ್​ನ ಈ ಯುವತಿ ಕಳೆದ ವರ್ಷ ಜೂನ್ ತಿಂಗಳಲ್ಲಿ ತನ್ನನ್ನೇ ತಾನು ಮದುವೆಯಾಗಿ (sologamy) ಸುದ್ದಿ ಮಾಡಿದ್ದಳು. ಅಷ್ಟೇ ಅಲ್ಲ, ಒಬ್ಬಳೇ ಹನಿಮೂನ್​ಗೂ ಹೋಗಿದ್ದಳು. ಈಗ ಆ ಕ್ಷಮಾ ಬಿಂದು ದಾರಿಯನ್ನೇ ತುಳಿದ ಯುವತಿ ಟ್ರೆಂಡ್ ಸೃಷ್ಟಿಸಿದ್ದಾಳೆ. ಆದರೆ 25ವರ್ಷದ ಈ ಯುವತಿ ತನ್ನನ್ನು ತಾನು ಮದುವೆ ಮಾಡಿಕೊಂಡು, 24 ಗಂಟೆಯಲ್ಲಿ ವಿಚ್ಛೇದನವನ್ನೂ ಪಡೆದು ಸುದ್ದಿಯಾಗಿದ್ದಾಳೆ. ಇದೇ ಕಾರಣಕ್ಕೆ ಟ್ರೋಲ್ ಆಗಿದ್ದಾಳೆ.

ಯುವತಿಯ ಹೆಸರು ಸೋಫಿ ಮೌರ್. ಈಕೆ ಸೋಷಿಯಲ್​ ಮೀಡಿಯಾ ಇನ್​ಫ್ಲ್ಯುಯೆನ್ಸರ್​. ಮೊದಲು ತನ್ನ ಮದುವೆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಬಿಳಿ ಬಣ್ಣದ ಗೌನ್ ತೊಟ್ಟು, ವಧುವಿನಂತೆ ಕಂಗೊಳಿಸಿದ್ದ ಫೋಟೋವನ್ನು ಫೆ.20ರಂದು ಪೋಸ್ಟ್ ಮಾಡಿ, ‘ಇಂದು ನನ್ನ ಜೀವನದಲ್ಲಿ, ನಾನೇ ನಂಬಲಾಗದ ದಿನ. ನಾನು ನನಗಾಗಿ ಮದುವೆ ಉಡುಪನ್ನು ಖರೀದಿಸಿದೆ ಮತ್ತು ಕೈಯಾರೆ ಒಂದು ಕೇಕ್​ ಮಾಡಿ, ಕತ್ತರಿಸಿದೆ. ಈ ಮೂಲಕ ನನ್ನನ್ನು ನಾನು ಮದುವೆ ಮಾಡಿಕೊಂಡೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು. ಇದು ಅವರ ಫಾಲೋವರ್ಸ್​​ ಗಮನ ಸೆಳೆದಿತ್ತು. ಅನೇಕರು ಆಕೆಗೆ ತಮ್ಮ ಬೆಂಬಲ ಸೂಚಿಸಿದ್ದರು.

ಇದನ್ನೂ ಓದಿ: ತನ್ನೊಂದಿಗೇ ತಾನು ಸಪ್ತಪದಿ ತುಳಿದ ಗುಜರಾತ್‌ ಯುವತಿ; ಭರ್ಜರಿಯಾಗೇ ನಡೀತು ವರನಿಲ್ಲದ ಮದುವೆ!

ಆದರೆ ಅದಾಗಿ 24 ಗಂಟೆಯಲ್ಲಿ ಅಂದರೆ ಫೆ.21ರಂದು ಮತ್ತೆ ಟ್ವೀಟ್ ಮಾಡಿದ ಸೋಫಿ ಮೌರ್ ತಮ್ಮ ನಿರ್ಧಾರ ವಾಪಸ್ ಪಡೆದಿದ್ದಾಗಿ ತಿಳಿಸಿದ್ದಾರೆ. ‘ನನ್ನೊಂದಿಗೆ ನಾನು 24 ಗಂಟೆಯೂ ಕಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ನನ್ನಿಂದ ನಾನು ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದ್ದೇನೆ. ಇದರಲ್ಲಿ ಏನು ತೊಡಕುಗಳಿವೆಯೋ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ನನ್ನಿಂದ ನನಗೆ ವಿಚ್ಛೇದನ ಬೇಕು’ ಎಂದಿದ್ದಾರೆ. ಇದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದೆಂಥಾ ವಿಚಿತ್ರ ಕೇಸ್​ ಎಂದಿದ್ದಾರೆ.

Exit mobile version