Site icon Vistara News

VISTARA TOP 10 NEWS: ಪಾಕಿಸ್ತಾನವನ್ನು ಸದೆಬಡಿದ ವಿರಾಟ್‌ ಭಾರತ, ಆಫ್ರಿಕಾ ಹಾಡಿಹೊಗಳಿದ ಸೂಪರ್‌ ಪವರ್‌ ಭಾರತ

Vistara Top 10 News

1. ವಿರಾಟ್‌, ರಾಹುಲ್‌ ಅಬ್ಬರಕ್ಕೆ ಕಂಗಾಲಾದ ಪಾಕಿಸ್ತಾನ: ಭಾರತಕ್ಕೆ 228 ರನ್‌ ಜಯ
ಕೆ.ಎಲ್‌. ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ವಿರಾಟ್‌ ವೈಭವ ಕಂಡ ಏಷ್ಯಾ ಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 228 ರನ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದೆ. ಸಂಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಭಾರತ ಕೇವಲ 2 ವಿಕೆಟ್‌ ಕಳೆದುಕೊಂಡು ಪೇರಿಸಿದ 356 ರನ್‌ಗಳನ್ನು ಬೆನ್ನಟ್ಟಿದ ಪಾಕಿಸ್ತಾನದ ಆಟ ಕೇವಲ 128 ರನ್‌ಗೆ ಮುಕ್ತಾಯವಾಯಿತು! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ 1: ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆಗಳ ಮೇಲೆ ದಾಖಲೆ ಬರೆದ ವಿರಾಟ್​ ಕೊಹ್ಲಿ
ಪೂರಕ ಸುದ್ದಿ 2: Virat kohli : ಅತಿ ವೇಗದಲ್ಲಿ 13,000 ಏಕದಿನ ರನ್​ಗಳನ್ನು ಬಾರಿಸಿ ದಾಖಲೆ ಬರೆದ ಕೊಹ್ಲಿ

ಪೂರಕ ಸುದ್ದಿ 3: KL Rahul : ಶತಕ ಸಿಡಿಸಿ ಟೀಕಾಕಾರರ ಬಾಯ್ಮುಚ್ಚಿಸಿದ ಕೆ. ಎಲ್​ ರಾಹುಲ್​
ಪೂರಕ ಸುದ್ದಿ 4: ind vs pak : ಕೊಹ್ಲಿ – ರಾಹುಲ್ ಜತೆಯಾಟದಲ್ಲಿ ಸೃಷ್ಟಿಯಾದ ದಾಖಲೆಗಳು ಹಲವು

2. ಅರ್ಧ ದಿನಕ್ಕೇ ಬೆಂಗಳೂರು ಬಂದ್‌ ವಾಪಸ್‌; ಆ ಒಂದು ಬೇಡಿಕೆ ಬಿಟ್ಟು 16ಕ್ಕೆ ಸಚಿವರ ಒಪ್ಪಿಗೆ
ತಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಬಸ್‌, ಆಟೊ, ಟ್ಯಾಕ್ಸಿ, ಶಾಲಾ ವಾಹನಗಳನ್ನು ಒಳಗೊಂಡ 32 ಸಂಘಟನೆಗಳು ಕರೆ ನೀಡಿದ 24 ಗಂಟೆಗಳ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್‌ 14 ಗಂಟೆಗಳಲ್ಲೇ ಮುಕ್ತಾಯಗೊಂಡಿದೆ. ಭಾನುವಾರ ರಾತ್ರಿ ಆರಂಭಗೊಂಡ ಈ ಸಾರಿಗೆ ಬಂದ್‌ ಸೋಮವಾರ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿದ ಭರವಸೆಗಳಿಗೆ ಮನ್ನಣೆ ನೀಡಿ ಅಂತ್ಯಗೊಂಡಿದೆ. ರಾಮಲಿಂಗಾ ರೆಡ್ಡಿ ಅವರು 16 ಬೇಡಿಕೆಗಳನ್ನು ಶೀಘ್ರ ಈಡೇರಿಸುವುದಾಗಿ ತಿಳಿಸಿದರು. ಆದರೆ, ಶಕ್ತಿ ಯೋಜನೆ ರದ್ದು ಮಾಡಬೇಕು ಎಂಬ ಬೇಡಿಕೆ ಸಲ್ಲದೆಂದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ 1: ಅನಿಲ್‌ ಕುಂಬ್ಳೆಗೂ ತಟ್ಟಿದ ಬಂದ್‌ ಬಿಸಿ; ವಿಮಾನ ನಿಲ್ದಾಣದಿಂದ ಬಸ್ಸಿನಲ್ಲೇ ತೆರಳಿದ ಕ್ರಿಕೆಟರ್
ಪೂರಕ ಸುದ್ದಿ 2: ಬಂದ್‌ ವೇಳೆ ಕ್ಯಾಬ್‌, ಬೈಕ್‌ ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆ; ಒಟ್ಟು 13 ಕೇಸ್‌, 12 ಮಂದಿ ಬಂಧನ

