Site icon Vistara News

Viral video : ಊರಿನವರ ಎದುರೇ ಯುವಕನ ಕೆನ್ನೆಗೆ ಚಪ್ಪಲಿಯಲ್ಲಿ ಬಾರಿಸಿದ ಯುವತಿ! ಮುಂದೇನಾಯ್ತು?

women slaps men with slipper

ಲಕ್ನೋ: ಊರವರೆಲ್ಲರೂ ನಿಂತಿದ್ದಾರೆ. ಆಗ ಒಬ್ಬ ಯುವತಿ ಮುಂದೆ ಬಂದು ಆಕೆಯ ಕಾಲಲ್ಲಿರುವ ಚಪ್ಪಲಿ ತೆಗೆದು ನಿಮ್ಮ ಕೆನೆಗೆ ಪಟ ಪಟನೆ ಹೊಡೆಯಲಾರಂಭಿಸಿದಳು ಎಂದುಕೊಳ್ಳಿ. ಆಗ ಹೇಗಿರುತ್ತದೆ ನಿಮ್ಮ ಪರಿಸ್ಥಿತಿ? ಊಹಿಸಿಕೊಳ್ಳುವುದಕ್ಕೇ ಭಯವಾಗುತ್ತಿದೆಯಲ್ಲವೇ? ಆದರೆ ಇತ್ತೀಚೆಗೆ ಈ ರೀತಿಯ ಘಟನೆಯೊಂದು ಉತ್ತರ ಪ್ರದೇಶದ ಹಾಪುರ್‌ನಲ್ಲಿ ನಡೆದಿದೆ. ಯುವತಿಯೊಬ್ಬಳು ಊರವರ ಮುಂದೆ ಯುವಕನ ಕೆನ್ನೆಗೆ ಚಪ್ಪಲಿ ಏಟನ್ನು ಕೊಟ್ಟಿತ್ತು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral video) ಆಗಿದೆ.

ಹಾಪುರದಲ್ಲಿ ಯುವತಿಯೊಬ್ಬಳಿಗೆ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರದಲ್ಲಿ ಆಕೆ ನೇರವಾಗಿ ಗ್ರಾಮ ಪಂಚಾಯಿತಿಯ ಮೆಟ್ಟಿಲೇರಿದ್ದು, ಅಲ್ಲಿ ಯುವಕನ ವಿರುದ್ಧ ದೂರು ನೀಡಿದ್ದಾಳೆ. ಪಂಚಾಯಿತಿಯವರು ಈ ಬಗ್ಗೆ ತನಿಖೆ ನಡೆಸಿದ್ದು, ಯುವಕನ ತಪ್ಪಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಆತನನ್ನು ಪಂಚಾಯಿತಿ ಬಳಿ ಕರೆಸಿ, ಯುವತಿಗೆ ಆತನಿಗೆ ತನ್ನ ಚಪ್ಪಲಿಯಲ್ಲಿ ಹೊಡೆಯುವಂತೆ ಹೇಳಿದ್ದಾರೆ. ಆಕೆ ಚಪ್ಪಲಿ ತೆಗೆದುಕೊಂಡು ಪಟ ಪಟನೆ ಆತನ ಕೆನ್ನೆಗೆ ಹೊಡೆದಿದ್ದಾಳೆ.

ಇದನ್ನೂ ಓದಿ: Viral News: ಬುರ್ಖಾ ಧರಿಸಿ ಲುಲು ಮಾಲ್‌ನ ಸ್ತ್ರೀಯರ ಶೌಚಾಲಯದಲ್ಲಿ ವಿಡಿಯೊ ಮಾಡಿದ ಟೆಕ್ಕಿ; ಹೆಣ್ಣುಮಕ್ಕಳು ಕಕ್ಕಾಬಿಕ್ಕಿ!
ಈ ಮಧ್ಯೆ ಆತ ಯುವತಿಯ ಚಪ್ಪಲಿ ಹೊಡೆತದಿಂದ ತಪ್ಪಿಸಿಕೊಳ್ಳಲು ಕೈ ಅಡ್ಡ ತರುತ್ತಾನೆ. ಆದರೆ ಅದಕ್ಕೆ ಅವಕಾಶ ಕೊಡದ ಗ್ರಾಮಸ್ಥರು ಆತನಿಗೆ ಕೈ ತೆಗೆಯುವಂತೆ ಸೂಚಿಸುತ್ತಾರೆ. ಯುವತಿ ತನ್ನ ಸಿಟ್ಟು, ಬೇಸರ ಕರಗಿಹೋಗುವವರೆಗೂ ಆತನಿಗೆ ಚೆನ್ನಾಗಿ ಚಪ್ಪಲಿ ಏಟು ಕೊಡುತ್ತಾಳೆ.


