Site icon Vistara News

Viral News : ಸಾಲ ತೀರಿಸಲು ತನ್ನ ರಕ್ತ ಮಾರಾಟ ಮಾಡಲು ಮುಂದಾದ ಮಹಿಳೆ!

blood selling

ಪಾಟ್ನಾ: ಜನರು ಹಣ ಸಂಪಾದಿಸುವುದಕ್ಕಾಗಿ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಹಣವೇ ಇಲ್ಲ ಎನ್ನುವಾಗ ಸಾಲ ಪಡೆದು ನಂತರ ಅದನ್ನು ತೀರಿಸಲು ಒದ್ದಾಡುತ್ತಾರೆ. ಅದೇ ರೀತಿಯಲ್ಲಿ ಸಾಲ ಪಡೆದಿದ್ದ ಮಹಿಳೆಯೊಬ್ಬಳು ಆ ಸಾಲವನ್ನು ತೀರಿಸಲೆಂದು ತನ್ನ ರಕ್ತವನ್ನೇ ಮಾರಾಟ ಮಾಡಲು ಹೊರಟ ಘಟನೆ ಬಿಹಾರದಲ್ಲಿ (Viral News)ನಡೆದಿದೆ.

ಬಿಹಾರದ ಸಮಸ್ತಿಪುರದ ವಾರಿಸ್‌ನಗರದ ವಾಸಿಯಾಗಿರುವ ಗುಲ್ನಜ್‌ ದೇವಿ ಅವರು ಕೃಷಿ ಕೆಲಸಕ್ಕೆಂದು 35,000 ರೂ. ಸಾಲ ಪಡೆದಿದ್ದರಂತೆ. ಆದರೆ ಆ ಕೃಷಿ ಅವರ ಕೈ ಹಿಡಿದಿಲ್ಲ. ಕೃಷಿಯಿಂದ ಲಾಭ ಬರದ ಹಿನ್ನೆಲೆ ಅವರಿಗೆ ಸಾಲ ತೀರಿಸಲು ಹಣವಿಲ್ಲದಂತಾಗಿದೆ. ಸಾಲದ ಕಂತಾಗಿ 11,000 ರೂ. ಪಾವತಿಸಲೇಬೇಕಾದ ಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: Viral News : ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ! ವಿವೇಕ್‌ ಬಿಂದ್ರಾ ಫೋಟೋ ವೈರಲ್ ಆಗಿದ್ದೇಕೆ?
ಆ ಕಾರಣಕ್ಕಾಗಿ ಗುಲ್ನಜ್‌ ಅವರು ಪತಿ ಕಮಲೇಶ್‌ ರಾಮ್‌ ಮತ್ತು ಇಬ್ಬರು ಮಕ್ಕಳೊಂದಿಗೆ ಸಾದರ್‌ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿನ ರಕ್ತನಿಧಿಯಲ್ಲಿ ರಕ್ತ ಕೊಡುತ್ತೇವೆ, ನಮಗೆ ಅದರ ಬದಲಾಗಿ 11,000 ರೂ. ಕೊಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ಈ ರೀತಿಯಲ್ಲಿ ಮಾಡುವುದಕ್ಕೆ ಆಸ್ಪತ್ರೆಯ ಸಿಬ್ಬಂದಿ ನಿರಾಕರಿಸಿದ್ದಾರೆ. ಗುಲ್ನಜ್‌ ಅವರ ಸುದ್ದಿ ಎಲ್ಲೆಡೆ ಹರಡಿದೆ. ಅವರ ಬಡತನದ ಕುರಿತಾಗಿ ಎಲ್ಲ ಕಡೆಗಳಲ್ಲಿ ಸುದ್ದಿಗಳಾಗಿವೆ.

ಬಿಹಾರದಲ್ಲಿ ಸರ್ಕಾರ ಬಡವರ ಅಭಿವೃದ್ಧಿಗೆಂದೇ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಅದಕ್ಕೆಂದು ಗುಲ್ಜನ್‌ ಅವರು ಅರ್ಜಿ ಸಲ್ಲಿಸಿದರೆ ಅದರತ್ತ ಗಮನ ಕೊಡಲಾಗುವುದು ಎಂದು ವಾರಿಸ್‌ನಗರ ಬಿಡಿಒ ರಂಜಿತ್‌ ಕುಮಾರ್‌ ಅವರು ತಿಳಿಸಿದ್ದಾರೆ.

Exit mobile version