Site icon Vistara News

Love Jihad: ಗಂಡ, ಮಕ್ಕಳನ್ನು ಬಿಟ್ಟು ಮುಸ್ಲಿಂ ಪ್ರಿಯಕರನ ಜತೆ ಕುವೈತ್‌ಗೆ ಹಾರಿದ ಹಿಂದೂ ಮಹಿಳೆ!

women went to kuwait with boyfriend

ಜೈಪುರ: ಲವ್‌ ಜಿಹಾದ್‌ ಪ್ರಕರಣಗಳ ಬಗ್ಗೆ ನಾವು ಆಗಾಗ ಕೇಳುತ್ತಿರುತ್ತೇವೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಅಂಜು ಹೆಸರಿನ ಮಹಿಳೆ ಲವ್‌ ಜಿಹಾದ್‌ ಬಲೆಗೆ ಬಿದ್ದು ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಘಟನೆ ನಡೆದಿತ್ತು. ಇದೀಗ ಅದೇ ರೀತಿಯಲ್ಲಿ ರಾಜಸ್ಥಾನದಲ್ಲಿ ಮತ್ತೊಬ್ಬ ಮಹಿಳೆ ಲವ್‌ ಜಿಹಾದ್‌ನಿಂದಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಮುಸ್ಲಿಂ ಪ್ರಿಯಕರನೊಂದಿಗೆ ಕುವೈತ್‌ಗೆ ಹಾರಿರುವ ಘಟನೆ ಹೊರಬಿದ್ದಿದೆ.

ರಾಜಸ್ಥಾನದ ದುಂಗರ್ಪುರ ಜಿಲ್ಲೆಯ ದೀಪಿಕಾ ಪಾಟಿದಾರ್‌ ಈ ರೀತಿ ಕುವೈತ್‌ ಓಡಿ ಹೋಗಿರುವ ಮಹಿಳೆ. ಆಕೆಯ ಪತಿ ಮುಕೇಶ್‌ ಪಾಟಿದರ್‌ ಮುಂಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ದೀಪಿಕಾ ತನ್ನ 11 ವರ್ಷದ ಮತ್ತು 7 ವರ್ಷದ ಇಬ್ಬರು ಮಕ್ಕಳೊಂದಿಗೆ ರಾಜಸ್ಥಾನದಲ್ಲಿ ವಾಸವಿದ್ದಳು. ಆಕೆಗೆ ಆರೋಗ್ಯ ಸಮಸ್ಯೆಯಿದ್ದಿದ್ದರಿಂದ ಆಕೆ ಆಗಾಗ ಗುಜರಾತ್‌ ಅಥವಾ ಉದಯ್‌ಪುರಕ್ಕೆ ಭೇಟಿ ನೀಡುತ್ತಿರುತ್ತಿದ್ದಳು. ಅದೇ ರೀತಿಯಲ್ಲಿ ಜುಲೈ 10ರಂದು ಆರೋಗ್ಯ ಸರಿಯಿಲ್ಲವೆಂದು ಹೇಳಿದ ಆಕೆ ಗುಜರಾತ್‌ನ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದಳು.

ಇದನ್ನೂ ಓದಿ: Viral News : ಈ ಗೊಂಬೆಗಳನ್ನು ಹುಡುಕಿ ಕೊಡುವವರಿಗೆ 6 ಲಕ್ಷ ರೂ. ಬಹುಮಾನ! ನೀವೂ ಟ್ರೈ ಮಾಡಬಹುದು…
ಜುಲೈ 13 ಆದರೂ ಆಕೆ ಮನೆಗೆ ವಾಪಸು ಬಂದಿಲ್ಲ. ಆ ದಿನ ಆಕೆ ಪತಿಗೆ ವಾಟ್ಸ್‌ಆಪ್‌ ಕಾಲ್‌ ಮಾಡಿದ್ದು, ಪತಿಯಿಂದ ತನಗೆ ಬೇಸರವಾಗಿರುವುದರಿಂದಾಗಿ ಮನೆ ಬಿಟ್ಟು ಹೋಗಿರುವುದಾಗಿ ಹೇಳಿದ್ದಾಳೆ. ಗಾಬರಿಗೊಂಡ ಮುಕೇಶ್‌ ಮುಂಬೈನಿಂದ ರಾಜಸ್ಥಾನಕ್ಕೆ ಬಂದು ನೋಡಿದಾಗ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೀಪಿಕಾ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ.

ನಂತರ ಆಕೆ ಬುರ್ಕಾ ಹಾಕಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ದೀಪಿಕಾ ಇರ್ಫಾನ್‌ ಹೈದರ್‌ ಎಂಬ ಹೆಸರಿನ ವ್ಯಕ್ತಿಯನ್ನು ಪ್ರೀತಿಸಿದ್ದು, ಆತನೊಂದಿಗೆ ಓಡಿ ಹೋಗಿರುವ ವಿಚಾರ ಹೊರಬಿದ್ದಿದೆ. ಗುಜರಾತ್‌ನ ಸಬರ್ಕಾಂತಾದಲ್ಲಿ ಅವರಿಬ್ಬರು ಆಗಾಗ ಭೇಟಿ ಮಾಡುತ್ತಿದ್ದ ವಿಚಾರವೂ ತಿಳಿದುಬಂದಿದೆ. ಹಾಗೆಯೇ ಅವರಿಬ್ಬರು ಭಾರತವನ್ನು ಬಿಟ್ಟು ಕುವೈತ್‌ಗೆ ಓಡಿ ಹೋಗಿರುವ ವಿಚಾರ ಗೊತ್ತಾಗಿದೆ. ಮುಕೇಶ್‌ ಈ ವಿಚಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Viral Video : ಮಗಳನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿದ್ದ ತಂದೆಗೇ ಗುಂಡಿಟ್ಟ ದುಷ್ಕರ್ಮಿಗಳು!
ಇತ್ತೀಚೆಗೆ ರಾಜಸ್ಥಾನದಲ್ಲಿ ಇಂಥದ್ದೇ ಮತ್ತೊಂದು ಪ್ರಕರಣ ದಾಖಲಾಗಿತ್ತು. ಮದುವೆಯಾಗಿ ಎರಡು ಮಕ್ಕಳಿರುವ ಅಂಜು ಹೆಸರಿನ ಮಹಿಳೆ ಪಾಕಿಸ್ತಾನದ ನಸ್ರುಲ್ಲಾ ಹೆಸರಿನ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಪತಿಗೆ ಜೈಪುರದಲ್ಲಿ ಸ್ನೇಹಿತರೊಬ್ಬರನ್ನು ಭೇಟಿ ಮಾಡಬೇಕು ಎಂದು ಹೊರಟ ಆಕೆ ಜುಲೈ 21ರಂದು ಭಾರತ-ಪಾಕಿಸ್ತಾನದ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಆಕೆ ತನ್ನ ಕಚೇರಿಯಲ್ಲಿ ಗೋವಾದಲ್ಲಿರುವ ಸಹೋದರಿ ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದಳು ಎಂದು ವರದಿಯಿದೆ.

Exit mobile version