Site icon Vistara News

VISTARA TOP 10 NEWS : ಕರ್ನಾಟಕಕ್ಕೆ ಮತ್ತೆ ಕಾವೇರಿ ಬರೆ, ಹಳೆಯ ಸಂಸತ್ ಭವನಕ್ಕೆ ವಿದಾಯ, ಮಹಿಳಾ ಮೀಸಲಿಗೆ ಮುನ್ನುಡಿ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Top10 news

1. ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್‌ ನೀರು ಬಿಡಲು CWMA ಆದೇಶ!
ನವ ದೆಹಲಿ: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಮೊದಲೇ ನೀರಿಲ್ಲ ಎಂದು ಪರಿತಪಿಸುತ್ತಿರುವ ಹೊತ್ತಿನಲ್ಲಿ ಮತ್ತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) ಆದೇಶಿಸಿದೆ. ಮುಂದಿನ 15 ದಿನಗಳ ವರೆಗೆ ಈ ಆದೇಶ ಚಾಲ್ತಿಯಲ್ಲಿರಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕಾವೇರಿ ಸಂಬಂಧ ಯಾವುದೇ ಕಾರಣಕ್ಕೂ ಮೋದಿಯನ್ನು ಭೇಟಿಯಾಗಲ್ಲವೆಂದ ಎಚ್.ಡಿ. ದೇವೇಗೌಡ

2. 75 ವರ್ಷಗಳ ಸಂಸತ್‌ ಹಾದಿ ನೆನೆದ ಪ್ರಧಾನಿ, ನೆಹರೂ ಹೊಗಳುತ್ತಲೇ ಕಾಂಗ್ರೆಸ್‌ಗೆ ಕುಟುಕಿದ ಮೋದಿ
ನವದೆಹಲಿ: ಹಳೆಯ ಸಂಸತ್‌ ಸಂಸತ್‌ ಭವನದಲ್ಲಿ (Special Parliament Session) ಸೋಮವಾರ ಕೊನೆಯ ಅಧಿವೇಶನದ ದಿನವಾದ ಕಾರಣ ನರೇಂದ್ರ ಮೋದಿ ಅವರು ಹಲವರಿಗೆ ಧನ್ಯವಾದ ತಿಳಿಸಿದರು. ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ಅವರು ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ ಸೇರಿ ಹಲವು ವ್ಯಕ್ತಿಗಳನ್ನು ಸ್ಮರಿಸಿದರು. ಹಿಂದಿನ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿ ಅವರ ಕಾರ್ಯವನ್ನು ಶ್ಲಾಘಿಸುತ್ತಲೇ, ತುರ್ತು ಪರಿಸ್ಥಿತಿ ಜಾರಿಯಾಗಿದ್ದೂ ಇದೇ ಸಂಸತ್‌ನಲ್ಲಿ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಕುಟುಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಸಂಸತ್ತಿನ ಮೆಟ್ಟಿಲಿಗೆ ನಾನೇಕೆ ನಮಿಸಿದೆ? ಭಾವುಕರಾದ ಮೋದಿ ಹೇಳಿದ್ದಿಷ್ಟು…

3. ವಿಶೇಷ ಸಂಸತ್ ಅಧಿವೇಶನಲ್ಲಿ ಮಹಿಳಾ ಮೀಸಲು ವಿಧೇಯಕ ಮಂಡನೆ! ಸಂಪುಟ ಸಭೆಯಲ್ಲಿ ನಿರ್ಧಾರ?
ಲೋಕಸಭೆ (Lok Sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ (State Assembly) ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ವಿಧೇಯಕವನ್ನು (Women Reservation Bill) ಕೇಂದ್ರ ಸರ್ಕಾರವು ವಿಶೇಷ ಸಂಸತ್ ಅಧಿವೇಶನ ಮಂಡಿಸುವ ಬಗ್ಗೆ, ಸೋಮವಾರ ಸಂಜೆ ನಡೆದ ಸಚಿವ ಸಂಪುಟದಲ್ಲಿ (Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸಚಿವ ಸಂಪುಟ ಸಭೆ ನಡೆದ ಸಾಮಾನ್ಯವಾಗಿ ಕೇಂದ್ರ ಸಚಿವರು, ಸಂಪುಟ ತೀರ್ಮಾನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ, ಸೋಮವಾರ ಆ ರೀತಿಯ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿಲ್ಲ. ಇದರೊಂದಿಗೆ ವಿಶೇಷ ಸಂಸತ್ ಅಧಿವೇಶನದ ಅಜೆಂಡಾ ಬಗೆಗಿರುವ ಕುತೂಹಲವನ್ನು ಹಾಗೆ ಕಾಯ್ದಿಟ್ಟುಕೊಳ್ಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