3.ಬಿ ಕೆ ಹರಿಪ್ರಸಾದ್‌ ಪರಿಣಾಮ ಎದುರಿಸಬೇಕಾದೀತು; ಮುಗಿಬಿದ್ದ ಕಾಂಗ್ರೆಸ್‌ ಸಚಿವರು
ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿರುವ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ವಿರುದ್ಧ ಈಗ ಕಾಂಗ್ರೆಸ್‌ ಸಚಿವರು ತಿರುಗಿಬಿದ್ದಿದ್ದಾರೆ. ಇಂತಹ ಹೇಳಿಕೆ ನೀಡುತ್ತಿರುವುದರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಸಚಿವ ಎಂ.ಬಿ. ಪಾಟೀಲ್‌ ನೇರ ಎಚ್ಚರಿಕೆಯನ್ನು ನೀಡಿದ್ದಾರೆ. ಹೈಕಮಾಂಡ್‌ ಎಲ್ಲವನ್ನೂ ಗಮನಿಸುತ್ತಿದೆ ಎಂದು ಸಚಿವ ಪರಮೇಶ್ವರ್‌ ಸೂಚ್ಯವಾಗಿ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಬಿ ಕೆ ಹರಿಪ್ರಸಾದ್‌ ವಿರುದ್ಧ ಹೈಕಮಾಂಡ್‌ಗೆ ಸಿದ್ದು ಟೀಂ ದೂರು; ತಣ್ಣಗೆ ಮಾಡಿದರೆ ಖರ್ಗೆ?

4. ಜೆಡಿಎಸ್‌ಗೆ ಕಮಲದಳ ಎಂದು ಮರು ನಾಮಕರಣ ಮಾಡಿದ ಕಾಂಗ್ರೆಸ್‌
ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿ ಗೆದ್ದಿರುವ ಸ್ಥಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವ ಬಿಜೆಪಿ ಈಗ ಜೆಡಿಎಸ್‌ ಜತೆ ಮೈತ್ರಿಗೆ ಮುಂದಾಗಿದೆ. ಜೆಡಿಎಸ್‌ಗೂ ಅಸ್ತಿತ್ವದ ಪ್ರಶ್ನೆ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ಗೆ ಮರು ನಾಮಕರಣ ಮಾಡಿದೆ. ಅದುವೇ ಕಮಲದಳ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಸಿಂಗಲ್‌ ಸೀಟಿಗೂ ದಿಕ್ಕಿಲ್ಲದ ಕಾಂಗ್ರೆಸ್‌ ಕೈಕೈ ಪರಚಿಕೊಳ್ಳುತ್ತಿದೆ; ದಳ ಎದುರೇಟು

5. ಭಾರತ ಈಗ ಜಗತ್ತಿನ ಸೂಪರ್‌ ಪವರ್‌ ರಾಷ್ಟ್ರ; ಆಫ್ರಿಕಾ ಒಕ್ಕೂಟದ ಅಧ್ಯಕ್ಷ ಬಣ್ಣನೆ
ಭಾರತವು ಈಗ ಸೂಪರ್ ಪವರ್‌ ರಾಷ್ಟ್ರವಾಗಿದೆ ಮತ್ತು ಚೀನಾಕ್ಕಿಂತಲೂ ಮುಂದಿದೆ ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ನಡೆದ ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ (African Union) ಅನ್ನು ಜಿ20ನ ಶಾಶ್ವತ ಸದಸ್ಯ ರಾಷ್ಟ್ರವಾಗಿ ಘೋಷಿಸಲಾಯಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ 1: ಕೆನಡಾದಲ್ಲಿನ ಸಿಖ್‌ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮ: ಕೆನಡಾ ಪ್ರಧಾನಿ ಭರವಸೆ

