1.ಡಿಕೆಶಿ ಸಿಬಿಐ ತನಿಖೆ ವಾಪಸ್ ನಿರ್ಧಾರ ಸಮರ್ಥಿಸಿದ ಸರ್ಕಾರ: ಕೋರ್ಟ್ ತೀರ್ಮಾನಿಸಲಿ ಎಂದ ಸಿಎಂ
ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಅಕ್ರಮ ಸಂಪಾದನೆಗೆ ಸಂಬಂಧಪಟ್ಟಂತೆ 2019ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿದ್ದ ಕೇಸ್ ಅನ್ನು ರಾಜ್ಯ ಸರ್ಕಾರ ಗುರುವಾರ ವಾಪಸ್ ಪಡೆದಿರುವ ನಿರ್ಧಾರವನ್ನು ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಸಮರ್ಥಿಸಿಕೊಂಡಿ ದ್ದಾರೆ. ಮತ್ತು ಅದರ ಕಾನೂನಿನ ಅಂಶಗಳನ್ನು ವಿವರಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ : ಸಿಬಿಐ ಪ್ರಕರಣ ವಾಪಸ್; ನಾವ್ ಮಾಡಿದ್ದೇ ಸರಿ: ಬಿಜೆಪಿ ಕ್ರಮ ಇಲ್ಲೀಗಲ್ ಎಂದ ಸಿಎಂ!
2. ಸಂಪುಟ ನಿರ್ಧಾರದ ವಿರುದ್ಧ ಭುಗಿಲೆದ್ದ ವಿಪಕ್ಷ: ಸರ್ಕಾರದ ವಿರುದ್ಧ ನಾಳೆ ಬಿಜೆಪಿ ನಾಯಕರ ಪ್ರತಿಭಟನೆ
ಡಿ.ಕೆ. ಶಿವಕುಮಾರ್ (DK Shivakumar) ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು (CBI Case) ರದ್ದು ಮಾಡುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ವಿರೋಧಿಸಿ ಶನಿವಾರ (ನ. 25) ಬೆಳಗ್ಗೆ 10 ಗಂಟೆಗೆ ಬಿಜೆಪಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಅಲ್ಲದೆ, ಈ ಪ್ರಕರಣವನ್ನು ವಿಧಾನ ಮಂಡಲ ಅಧಿವೇಶನದಲ್ಲಿಯೂ ಹೋರಾಟ ನಡೆಸಲು ಮುಂದಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ರಾಜಧಾನಿ ಬೆಂಗಳೂರಲ್ಲಿ ಕಂಬಳ ಕಲರವ- ಕೋಣಗಳ ಓಟದ ಸ್ಪರ್ಧೆಗೆ ಅರಮನೆ ಮೈದಾನ ಸಜ್ಜು ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace ground) ಕೋಣಗಳ ದರ್ಬಾರ್ ಶುರುವಾಗಿದೆ. ನವೆಂಬರ್ 25 ಮತ್ತು 26ರಂದು ನಡೆಯುವ ಬೆಂಗಳೂರು ಕಂಬಳಕ್ಕಾಗಿ (Bangalore Kambala) ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಹಬ್ಬದ ವಾತಾವರಣ ಮೈದಳೆದಿದೆ. ಕರಾವಳಿಯ ಜಾನಪದ ಮತ್ತು ಸಾಂಪ್ರದಾಯಿಕ ಕ್ರೀಡೆಯನ್ನು ರಾಜಧಾನಿಯ ಮೂಲಕ ಇಡೀ ಜಗತ್ತಿಗೆ ತೋರಿಸುವ ಈ ಪ್ರಯತ್ನಕ್ಕೆ ಅದ್ಧೂರಿ ಮುನ್ನುಡಿ ಬರೆಯಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ 1: Bangalore Kambala : ಕ್ರಿಕೆಟ್‌ಗಿಂತಲೂ ಮೊದಲೇ ಶುರುವಾಗಿತ್ತು DAY and NIGHT ಕಂಬಳ!
