Site icon Vistara News

Viral Video | ಸರಿಯಾದ ಸಮಯಕ್ಕೆ ಬಾರದೆ ವಿಮಾನ ತಪ್ಪಿಸಿಕೊಂಡ ಮಹಿಳೆ, ಏರ್​ಪೋರ್ಟ್​​ನಲ್ಲಿ ಮಾಡಿದ್ದು ಹುಚ್ಚಾಟ !

Mexico City

ಕೆಲವರು ಕೋಪ ಬಂದಾಗ ಒಮ್ಮೆಲೇ ತಾಳ್ಮೆ ಕಳೆದುಕೊಂಡುಬಿಡುತ್ತಾರೆ. ತಾವೆಲ್ಲಿದ್ದೇವೆ, ತಾವೇನು ಮಾಡುತ್ತಿದ್ದೇವೆ, ಮಾತಾಡುತ್ತಿದ್ದೇವೆ ಎಂಬುದನ್ನೆಲ್ಲ ಮರೆತೇ ಬಿಡುತ್ತಾರೆ. ಇಲ್ನೋಡಿ, ಈ ಮಹಿಳೆ ತನಗೆ ವಿಮಾನ ತಪ್ಪಿಹೋಯಿತು ಎಂಬ ಕಾರಣಕ್ಕೆ ಏರ್​ಪೋರ್ಟ್​​ನಲ್ಲಿದ್ದ ಎಮಿರೇಟ್ಸ್​ ಏರ್​ಲೈನ್ಸ್​​​ ಸಂಸ್ಥೆಯ ಚೆಕ್​​-ಇನ್​ (ತಪಾಸಣೆ ಮಾಡುವವರು) ಸಿಬ್ಬಂದಿಗೆ ಹೊಡೆದಿದ್ದಾಳೆ. ಆ ವಿಡಿಯೊ ವೈರಲ್ ಆಗಿದೆ.

ಮೆಕ್ಸಿಕೊ ಸಿಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೀಗೊಂದು ಘಟನೆ ನಡೆದಿದೆ. ತಾನು ಸರಿಯಾದ ಸಮಯಕ್ಕೆ ಏರ್​ಪೋರ್ಟ್​ಗೆ ಬಾರದೆ, ವಿಮಾನ ತಪ್ಪಿಸಿಕೊಂಡ ಮಹಿಳೆ ಮಿತಿಮೀರಿ ವರ್ತನೆ ಮಾಡಿದ್ದಾರೆ. ಏರ್​ಪೋರ್ಟ್​​ನಲ್ಲಿ ಎಮಿರೇಟ್ಸ್​ ಏರ್​ಲೈನ್ಸ್​​ನ ಚೆಕ್​​-ಇನ್​ ಸಿಬ್ಬಂದಿ ಕುಳಿತಿದ್ದ ಕೌಂಟರ್​ಗೆ ಹೋಗಿ ಅಲ್ಲಿನ ಕುರ್ಚಿಯನ್ನು ಎತ್ತಿ ಬಿಸಾಕಿದ್ದಾರೆ. ಅಲ್ಲಿ ಕುಳಿತಿದ್ದ ಯುವತಿಯರಿಗೆ ಹಿಗ್ಗಾಮುಗ್ಗಾ ಬೈದು, ಥಳಿಸಿದ್ದಾರೆ. ತನ್ನ ಲಗೇಜ್​ಗಳನ್ನೆಲ್ಲ ಅವರತ್ತ ಎತ್ತಿ ಬಿಸಾಕಿದ್ದಾರೆ. ತಾನೇ ಮಾಡಿಕೊಂಡ ತಪ್ಪಿಗೆ ಆ ಸಿಬ್ಬಂದಿಗೆ ಶಿಕ್ಷೆ ಕೊಟ್ಟಿದ್ದಾರೆ. ಮಹಿಳೆಯ ವಿಲಕ್ಷಣ ವರ್ತನೆಗೆ ನೆಟ್ಟಿಗರೂ ಕಿಡಿ ಕಾರಿದ್ದಾರೆ.

Exit mobile version