Site icon Vistara News

VISTARA TOP 10 NEWS : ಕಾವೇರಿ ನೀರು ವಿಷಯದಲ್ಲಿ ಬೇಸರ, ಸಮಾಧಾನ ತಂದ ಎಲ್‌ಪಿಜಿ ದರ.. ಹೀಗೆ ಪ್ರಮುಖ ಸುದ್ದಿಗಳು

Vistara Top 10 News august 29

1.5 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಕಡ್ಡಾಯ; ಕಾವೇರಿ ಪ್ರಾಧಿಕಾರ ಆದೇಶ, ರಾಜ್ಯಕ್ಕೆ ಮತ್ತೆ ಹಿನ್ನಡೆ
ಮುಂದಿನ ಹದಿನೈದು ದಿನಗಳ ಕಾಲ ತಮಿಳುನಾಡಿಗೆ ಪ್ರತಿ ನಿತ್ಯ ಐದು ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ನೀಡಿದ್ದ ಆದೇಶವನ್ನು ಮಂಗಳವಾರ ದಿಲ್ಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ (CWMA) ಸಭೆ ಎತ್ತಿಹಿಡಿದಿದೆ. ಇದರೊಂದಿಗೆ ಕರ್ನಾಟಕ ನೀರು ಬಿಡಲೇಬೇಕಾದ ಒತ್ತಡಕ್ಕೆ ಒಳಗಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ದೇಶದ ಹೆಣ್ಣು ಮಕ್ಕಳಿಗೆ ಮೋದಿ ಭರ್ಜರಿ ಗಿಫ್ಟ್; ಎಲ್ಪಿಜಿ ಸಿಲಿಂಡರ್ ದರ 200 ರೂ. ಇಳಿಕೆ
ದೇಶದ ಹೆಣ್ಣುಮಕ್ಕಳಿಗೆ ಕೇಂದ್ರ ಸರ್ಕಾರವು ರಕ್ಷಾ ಬಂಧನದ ಉಡುಗೊರೆ ನೀಡಿದೆ. ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿದೆ. ಇದರಿಂದ ಕೋಟ್ಯಂತರ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಭಾರಿ ಅನುಕೂಲವಾಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಎಲ್‌ಪಿಜಿ ದರ ಇಳಿಯಿತು, ಕೆಲವೇ ದಿನದಲ್ಲಿ ಪೆಟ್ರೋಲ್ ಕೂಡಾ? ಮೋದಿ ಪ್ಲಾನ್ ಏನು?

