Site icon Vistara News

VISTARA TOP 10 NEWS: ಚುನಾವಣೆಗೂ ಮುನ್ನವೇ CAA,‌ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ ಇತ್ಯಾದಿ ಸುದ್ದಿ

vistara Top ten

1. Lok Sabha Election 2024: ಲೋಕಸಭೆ ಚುನಾವಣೆಗೂ ಮುನ್ನವೇ ಸಿಎಎ ಜಾರಿ: ಅಮಿತ್ ಶಾ
2019ರಲ್ಲಿ ಜಾರಿಗೊಳಿಸಲಾದ ಪೌರತ್ವ ತಿದ್ದುಪಡಿ ಕಾಯಿದೆಯನ್ನು (ಸಿಎಎ) ಈ ನಿಟ್ಟಿನಲ್ಲಿ ಅಗತ್ಯವಾದ ನಿಯಮಗಳನ್ನು ಹೊರಡಿಸಿದ ನಂತರ ಲೋಕಸಭೆ ಚುನಾವಣೆಗೂ (Lok Sabha Election 2024) ಮುನ್ನವೇ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇದನ್ನೂ ಓದಿ : ಮೈಸೂರಿನಲ್ಲಿ ಅಮಿತ್‌ ಶಾ; ಸುತ್ತೂರು ಜಾತ್ರೆ, ರಾಜಕೀಯ ಯಾತ್ರೆ; ಏನೇನು ನಡೆಯುತ್ತೆ?

2. PM Narendra Modi: ದೇಶಕ್ಕೆ ಒಂದೇ ಸಂವಿಧಾನ ಕನಸು ಸಾಕಾರ! ಇದು 17ನೇ ಲೋಕಸಭೆಯ ಹೆಗ್ಗಳಿಕೆ
17ನೇ ಲೋಕಸಭೆಯ (17th Lok Sabha) ಕೊನೆಯ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಎಲ್ಲ ಸಂಸದರು (MPs) ಹಾಗೂ ಸ್ಪೀಕರ್ (Lok Sabha Speaker) ಅವರಿಗೆ ಅಭಿನಂದನೆ ಸಲ್ಲಿಸಿದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದು ಮಾಡುವ ಬಹು ಮುಖ್ಯ ನಿರ್ಣಯವನ್ನು ಈ ಲೋಕಸಭೆ ಕೈಗೊಂಡಿದೆ ಎಂದು ಮೋದಿ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಗುಂಡಿಕ್ಕಿ ಕೊಲ್ಲಿ ವಿವಾದ: ಡಿ.ಕೆ ಸುರೇಶ್‌ ಮತ್ತು ಈಶ್ವರಪ್ಪ ನಡುವೆ ಭರ್ಜರಿ ಕದನ, ಡಿ.ಕೆ ಶಿವಕುಮಾರ್‌ ಎಚ್ಚರಿಕೆ
ದೇಶ ವಿಭಜನೆಯ ಹೇಳಿಕೆ ನೀಡಿದ ಸಂಸದ ಡಿ.ಕೆ. ಸುರೇಶ್‌ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಹೇಳಿಕೆ ನೀಡಿದ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಮತ್ತು ಇತರರ ನಡುವೆ ಭಾರಿ ಕದನವೇ ನಡೆದಿದೆ. ಮಾತಿನ ಅಬ್ಬರ ಜೋರಾಗಿದೆ.

ಪೂರಕ ವರದಿ 1. ನಾನೇ ನಿಮ್ಮ ಮುಂದೆ ಬರ್ತೇನೆ, ಗುಂಡಿಟ್ಟು ಕೊಲ್ಲಿ; ಈಶ್ವರಪ್ಪಗೆ ಡಿಕೆಸು ಸವಾಲ್‌
ಪೂರಕ ವರದಿ 2. ಗುಂಡಿಕ್ಕಿ ಕೊಲ್ಲಿ ಎಂದಿಲ್ಲ, ಕಾನೂನು ಬೇಕು ಅಂದೆ ಅಷ್ಟೆ; ಮೆತ್ತಗಾದ ಈಶ್ವರಪ್ಪ
ಪೂರಕ ವರದಿ 3. ನಮ್ಮ ಸುದ್ದಿಗೆ ಬಂದವರ ಸೆಟ್ಲ್‌ ಮೆಂಟ್‌ ಮಾಡಿದ್ದೇವೆ, ಈಶ್ವರಪ್ಪಗೆ ಡಿಕೆಶಿ ಎಚ್ಚರಿಕೆ