ಪೂರಕ ವರದಿ 2: ಕಂಬಳ ನೋಡಲು ಹೋಗ್ತೀರಾ? ಹಾಗಿದ್ದರೆ ಈ ಸಂಗತಿಗಳನ್ನು ತಿಳಿದುಕೊಳ್ಳಿ
ಪೂರಕ ವರದಿ 3: ಬೆಂಗಳೂರಿಗೆ ಬಂದ ಕೋಣಗಳಿಗೆ ಕುಡಿಯಲು ಮಂಗಳೂರಿನಿಂದಲೇ ನೀರು; ಯಾಕೆ?
4. ಬೆಂಗಳೂರಿಗರೇ ಆಪತ್ತು ಬಂತಾ? ಈ ನಂಬರ್‌ಗೆ ಕರೆ ಮಾಡಿ; 7 ನಿಮಿಷಕ್ಕೆ ಪೊಲೀಸರು ಹಾಜರ್!
ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ನಿರ್ಭಯಾ ನಿಧಿಯಡಿ ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ. ಇದರ ವಿಶೇಷವೆಂದರೆ ಇಂತಹ ಆಪತ್ತು ಎದುರಾದಾಗ ಸಂತ್ರಸ್ತರು ಕಮಾಂಡ್ ಸೆಂಟರ್ ಸಹಾಯವಾಣಿಗೆ ಕರೆ ಮಾಡಿದರೆ ಕೇವಲ ಏಳು ನಿಮಿಷದಲ್ಲಿ ಪೊಲೀಸರು ಹಾಜರಿರುತ್ತಾರೆ.
ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5.Jio Airfiber: ಕರ್ನಾಟಕದ 54 ಪಟ್ಟಣಗಳಲ್ಲಿ ರಿಲಯನ್ಸ್ ಜಿಯೋ ಏರ್ ಫೈಬರ್ ಸೇವೆ
ವಿಶ್ವದ ಅತಿದೊಡ್ಡ ಖಾಸಗಿ ಮೊಬೈಲ್ ಡೇಟಾ ನೆಟ್‌ವರ್ಕ್ ಆಗಿರುವ ರಿಲಯನ್ಸ್ ಜಿಯೋ (Reliance Jio) ಇಂದು ಕರ್ನಾಟಕದ 54 ಪಟ್ಟಣಗಳಲ್ಲಿ ಗೃಹ ಮನರಂಜನೆ, ಸ್ಮಾರ್ಟ್ ಹೋಮ್ ಸೇವೆಗಳು ಮತ್ತು ಹೈ-ಸ್ಪೀಡ್ ಬ್ರಾಡ್ ಬ್ಯಾಂಡ್‌ಗಾಗಿ (High Speed brad brand) ಅದರ ಸಂಯೋಜಿತ ಎಂಡ್-ಟು-ಎಂಡ್ ಪರಿಹಾರವಾದ ಜಿಯೋ ಏರ್ ಫೈಬರ್ (Jio Airfiber) ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6.Govt Holidays : 2024ರಲ್ಲಿ ಸರ್ಕಾರಿ ನೌಕರರಿಗೆ ಭರ್ಜರಿ ರಜೆ; ಇಲ್ಲಿದೆ ಸರ್ಕಾರಿ ರಜೆಗಳ ಪಟ್ಟಿ
ಕರ್ನಾಟಕ ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ (Govt Holidays) ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಾಗೂ ಮಹಾವೀರ ಜಯಂತಿ, ಎರಡನೇ ಶನಿವಾರದಂದು ಬರುವ ವಿಜಯದಶಮಿ ರಜೆಯನ್ನು ಈ ಪಟ್ಟಿಯಲ್ಲಿ ನಮೂದಿಸಿಲ್ಲ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಅಮೆರಿಕದಲ್ಲಿ ಹಿಂದೂ ಧರ್ಮದ ಜಾಗೃತಿಗೆ 4 ದಶಲಕ್ಷ ಡಾಲರ್ ಮೀಸಲಿಟ್ಟ ಭಾರತೀಯ ಅಮೇರಿಕನ್ ವೈದ್ಯ! ಭಾರತೀಯ ಅಮೇರಿಕನ್ ವೈದ್ಯರೊಬ್ಬರು (Indian American Doctor) ತಮ್ಮ ಜೀವಮಾನದ ಗಳಿಕೆಯಲ್ಲಿ ಗಣನೀಯ ಪಾಲನ್ನು ಅಮೆರಿಕದಲ್ಲಿ ಹಿಂದೂ ಧರ್ಮದ ಜಾಗೃತಿಗಾಗಿ (Hinduism) ತೆಗೆದಿಟ್ಟಿದ್ದೇನೆ ಎಂದು ಘೋಷಿಸಿದ್ದಾರೆ. ಡಾ. ಮಿಹಿರ್ ಮೇಘಾನಿ (Dr. Mihir Meghani) ಅವರ ಹೆಸರು. 