Site icon Vistara News

Viral Video : ಆಗಸದಲ್ಲಿ ಹಾರುವ ಮಹಿಳೆ! ಭಯವೇ ಇಲ್ಲದ ಇವರ ನೆಗೆತ ನೋಡಿ…

skydiving viral video

ಬೆಂಗಳೂರು: ಆಗಸದಲ್ಲಿ ಹೆಲಿಕಾಪ್ಟರ್‌ಗಳಿಂದ ಹಾರಿ ಪ್ಯಾರಾಚೂಟ್‌ ಮೂಲಕ ನೆಲಕ್ಕಿಳಿಯುವವರ ವಿಡಿಯೊವನ್ನು ನೀವು ನೋಡಿರುತ್ತೀರಿ. ಆದರೆ ಈ ರೀತಿ ಪ್ಯಾರಾಚೂಟ್‌ ಹಿಡಿದುಕೊಂಡು ಇಳಿಯುತ್ತಿರುವವರ ಕೈಗಳಿಂದ ತಪ್ಪಿಸಿಕೊಂಡು ಇನ್ನೊಬ್ಬ ಸ್ಕೈಡ್ರೈವರ್‌ ಬೆನ್ನ ಮೇಲೆ ಏರುವವರ ವಿಡಿಯೊವನ್ನು ನೋಡಿದ್ದೀರಾ? ಊಹಿಸಿಕೊಳ್ಳುವುದಕ್ಕೇ ಭಯವಾಗುತ್ತದೆಯಲ್ಲವೇ? ಆದರೆ ಈ ರೀತಿ ಮಹಿಳೆಯೊಬ್ಬಳು ಇತ್ತೀಚೆಗೆ ಮಾಡಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral Video) ಆಗಿದೆ.

ವ್ಯಕ್ತಿಯೊಬ್ಬ ಪ್ಯಾರಾಚೂಟ್‌ ಹಿಡಿದುಕೊಂಡು ಹಾರಾಡುತ್ತಿರುತ್ತಾನೆ. ಆತನ ಕಾಲನ್ನು ಮಹಿಳೆಯೊಬ್ಬಳು ಹಿಡಿದುಕೊಂಡಿರುತ್ತಾಳೆ. ಅವರಿಬ್ಬರು ಇನ್ನೊಬ್ಬ ಸ್ಕೈಡ್ರೈವರ್‌ ಸನಿಹಕ್ಕೆ ಬರುತ್ತಾರೆ. ಆತನ ಬಳಿ ಬಂದಾಕ್ಷಣ ಮಹಿಳೆ ಸೀದಾ ಆತನ ಕಾಲು ಬಿಟ್ಟು ಮತ್ತೊಬ್ಬ ಸ್ಕೈಡ್ರೈವರ್‌ನ ಬೆನ್ನ ಮೇಲೆ ಕುಳಿತುಕೊಳ್ಳುತ್ತಾಳೆ. ಈ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: Viral Video: ಅಮೆರಿಕದ ಹಾದಿ ಬೀದಿಯಲ್ಲಿ ‘ಮುಕ್ಕಾಲ ಮುಕ್ಕಾಬುಲ್ಲಾ’ ಹಾಡಿಗೆ​ ಬಿಂದಾಸ್​ ಸ್ಟೆಪ್ಸ್ ಹಾಕಿದ ಜಡೇಜಾ
ಈ ವಿಡಿಯೊವನ್ನು ಮೊದಲಿಗೆ ಕ್ಯಾಮೆರಾ ಕಂಪನಿಯಾದ insta360ನ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ನಂತರ ಈ ವಿಡಿಯೊವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿ ಸೋಮವಾರದಂದು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊ ಸಾವಿರಾರು ಜನರಿಂದ ವೀಕ್ಷಣೆಗೊಂಡಿದೆ. 5.4 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಅಪ್‌ವೋಟ್‌ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ವಿಡಿಯೊದ ಬಗ್ಗೆ ಕಮೆಂಟ್‌ಗಳನ್ನು ಮಾಡಿದ್ದಾರೆ ಕೂಡ.

Jumping on another skydiver
by u/ImportantEffort4594 in nextfuckinglevel

“ಅಬ್ಬಾ… ಆ ಮಹಿಳೆ ಪ್ಯಾರಾಚೂಟ್‌ ಹಾಕಿಕೊಂಡಿದ್ದಾರೆ ತಾನೇ?”, “ಪ್ಯಾರಾಚೂಟ್‌ನಲ್ಲಿ ಮಹಿಳೆಯನ್ನು ತಂದು ಬಿಟ್ಟು ಹೋಗುವ ವ್ಯಕ್ತಿ ವಾಪಸು ಹೋಗುವುದನ್ನು ನೋಡಿದರೆ ಅದ್ಭುತವೆನಿಸುತ್ತದೆ”, “ಇದು ನಿಜಕ್ಕೂ ಭಯ ತರಿಸುವ ವಿಡಿಯೊ” ಎನ್ನುವಂತಹ ಕಮೆಂಟ್‌ಗಳನ್ನು ಜನರು ಮಾಡಿದ್ದಾರೆ.

ಈ ರೀತಿಯ ಸಾಕಷ್ಟು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್‌ ಆಗುತ್ತಿರುತ್ತವೆ. ಇತ್ತೀಚೆಗೆ ಭಾರತದ ಕ್ರಿಕೆಟ್‌ ಆಟಗಾರ ಜಡೇಜಾ ಅವರು ಅಮೆರಿಕದಲ್ಲಿ ಪ್ರಭುದೇವ್‌ ಅವರ ಮುಕ್ಕಾಲಾ ಮುಕ್ಕಾಬುಲ್ಲಾ ಹಾಡಿಗೆ ನೃತ್ಯ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿತ್ತು. ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದರು. “ಜೀವನ ನಿಮಗೆ ಸೋಮವಾರಗಳನ್ನು ನೀಡಿದಾಗ ನೀವು ಅದನ್ನು ಜಡ್ಡು ರೀತಿಯಲ್ಲಿ ಎಂಜಾಯ್‌ ಮಾಡಿ” ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ವಿಡಿಯೊದ ಕ್ಯಾಪ್ಶನ್‌ನಲ್ಲಿ ಹೇಳಿತ್ತು.

Exit mobile version