6. ವಿಶೇಷ ಅಧಿವೇಶನದಲ್ಲಿ ಇಂಡಿಯಾ ಭಾರತ್‌ ಆಗೋದು ನಿಜಾನಾ?: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದೇನು?
ಸೆಪ್ಟೆಂಬರ್‌ 18ರಂದು ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಭಾರತ್‌ ಆಗಿ ಬದಲಾಗುವ ವಿಚಾರ ಚರ್ಚೆಗೆ ಬರುವುದು ನಿಜವೇ ಎಂಬ ಪ್ರಶ್ನೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಉತ್ತರ ನೀಡಿದ್ದಾರೆ. ಅವರು ಹೇಳಿದ್ದೇನೆಂದರೆ.. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಪ್ರಜ್ವಲ್‌ ರೇವಣ್ಣಗೆ ಬಿಗ್‌ ಟ್ರಬಲ್‌; ಅನರ್ಹತೆ ಆದೇಶ ತಡೆ ಕೊಡಲು ಹೈಕೋರ್ಟ್‌ ನಕಾರ
ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್‌ ಸಲ್ಲಿಸಿದ ಪ್ರಕರಣದಲ್ಲಿ ಅನರ್ಹಗೊಂಡಿರುವ ಪ್ರಜ್ವಲ್‌ ರೇವಣ್ಣ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ಆದೇಶಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲ, ಐಷಾರಾಮಿಗೆ ಬರವಿಲ್ಲ; ಸಚಿವರ ಕೊಠಡಿಗಳ ಬಣ್ಣಕ್ಕೆ 7 ಕೋಟಿ ರೂ. ಖರ್ಚು
ರಾಜ್ಯ ಬಜೆಟ್‌ನ ಬಹುಪಾಲು ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಮೀಸಲಿಟ್ಟಿರುವ ಸಿದ್ದರಾಮಯ್ಯ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಬೇಡಿ ಎಂದು ಶಾಸಕರು, ಸಚಿವರಿಗೆ ಸೂಚಿಸಿದೆ. ಆದರೆ, ಅಭಿವೃದ್ಧಿಗೆ ಹಣವಿಲ್ಲದ ‘ಗ್ಯಾರಂಟಿ’ ಸರ್ಕಾರದಲ್ಲಿ ಸಚಿವರಿಗೆ ಸಿಗುತ್ತಿರುವ ಐಷಾರಾಮಿ ಸೌಲಭ್ಯಗಳಿಗೇನೂ ಕೊರತೆಯಿಲ್ಲ. ರಾಜ್ಯದ ಎಲ್ಲ ಸಚಿವರಿಗೆ ಐಷಾರಾಮಿ ಇನೋವಾ ಕಾರು ಖರೀದಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ 34 ಸಚಿವರ ಕೊಠಡಿಗಳಿಗೆ ಸುಣ್ಣ-ಬಣ್ಣ, ಪೀಠೋಪಕರಣಗಳ ಖರೀದಿಗೆ 7.20 ಕೋಟಿ ರೂ. ಖರ್ಚು ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. 2000 ಪ್ರೊಬೆಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೇ ದಿನ
ಸ್ಟೇಟ್ ಆಫ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಖಾಲಿ ಇರುವ 2000 ಪ್ರೊಬೇಷನರಿ ಹುದ್ದೆಗಳಗ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ(SBI PO Recruitment 2023). ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 7ರಿಂದ ಆರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಕಿಚ್ಚ ಸುದೀಪ್‌ 50ನೇ ಸಿನಿಮಾಗೆ ಆಕ್ಷನ್‌ ಕಟ್‌ ಹೇಳ್ತಾರಾ ರಿಷಭ್‌ ಶೆಟ್ಟಿ?
ಕಿಚ್ಚ ಸುದೀಪ್‌ (Kichcha Sudeep) ಅವರ ಕೈಯಲ್ಲಿ ಈಗಾಗಲೇ ಹಲವಾರು ಸಿನಿಮಾಗಳಿವೆ. ಈಗ ನಿರ್ಮಾಣ ಹಂತದಲ್ಲಿರುವುದು 46ನೇ ಸಿನಿಮಾ. ಈಗಲೇ ಒಂದು ಸುದ್ದಿ ಹರಡುತ್ತಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕಿಚ್ಚ ಸುದೀಪ್‌ ಅವರ 50ನೇ ಸಿನಿಮಾ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ರಿಷಬ್‌ ಆಗಲಿ ಕಿಚ್ಚ ಸುದೀಪ್‌ ಆಗಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version