4 ದಶಲಕ್ಷ ಡಾಲರ್ (33.35 ಕೋಟಿ ರೂ.) ಹಣವನ್ನು ಈ ಉದ್ದೇಶಕ್ಕಾಗಿ ಅವರು ಮೀಸಲಿಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8.ಕೋವಿಡ್ ಬಳಿಕ ಚೀನಾಗೆ ಶುರುವಾಯ್ತು ಹೊಸ ವೈರಸ್ ಕಾಟ- ನಿಗೂಢ ಸೋಂಕಿಗೆ ಮಕ್ಕಳು ತತ್ತರ
ಉತ್ತರ ಚೀನಾದ (North China) ಮಕ್ಕಳಲ್ಲಿ ವರದಿಯಾಗಿರುವ ʻಎಚ್9ಎನ್2’(H9N2) ಪ್ರಕರಣಗಳು ಮತ್ತು ಉಸಿರಾಟದ ಕಾಯಿಲೆ (respiratory illness) ಹರಡುವಿಕೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ಚೀನಾದಿಂದ ವರದಿಯಾದ ಹಕ್ಕಿಜ್ವರ ಪ್ರಕರಣ ಮತ್ತು ಉಸಿರಾಟದ ಕಾಯಿಲೆ ಪ್ರಕರಣಗಳಿಂದ ಭಾರತಕ್ಕೆ ಅಪಾಯದ ಸಾಧ್ಯತೆ ಕಡಿಮೆ ಎಂದು ಸರ್ಕಾರವು ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. Navdeep Saini : ಇನ್ಸ್ಟಾ ಬ್ಯೂಟಿಯನ್ನು ಮದುವೆಯಾದ ವೇಗದ ಬೌಲರ್ ನವದೀಪ್ ಸೈನಿ
ಭಾರತದ ವೇಗದ ಬೌಲರ್ ನವದೀಪ್ ಸೈನಿ ಇತ್ತೀಚೆಗೆ ತಮ್ಮ ದೀರ್ಘಕಾಲದ ಗೆಳತಿ ಸ್ವಾತಿ ಅಸ್ತಾನಾ ಅವರನ್ನು ವಿವಾಹವಾಗಿದ್ದಾರೆ. ಕ್ರಿಕೆಟಿಗ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಕೆಲವು ಚಿತ್ರಗಳನ್ನು ಪ್ರಕಟಿಸಿದ್ದಾರೆ. ಸ್ವಾತಿ ಅಸ್ತಾನಾ ಅವರು ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಆಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಕೋಣೆಗೆ ಹಾವು ಬಿಟ್ಟು ಪತ್ನಿ, 2 ವರ್ಷದ ಮಗಳನ್ನು ಕೊಂದ ನೀಚ; ಇಂಥವರನ್ನು ಏನು ಮಾಡಬೇಕು?
‘ಹಾವಿಗೆ ಹಲ್ಲಿನಲ್ಲಿ ಮಾತ್ರ ವಿಷ ಇದ್ದರೆ ಮನುಷ್ಯನಿಗೆ ದೇಹದ ತುಂಬ ವಿಷ ಇರುತ್ತದೆ’ ಎಂಬ ಮಾತಿದೆ. ಈ ಮಾತಿಗೆ ನಿದರ್ಶನ ಎಂಬಂತೆ ಒಡಿಶಾದಲ್ಲಿ (Odisha Man Kills Wife) ವ್ಯಕ್ತಿಯೊಬ್ಬ ಪತ್ನಿ ಹಾಗೂ ಎರಡು ವರ್ಷದ ಮಗಳಿದ್ದ ಕೋಣೆಗೆ ವಿಷಕಾರಿ ಹಾವನ್ನು ಬಿಟ್ಟು, ಇಬ್ಬರನ್ನೂ ಕೊಂದಿದ್ದಾನೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