4. ಈ ಡೀಲ್‌ ನನಗೆ ಮೊದಲೇ ಗೊತ್ತಿತ್ತು ಎಂದ ಚಕ್ರವರ್ತಿ ಸೂಲಿಬೆಲೆ, ಹಾಗಿದ್ರೆ ಅವರ‍್ಯಾಕೆ ತಡೆದಿಲ್ಲ?
ಬೆಂಗಳೂರು: ʻʻಹೌದು, ಈ ವಿಷಯ ನನಗೆ ಮೊದಲೇ ಗೊತ್ತಿತ್ತುʼʼ ಎಂದು ಗೋವಿಂದ ಪೂಜಾರಿ (Govinda Poojari) ವಂಚನೆ ಪ್ರಕರಣದ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಚಕ್ರವರ್ತಿ ಸೂಲಿಬೆಲೆ (Chakravarty Soolibele). ನನಗೆ ಉದ್ಯಮಿ ಗೋವಿಂದ ಪೂಜಾರಿ ಅವರು ಚೆನ್ನಾಗಿ ಗೊತ್ತು, ನನ್ನ ಆತ್ಮೀಯರು ಅವರು. ಈ ರೀತಿಯ ವ್ಯವಹಾರ ಯಾಕೆ ಮಾಡಿದಿರಿ ಎಂದು ನಾನೇ ಅವರಿಗೆ ಬೈದಿದ್ದೆ ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಚೈತ್ರಾ ವಂಚನೆ ಸಿ.ಟಿ. ರವಿಗೆ ಮೊದಲೇ ಗೊತ್ತಿತ್ತಾ? ಸೂಲಿಬೆಲೆ ಹೇಳಿದಾಗ ಪ್ರತಿಕ್ರಿಯೆ ಏನಿತ್ತು?
ಮೂರುವರೆ ದಿನಗಳ ಚೈತ್ರಾ ನಾಟಕ ಬಂದ್‌, ಆಸ್ಪತ್ರೆಯಿಂದ ಡಿಸ್ಚಾರ್ಜ್‌; ಇನ್ನು ಸಿಸಿಬಿ ಗ್ರಿಲ್‌ ಶುರು!

5. ಪ್ರಜ್ವಲ್‌ ರೇವಣ್ಣಗೆ ಸುಪ್ರೀಂಕೋರ್ಟ್ ರಿಲೀಫ್‌; ಸಂಸದ ಸ್ಥಾನಕ್ಕೆ ಚ್ಯುತಿಯಿಲ್ಲ, ಚುನಾವಣೆ ಸ್ಪರ್ಧೆಗೂ ಅಡ್ಡಿಇಲ್ಲ
ಬೆಂಗಳೂರು: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ (Parlimament Elections 2019) ಕಣಕ್ಕಿಳಿಯುವ ವೇಳೆ ಚುನಾವಣಾ ಆಯೋಗಕ್ಕೆ (Election Commission) ಸುಳ್ಳು ಮಾಹಿತಿ (False Information) ನೀಡಿದ್ದಾರೆಂಬ ಆರೋಪ ಹೊತ್ತು ಸಂಸತ್‌ ಸ್ಥಾನದಿಂದ ಅನರ್ಹರಾಗಿದ್ದ (Disqaulification from parliament Membership) ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassana MP Prajwal Revanna) ಅವರಿಗೆ ಸುಪ್ರೀಂಕೋರ್ಟ್‌ ಬಿಗ್‌ ರಿಲೀಫ್‌ (Supreme Court big relief) ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. ಇಂಡಿಯಾ ಒಕ್ಕೂಟದಲ್ಲಿ ಬಿಕ್ಕಟ್ಟು; ಟಿಎಂಸಿ, ಕಾಂಗ್ರೆಸ್‌ ಜತೆ ಮೈತ್ರಿಗೆ ಸಿಪಿಎಂ ನಕಾರ
ಸನಾತನ ಧರ್ಮದ (Sanatana Dharma) ನಿರ್ಮೂಲನೆ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ವಿಚಾರದಲ್ಲಿ ಇಂಡಿಯಾ ಒಕ್ಕೂಟದಲ್ಲಿ (INDIA Bloc) ಭಿನ್ನಾಭಿಪ್ರಾಯ ಮೂಡಿದ ಬೆನ್ನಲ್ಲೇ, ಮೈತ್ರಿ ವಿಚಾರಕ್ಕೂ ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್‌ ಹಾಗೂ ಟಿಎಂಸಿ ಜತೆ ಮೈತ್ರಿ ಮಾಡಿಕೊಳ್ಳಲು ಸಿಪಿಎಂಗೆ ಆಸಕ್ತಿ ಇಲ್ಲ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

7. ಬಿಜೆಪಿ ಜತೆ ಎಐಎಡಿಎಂಕೆ ದೋಸ್ತಿ ಖತಂ! ಇದಕ್ಕೆಲ್ಲಾ ಅಣ್ಣಾಮಲೈ ಕಾರಣ

8. ಯಮ ನಿಮಗಾಗಿ ಕಾಯುತ್ತಿರುತ್ತಾನೆ; ಕ್ರಿಮಿನಲ್‌ಗಳಿಗೆ ಯೋಗಿ ಖಡಕ್ ವಾರ್ನಿಂಗ್

9. ಗೋಕರ್ಣ ಸಮುದ್ರದಲ್ಲಿ ಮುಳುಗುತ್ತಿದ್ದ ಬೆಂಗಳೂರಿನ ಐವರು ಪ್ರವಾಸಿಗರ ರಕ್ಷಣೆ

10. ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಗೆ ತಂಡ ಪ್ರಕಟ; ಯಾರಿಗೆಲ್ಲ ಸಿಕ್ಕಿತು ಚಾನ್ಸ್​?

Exit mobile version