4.INDIA Bloc: ಪಂಜಾಬ್‌, ಚಂಡೀಗಢದಲ್ಲಿ ಸ್ವತಂತ್ರ ಸ್ಪರ್ಧೆ ಎಂದ ಕೇಜ್ರಿವಾಲ್; ಇಂಡಿಯಾ ಕೂಟ ಛಿದ್ರ
ಕಾಂಗ್ರೆಸ್ (Congress Party) ನೇತೃತ್ವದ ಇಂಡಿಯಾ ಕೂಟಕ್ಕೆ (INDIA Bloc) ಮತ್ತೊಂದು ಹೊಡೆತ ಬಿದ್ದಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸ್ವತಂತ್ರ ಸ್ಪರ್ಧೆಯನ್ನು ಘೋಷಿಸಿದ ಬೆನ್ನಲ್ಲೇ ಆಪ್ (aam aadmi party) ನಾಯಕ ಹಾಗೂ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (CM Arvind Kejriwal) ಅವರು ಕೂಡ, ಚಂಡೀಗಢ ಹಾಗೂ ಪಂಜಾಬ್‌ನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.Bengaluru News : 6 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ; ತ್ರಿಬಲ್‌ ರೈಡಿಂಗ್‌ಗೆ ಬ್ರೇಕ್‌!
ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic police) ಶಾಲೆಗಳ ಬಳಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿದ್ದರು. ಈ ವೇಳೆ ಮಕ್ಕಳು ಹೆಲ್ಮೆಟ್ ಧರಿಸದೇ (Helmet Awareness) ಬಂದ ಹಿನ್ನೆಲೆಯಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಆದೇಶವನ್ನು ಹೊರಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6.ವಿಸ್ತಾರ ಅಂಕಣ: ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ
ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ ಎನ್ನುವುದು ವಿಸ್ತಾರ ನ್ಯೂಸ್‌ ನಿರ್ದೇಶಕರಾದ ಹರಿಪ್ರಕಾಶ್‌ ಕೋಣೆಮನೆ ಅವರ ಅಭಿಪ್ರಾಯ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7.EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್‌ ಬಡ್ಡಿ ದರ ಶೇ.8.25ಕ್ಕೆ ಏರಿಕೆ
ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.25ಕ್ಕೆ ಹೆಚ್ಚಿಸಿದೆ (EPF Interest Rate Hike). ಇದು ಮೂರು ವರ್ಷಗಳ ಗರಿಷ್ಠ ಮಟ್ಟವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಪಾಕ್‌ ಸೇನೆಯಿಂದ ಇಮ್ರಾನ್ ಹತ್ಯೆ ಸಂಚು? ಸರ್ಕಾರ ರಚನೆಗೆ ನವಾಜ್‌ ಷರೀಫ್-‌ ಬಿಲಾವಲ್‌ ಒಪ್ಪಂದ
ಪಾಕಿಸ್ತಾನದ ಚುನಾವಣೆ ಫಲಿತಾಂಶ (Pakistan Election result) ಪೂರ್ಣವಾಗಿ ಹೊರಬೀಳುವ ಮುನ್ನವೇ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರನ್ನು ಕೊಲ್ಲಲು ಪಾಕ್‌ ಮಿಲಿಟರಿ ಸಂಚು ನಡೆಸಿದೆ ಎಂದು ಇಮ್ರಾನ್‌ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.Varthur Santhosh: ವರ್ತೂರ್‌ ಸಂತೋಷ್‌ಗೆ ಸನ್ಮಾನ ಮಾಡಿದ ಪಿ ಎಸ್ ಐ ರಾತ್ರೋರಾತ್ರಿ ವರ್ಗಾವಣೆ!
ಬಿಗ್‌ ಬಾಸ್‌ ಸೀಸನ್‌ 10ರ ನಾಲ್ಕನೇ ರನ್ನರ್‌ ಅಪ್‌ ವರ್ತೂರ್‌ ಸಂತೋಷ್‌ (Varthur Santhosh) ಒಂದಲ್ಲ ಒಂದು ಸುದ್ದಿಯಲ್ಲಿ ಇದ್ದಾರೆ. ವರ್ತೂರು ಸಂತೋಷ್ ಅವರಿಗೆ ಪಿಎಸ್‌ಐ ತಿಮ್ಮರಾಯಪ್ಪ ಸನ್ಮಾನ‌ ಮಾಡಿದ್ದರು. ಆದ್ದರಿಂದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ಎಸ್ ಐ ತಿಮ್ಮರಾಯಪ್ಪನನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10.ಅದೃಷ್ಟ ತಂದ ಉಚಿತ ಲಾಟರಿ ಟಿಕೆಟ್, ಕೇರಳದವನಿಗೆ 33 ಕೋಟಿ ರೂ. ಜಾಕ್‌ಪಾಟ್!
ಯುಎಇನಲ್ಲಿ (UAE) ವಾಸಿಸುತ್ತಿರುವ ಭಾರತೀಯ (Indian Origin) ಮೂಲದ, ವಲಸಿಗ ರಾಜೀವ್ ಅರಿಕ್ಕಟ್ಟ (Rajeev Arikkatt) ಎಂಬುವವರಿಗೆ 1.5 ಕೋಟಿ ದಿರ್ಹಾಮ್‌ಗಳು ಜಾಕ್‌ಪಾಟ್ ಲಾಟರಿ ಹೊಡೆದಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅದು 33 ಕೋಟಿ ರೂಪಾಯಿಯಾಗುತ್ತದೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version