ಇದಾದ ನಂತರ ಗ್ರಾಮಸ್ಥರೊಬ್ಬರು ಆ ಯುವಕನ ಶರ್ಟ್‌ ಬಿಚ್ಚುತ್ತಾರೆ. ಈ ವೇಳೆ ಮಹಿಳೆಯೊಬ್ಬಳು ಆತನನ್ನು ಊರೊಳಗೆ ಬಟ್ಟೆಯಿಲ್ಲದೆ ಮೆರವಣಿಗೆ ಮಾಡಿಸಬೇಕು ಎಂದು ಹೇಳುವುದನ್ನು ನೀವು ಕೇಳಬಹುದಾಗಿದೆ.
ಈ ವಿಡಿಯೊವನ್ನು ಘರ್‌ ಕೆ ಕಲಾಶೆ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ನೂರಕ್ಕೂ ಅಧಿಕ ಮಂದಿ ವಿಡಿಯೊವನ್ನು ತಮ್ಮ ವಾಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral News : ಇಡೀ ಏರಿಯಾದ ಕರೆಂಟ್‌ ತೆಗೆದ ಮೀನು! ಇದಕ್ಕೆ ಕಾರಣವಾಗಿದ್ದು ಹಕ್ಕಿ!
ಯುವತಿ ಯುವಕನ ಬಗ್ಗೆ ನೇರವಾಗಿ ಪಂಚಾಯಿತಿಗೆ ದೂರು ನೀಡಿದ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಪಂಚಾಯಿತಿಯವರು ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟ ಯುವಕನಿಗೆ ಕೊಟ್ಟ ಶಿಕ್ಷೆಯ ಬಗ್ಗೆಯೂ ಭಾರೀ ಚರ್ಚೆಯಾಗುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯೂ ಈ ರೀತಿ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಗ್ರಾಮದ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಜನರು ಹೇಳಲಾರಂಭಿಸಿದ್ದಾರೆ.

ಈ ಹಿಂದೆ ಇದೇ ಟ್ವಿಟರ್‌ ಖಾತೆಯಲ್ಲಿ ಮತ್ತೊಂದು ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು. ದೆಹಲಿಯ ಮೆಟ್ರೋ ರೈಲುಗಳಲ್ಲಿ ಹೆಣ್ಣು ಮಕ್ಕಳಿಬ್ಬರು ನಿಲ್ಲುವ ಜಾಗಕ್ಕೆಂದು ಕಿತ್ತಾಡುವ ವಿಡಿಯೊ ಅದಾಗಿತ್ತು. ದೆಹಲಿಯಲ್ಲಿ ಜನರು ಕೆಲಸ ಮಾಡುವ ಬದಲು ಮೆಟ್ರೋ ರೈಲಿನಲ್ಲಿ ಡೈಲಿ ವ್ಲಾಗ್‌ ಮಾಡಬಹುದು. ಪ್ರತಿದಿನ ಏನಾದರೂ ವಿಚಿತ್ರಗಳು ದೆಹಲಿಯಲ್ಲಿ ನಡೆದೇ ನಡೆಯುತ್ತದೆ ಎಂದು ಅನೇಕರು ಆ ವಿಡಿಯೊಗೆ ಕಾಮೆಂಟ್‌ಗಳನ್ನು ಮಾಡಿದ್ದರು.

Exit mobile version