3.ಗೃಹ ಲಕ್ಷ್ಮಿ ಯೋಜನೆ ಚಾಲನೆಗೆ ಕೌಂಟ್ ಡೌನ್ ಸ್ಟಾರ್ಟ್; ಬುಧವಾರವೇ ಸಿಗಲಿದೆ 2000 ರೂ.
ಮಹಿಳಾ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್‌ 30ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ಸಿಗಲಿದೆ. ಐತಿಹಾಸಿಕ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಬುಧವಾರವೇ ಗೃಹಿಣಿಯರ ಖಾತೆಗೆ ಹಣ ಬೀಳಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ನೂರು ದಿನದಲ್ಲಿ ದಿಕ್ಕು ತಪ್ಪಿದ ಸರ್ಕಾರದಲ್ಲಿ ಹಗಲು ದರೋಡೆ: ಬಸವರಾಜ ಬೊಮ್ಮಾಯಿ
ನೂರು ದಿನ ಪೂರೈಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Politics) ಮುಂದಿನ ಐದು ವರ್ಷದ ದಿಕ್ಸೂಚಿ ನೀಡುವ ಬದಲು ದಿಕ್ಕು ತಪ್ಪಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರದ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಹಾವೇರಿಯ ಪಟಾಕಿ ಅಂಗಡಿಯಲ್ಲಿ ಅಗ್ನಿ ಅನಾಹುತ; ನಾಲ್ಕು ಕಾರ್ಮಿಕರ ಸಜೀವ ದಹನ
ತಮಿಳುನಾಡಿನ ಶಿವಕಾಶಿಯಿಂದ ವರದಿಯಾಗುತ್ತಿದ್ದ ಪಟಾಕಿ ದುರಂತ (Cracker Tragedy) ನಮ್ಮ ರಾಜ್ಯದ ಹಾವೇರಿಯಲ್ಲೇ (fire incident in Haveri) ಸಂಭವಿಸಿದೆ. ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನಾಲ್ಕು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಬೆಂಗಳೂರಿನಲ್ಲಿ ರಜನೀಕಾಂತ್‌ ಬಿಗ್‌ ಹವಾ; ಬಿಎಂಟಿಸಿ ಡಿಪೋ, ದೇಗುಲಗಳಿಗೆ ದಿಢೀರ್ ಭೇಟಿ
ಬೆಂಗಳೂರಿನಲ್ಲಿ ಓರ್ವ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ (ರಜನಿಕಾಂತ್‌) ಈಗ ದೇಶವೇ ಮೆಚ್ಚುವ ‘ಸೂಪರ್ ಸ್ಟಾರ್’. ಇಂಥ ಸಾಧಕ ತಲೈವ ರಜನಿಕಾಂತ್‌ ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದರು. ಬಿಎಂಟಿಸಿ ಡಿಪೋ -4ಗೆ ದಿಢೀರ್‌ ಭೇಟಿ ನೀಡಿದ ಅವರು ಹಳೆ ನೆನಪುಗಳನ್ನು ಮೆಲುಕು ಹಾಕಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಬುಧವಾರದಿಂದ ಏಷ್ಯಾ ಕಪ್; 15 ದಿನಗಳ ಅಂತರದಲ್ಲಿ 3 ಬಾರಿ ಇಂಡೋ ಪಾಕ್ ಮುಖಾಮುಖಿ
ಕ್ರಿಕೆಟ್‌ ಲೋಕದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಮಹತ್ವದ ಏಷ್ಯಾ ಕಪ್‌ ಟೂರ್ನಿ ಬುಧವಾರದಿಂದ(ಆಗಸ್ಟ್​ 30) ಆರಂಭವಾಗಲಿದೆ. ಇನ್ನೊಂದು ತಿಂಗಳಲ್ಲಿ ಏಕದಿನ ವಿಶ್ವಕಪ್​ ಟೂರ್ನಿ ಆರಂಭವಾಗುವ ನಿಟ್ಟಿನಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫಘಾನಿಸ್ತಾನ ತಂಡಗಳಿಗೆ ಈ ಕೂಟ ಮಹತ್ವದ್ದಾಗಿದೆ. ಅದರಲ್ಲೂ 15 ದಿನಗಳ ಅಂತರದಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗಲಿರುವುದು ಅಭಿಮಾನಿಗಳಲ್ಲಿ ಸಂಭ್ರಮ ತುಂಬಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಮತ್ತೆ ಚೀನಾ ಕ್ಯಾತೆ; ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಎಲ್ಲ ಅದರ ಮ್ಯಾಪ್ ನೊಳಗೆ!
ಚೀನಾ (china) ಸರ್ಕಾರ ಆಗಸ್ಟ್ 28ರಂದು “ಚೀನಾದ ಸ್ಟ್ಯಾಂಡರ್ಡ್ ಮ್ಯಾಪ್‌ʼನ 2023ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತದ ಅರುಣಾಚಲ ಪ್ರದೇಶವನ್ನು (Arunachal pradesh) ಮತ್ತು ಅಕ್ಸಾಯ್ ಚಿನ್ (Aksai chin) ಪ್ರದೇಶಗಳನ್ನೂ ಸಂಪೂರ್ಣವಾಗಿ ಸೇರಿಸಿಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ರಾಜ್ಯಾದ್ಯಂತ ಬುಧವಾರ ವ್ಯಾಪಕ ಮೇಲೆ ಸಾಧ್ಯತೆ, ನಿಮ್ಮೂರಲ್ಲಿ ಮಳೆ ಇದೆಯಾ?
ಮುಂದಿನ 24 ಗಂಟೆಯೊಳಗೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ (Rain News) ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ತುಂತುರು ಮಳೆಯ (Weather report) ಸಿಂಚನವಾಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. 14ರ ಬಾಲಕನಿಗೆ ಸರ್ಪ ಕಾಟ; ಎರಡು ತಿಂಗಳಲ್ಲಿ 9 ಬಾರಿ ಕಡಿತ, ಹಾವು ಬೇರೆಯವರಿಗೆ ಕಾಣಲ್ಲ!
14 ವರ್ಷದ ಬಾಲಕನೊಬ್ಬನಿಗೆ ಸರ್ಪವೊಂದು ಎಡೆಬಿಡದೆ ಕಾಡುತ್ತಿದೆ. ಎಷ್ಟೆಂದರೆ ಎರಡು ತಿಂಗಳಲ್ಲಿ ಒಂಬತ್ತು ಬಾರಿ ಹಾವು ಕಡಿದಿದೆ (Snake bites 9 times in two months). ದೊಡ್ಡ ಗಾತ್ರದ ಹಾವು ಇದಾಗಿದ್ದರೂ ಹುಡುಗನಿಗೆ ಒಂಬತ್ತು ಬಾರಿ ಕಡಿದಾಗಲೂ ಏನೂ ಆಗಿಲ್ಲ, ಜೀವಕ್ಕೆ ತೊಂದರೆ ಆಗಿಲ್ಲ. ವಿಶೇಷವೆಂದರೆ ಹೀಗೆ ಕಡಿಯೋ ಹಾವು ಅವನಿಗೆ ಬಿಟ್ಟರೆ ಬೇರೆ ಯಾರಿಗೂ ಕಾಣಿಸಿಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version